ಡ್ರಗ್ಸ್​ ದಂಧೆಯಲ್ಲಿ ಕೇಳಿ ಬರುತ್ತಿದೆ ಶೇಕ್ ಫೈಜಲ್ ಹೆಸರು.. ಯಾರೀತ?

  • Updated On - 8:06 am, Fri, 11 September 20
ಡ್ರಗ್ಸ್​ ದಂಧೆಯಲ್ಲಿ ಕೇಳಿ ಬರುತ್ತಿದೆ ಶೇಕ್ ಫೈಜಲ್ ಹೆಸರು.. ಯಾರೀತ?

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಶೇಕ್ ಫೈಜಲ್.. ಈ ಹೆಸರು ಡ್ರಗ್ಸ್ ಕೇಸ್​ನಲ್ಲಿ ಕೇಳಿಬಂದ ತಕ್ಷಣ ಹಲವರಿಗೆ ನಡುಕ ಶುರುವಾಗಿದೆ.. ಕರ್ನಾಟಕದ ರಾಜಕಾರಣಿಗಳು, ಕನ್ನಡ ಸಿನಿಮಾ ರಂಗ, ಬಾಲಿವುಡ್ ಸೇರಿದಂತೆ ಎಲ್ಲರ ಜೊತೆ ಈ ಶೇಕ್ ಫೈಜಲ್​ಗೆ ಲಿಂಕ್ ಇದೆ. ಸಂಜನಾಳನ್ನು ಶ್ರೀಲಂಕಾ ಕಸಿನೊಗೆ ಕರೆದುಕೊಂಡು ಹೋಗಿದ್ದು ಇವನೇ.

ಈತ ಬಿಟಿಎಂ ಲೇಔಟ್ ನಿವಾಸಿಯಾಗಿದ್ದ. ಶ್ರೀಲಂಕಾದ ಬೇಲಿಸ್ ಕಸಿನೊದಲ್ಲಿ ಏಜೆಂಟ್ ಆಗಿದ್ದ. ಕಳೆದ ಹಲವು ವರ್ಷಗಳಿಂದ ರಾಹುಲ್ ಮತ್ತು ಶೇಕ್ ಫೈಜಲ್ ಒಟ್ಟಿಗೆ ವ್ಯವಹಾರ ನಡೆಸುತಿದ್ರು. ಹೀಗಾಗಿ ಸಿಸಿಬಿ ಶೇಕ್ ಫೈಜಲ್ ಹುಡುಕಾಟಕ್ಕೆ ವಿಶೇಷ ತಂಡ ರಚಿಸಿದೆ. ಶೇಕ್ ಫೈಜಲ್ ಸಿಕ್ಕಿಬಿದ್ರೆ ರಾಜಕಾರಣಿಗಳ ಇಂಟರ್ನ್ಯಾಷನಲ್ ನಂಟು, ಹಣದ ವ್ಯವಹಾರ, ಡ್ರಗ್ಸ್ ಸಾಗಾಟ, ಹವಾಲ ಎಲ್ಲವೂ ಬಯಲಾಗುತ್ತೆ.

Click on your DTH Provider to Add TV9 Kannada