Child Sale | ಪಡೆದ ಸಾಲ ವಾಪಸ್ ನೀಡದಿದಕ್ಕೆ ವೈದ್ಯ ದಂಪತಿಗೆ ಗಂಡು ಮಗು ಮಾರಾಟ.. 6 ಮಂದಿ ಅರೆಸ್ಟ್

ಪಡೆದ ಸಾಲ ವಾಪಸ್ ನೀಡದ ಹಿನ್ನೆಲೆಯಲ್ಲಿ ಸಾಲ ಪಡೆದಿದ್ದ ದಂಪತಿಯ ಗಂಡು ಮಗುವನ್ನು ಮಾರಾಟ ಮಾಡಿದ ಅಮಾನವೀಯ ಘಟನೆ ಧಾರವಾಡದ ತೇಜಸ್ವಿನಗರ ಬಡಾವಣೆಯಲ್ಲಿ ನಡೆದಿದೆ.

Child Sale | ಪಡೆದ ಸಾಲ ವಾಪಸ್ ನೀಡದಿದಕ್ಕೆ ವೈದ್ಯ ದಂಪತಿಗೆ ಗಂಡು ಮಗು ಮಾರಾಟ.. 6 ಮಂದಿ ಅರೆಸ್ಟ್
ಭಾರತಿ ವಾಲ್ಮೀಕಿ, ರಮೇಶ್ ವಾಲ್ಮೀಕಿ, ವಿನಾಯಕ, ರವಿ ಹೆಗಡೆ
Follow us
ಆಯೇಷಾ ಬಾನು
|

Updated on: Mar 07, 2021 | 8:53 AM

ಧಾರವಾಡ: ಪಡೆದ ಸಾಲ ವಾಪಸ್ ನೀಡದ ಹಿನ್ನೆಲೆಯಲ್ಲಿ ಸಾಲ ಪಡೆದಿದ್ದ ದಂಪತಿಯ ಗಂಡು ಮಗುವನ್ನು ಮಾರಾಟ ಮಾಡಿದ ಅಮಾನವೀಯ ಘಟನೆ ಧಾರವಾಡದ ತೇಜಸ್ವಿನಗರ ಬಡಾವಣೆಯಲ್ಲಿ ನಡೆದಿದೆ. ರೂಪಾ, ಮೈನುದ್ದೀನ್ ದಂಪತಿಯ ಗಂಡು ಮಗುವನ್ನು ಉಡುಪಿ ಮೂಲದ ವೈದ್ಯ ದಂಪತಿಗೆ ಮಾರಾಟ ಮಾಡಲಾಗಿದ್ದು 5 ತಿಂಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಡೆದ ಸಾಲ ಮರಳಿಸದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಸಾಲಗಾರರ ಮಗುವನ್ನೇ ಮಾರಿ ತಮ್ಮ ಹಣ ಪಡೆದಿದ್ದಾರೆ. ಭಾರತಿ ವಾಲ್ಮೀಕಿ ಎಂಬುವವರ ಬಳಿ ರೂಪಾ 72,000 ರೂ. ಸಾಲ ಪಡೆದಿದ್ದರು. ಸಾಲಕ್ಕೆ ಬಡ್ಡಿ ಸೇರಿಸಿ ₹1.50ಲಕ್ಷ ರೂ ಆಗಿತ್ತು. ಅಷ್ಟೂ ಹಣವನ್ನು ನೀಡುವಂತೆ ಭಾರತಿ ಡಿಮ್ಯಾಂಡ್ ಮಾಡಿದ್ದಳು. ಇದೇ ವೇಳೆ ರೂಪಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಭಾರತಿ ಒತ್ತೆಯಾಳಾಗಿ ತಾಯಿ, ಮಗುವನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಳು ಎಂಬ ಆರೋಪ ಕೇಳಿ ಬಂದಿದೆ. 40 ದಿನ ಮನೆಯಲ್ಲೇ ಇಟ್ಟುಕೊಂಡು ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಮಾಡಿಸಿ ಮಗುವನ್ನು ಉಡುಪಿ ಮೂಲದ ವೈದ್ಯ ದಂಪತಿಗೆ ಮಾರಿ ರೂಪಾಗೆ 1 ಲಕ್ಷ ರೂಪಾಯಿಯನ್ನು ಭಾರತಿ ಕೊಟ್ಟಿದ್ದಾಳೆ. ಬಳಿಕ ಸುಮಾರು ಐದು ತಿಂಗಳ ನಂತರ ಈ ಪ್ರಕರಣ ಹೊರ ಬಂದಿದೆ.

ಈ ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ್ದಾರೆ. ಈ ಸಂದೇಶ ಆಧರಿಸಿ ತನಿಖೆ ನಡೆಸಿದ ವಿದ್ಯಾಗಿರಿ ಪೊಲೀಸರು ಆರೋಪಿಗಳಾದ ಭಾರತಿ, ಮಗ ರಮೇಶ್, ಅಳಿಯ ವಿನಾಯಕ, ರವಿ ಹೆಗಡೆಯನ್ನು ಬಂಧಿಸಿದ್ದಾರೆ. ಮಗು ಪಡೆದಿದ್ದ ವೈದ್ಯ ದಂಪತಿ ವಿಜಯ್ ನೆಗಳೂರು, ಚಿತ್ರಾ ದಂಪತಿಯನ್ನೂ ವಶಕ್ಕೆ ಪಡೆಯಲಾಗಿದೆ. ಇನ್ನು ಪೊಲೀಸರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ನೀಡಿದ್ದಾರೆ.

ಇದನ್ನೂ ಓದಿ: ಗಂಡು ಮಗುವನ್ನು ಮಾರಾಟ ಮಾಡಲು ಮುಂದಾದ ತಂದೆ .. ಮಗು ಕೊಡಲು ಒಲ್ಲೆ ಎಂದ ಪತ್ನಿಗೆ ರಸ್ತೆಯಲ್ಲಿ ಜುಟ್ಟು ಹಿಡಿದು ಎಳೆದಾಡಿದ ಪತಿ