
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಬಂದಿದೆ. ಹಲ್ಲೆಗೊಳಗಾದ ಬೈಕ್ ಸವಾರ ಮಲ್ಲೇಶ್ನನ್ನು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಹಲ್ಲೆಗೊಳಗಾಗಿದ್ದ ಮಲ್ಲೇಶ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ, ಆತನ ಮೇಲೆ ಹಲ್ಲೆಯನ್ನು ಖಂಡಿಸಿದ ಸಾರ್ವಜನಿಕರು ಪಟ್ಟಣ ಠಾಣೆ ಎದುರು ಪ್ರತಿಭಟಿಸಿದರು.