ಆಟವಾಡುವಾಗ ಆಯ ತಪ್ಪಿ ಪಾಳುಬಾವಿಗೆ ಬಿದ್ದು ಬಾಲಕ ಸಾವು
ಕೊಡಗು: ಆಟವಾಡುವಾಗ ಆಯ ತಪ್ಪಿ ನೀರು ಇದ್ದ ಪಾಳುಬಾವಿಗೆ ಬಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದ ಸುಲೆಮಾನ್ ಪುತ್ರ ನಿಜಾಮುದ್ದಿನ್(11) ಮೃತ ಬಾಲಕ. ತಮ್ಮ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಕಾಲುಜಾರಿ ಬಾಲಕ ತೆರೆದ ಬಾವಿಗೆ ಬಿದ್ದಿದ್ದಾನೆ. ಸುಮಾರು 25 ಅಡಿ ಆಳದ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು: ಆಟವಾಡುವಾಗ ಆಯ ತಪ್ಪಿ ನೀರು ಇದ್ದ ಪಾಳುಬಾವಿಗೆ ಬಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.
ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದ ಸುಲೆಮಾನ್ ಪುತ್ರ ನಿಜಾಮುದ್ದಿನ್(11) ಮೃತ ಬಾಲಕ.
ತಮ್ಮ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಕಾಲುಜಾರಿ ಬಾಲಕ ತೆರೆದ ಬಾವಿಗೆ ಬಿದ್ದಿದ್ದಾನೆ. ಸುಮಾರು 25 ಅಡಿ ಆಳದ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




