ಜನನಿಬಿಡ ಪ್ರದೇಶಗಳಿಂದಲೇ ಬೈಕ್​ಗಳನ್ನು ಎಗರಿಸುತ್ತಿದ್ದ ಖತರ್ನಾಕ್​ ಖದೀಮ ಅರೆಸ್ಟ್​

ಷಣ್ಮುಖ ಕದ್ದ ಬೈಕ್​ಗಳನ್ನು ಎಷ್ಟು ಬೆಲೆ ಸಿಗತ್ತೋ ಅಷ್ಟಕ್ಕೆ ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಸಾರಾಯಿ ಕುಡಿಯುವುದು, ಜೂಜಾಟದಂತ ದುಶ್ಚಟಗಳನ್ನು ಮಾಡುತ್ತಿದ್ದ.

ಜನನಿಬಿಡ ಪ್ರದೇಶಗಳಿಂದಲೇ ಬೈಕ್​ಗಳನ್ನು ಎಗರಿಸುತ್ತಿದ್ದ ಖತರ್ನಾಕ್​ ಖದೀಮ ಅರೆಸ್ಟ್​
ಆರೋಪಿ ಷಣ್ಮುಖ ಮತ್ತು ಆತ ಕದ್ದ ಬೈಕ್​ಗಳು
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Dec 21, 2020 | 10:39 AM

ಹಾವೇರಿ: ಜನನಿಬಿಡ ಪ್ರದೇಶದಿಂದಲೇ ರಾಜಾರೋಷವಾಗಿ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳನನ್ನು ರಾಣೆಬೆನ್ನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಷಣ್ಮುಖ ಬಂಧಿತ ಕಳ್ಳ.. ಈತ ದಾವಣೆಗೆರೆ ತಾಲೂಕಿನ ಕುರ್ಕಿ ಗ್ರಾಮದವನು ಎನ್ನಲಾಗಿದೆ.

ಜನರಿರುವ ಪ್ರದೇಶವೇ ಟಾರ್ಗೆಟ್​ ನಿರ್ಜನ ಪ್ರದೇಶದಲ್ಲಿ ಇರುವ ವಾಹನಗಳನ್ನು ಕಳುವು ಮಾಡುವುದು ಸಾಮಾನ್ಯ. ಆದರೆ ಷಣ್ಮುಖ ಜನನಿಬಿಡ ಪ್ರದೇಶಗಳಲ್ಲಿ ಇದ್ದ ಬೈಕ್​ಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ. ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ. ಹರಿಹರದಲ್ಲಿ 2 ಮತ್ತು ದಾವಣಗೆರೆಯಲ್ಲಿ 2 ಬೈಕ್​ಗಳನ್ನು ಕಳವು ಮಾಡಿದ್ದ. ಜನರೆಲ್ಲ ಓಡಾಡಿಕೊಂಡು ಇರುವ ಪ್ರದೇಶದಲ್ಲಿಯ ಬೈಕ್​ಗಳೇ ಕಳವು ಆಗುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.

ಹೀಗಾಗಿ ಆರೋಪಿಗಳ ಪತ್ತೆಗೆ ರಾಣೆಬೆನ್ನೂರು ನಗರ ಠಾಣೆ ಸಿಪಿಐ ಎಂ.ಐ.ಗೌಡಪ್ಪಗೌಡರ ಹಾಗೂ ಪಿಎಸ್ಐ ಪ್ರಭು ಕೆಳಗಿನಮನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ ಷಣ್ಮುಖನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಮೂರೂವರೆ ಲಕ್ಷ ರುಪಾಯಿ ಮೌಲ್ಯದ ಆರು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಈತ ದುಶ್ಚಟಕ್ಕೆ ದಾಸ ಷಣ್ಮುಖ ಕದ್ದ ಬೈಕ್​ಗಳನ್ನು ಎಷ್ಟು ಬೆಲೆ ಸಿಗತ್ತೋ ಅಷ್ಟಕ್ಕೆ ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಸಾರಾಯಿ ಕುಡಿಯುವುದು, ಜೂಜಾಟದಂತ ದುಶ್ಚಟಗಳನ್ನು ಮಾಡುತ್ತಿದ್ದ. ಸದ್ಯ ಬಂಧಿತ ಆರೋಪಿಯಿಂದ ಆರು ಬೈಕ್​ಗಳನ್ನಷ್ಟೇ ವಶಪಡಿಸಿಕೊಳ್ಳಲಾಗಿದೆ..ಆದರೆ ಈತ ಇನ್ನಷ್ಟು ಬೈಕ್​ಗಳನ್ನು ಕದ್ದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿರುವ ಷಣ್ಮುಖನನ್ನು ಮತ್ತೆ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.

ನಿಂತಿದ್ದ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು