ಕೈ ಕೈ ಮಿಲಾಯಿಸಿದ ಕೈ ನಾಯಕರು! KPCC ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಮಾರಾಮಾರಿ?
ಕಾಂಗ್ರೆಸ್ ಎಂಎಲ್ಸಿ ನಾರಾಯಣಸ್ವಾಮಿ ಮತ್ತು ರಾಜಾಜಿನಗರ ಕಾಂಗ್ರೆಸ್ ಮುಖಂಡ ಮಾನೋಹರ್ ಮನೋಹರ್ ಕೈ ಕೈ ಮೀಲಾಯಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಕ್ಷುಲಕ ಕಾರಣಕ್ಕೆ ಮನೋಹರ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಒಂದೇ ಪಕ್ಷದಲ್ಲಿದ್ದರೂ ವೈಮನಸ್ಯಗಳು ಇರುವುದು ಸಾಮಾನ್ಯ. ಆದರೆ, ನಿಜವಾದ ನಾಯಕ ಅನಿಸಿಕೊಂಡವರು ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದು ಉಚಿತವಲ್ಲ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರ ಎದುರೇ ಕೈ ಕೈ ಮಿಲಾಯಿಸಿಕೊಂಡಿದ್ದು, ಕಾಂಗ್ರೆಸ್ಗೆ ಇರುಸು ಮುರುಸು ತಂದಿಟ್ಟಿದೆ.
ರಾಜಧಾನಿಯ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಆ ರೀತಿ ಏನು ನಡೆದೇ ಇಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಎಂಎಲ್ಸಿ ನಾರಾಯಣಸ್ವಾಮಿ ಮತ್ತು ರಾಜಾಜಿನಗರ ಕಾಂಗ್ರೆಸ್ ಮುಖಂಡ ಮನೋಹರ್ ಕೈ ಕೈ ಮೀಲಾಯಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಕ್ಷುಲಕ ಕಾರಣಕ್ಕೆ ನಾರಾಯಣಸ್ವಾಮಿ ಮೇಲೆ ಮನೋಹರ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಬಲಗೈ ಬಂಟ ಎಂದು ಹೇಳಿಕೊಂಡು ತಿರುಗಾಡುವ ಮನೋಹರ್ ಎಲ್ಲರ ಮೇಲೂ ದೌರ್ಜನ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ ಇದೆ.
ಕಾಂಗ್ರೆಸ್ನವರು ಹೇಳೋದೇ ಬೇರೆ.. ಕಾಂಗ್ರೆಸ್ ನಾಯಕರ ನಡುವೆ ಘರ್ಷಣೆ ಏರ್ಪಟ್ಟಿಲ್ಲ ಎಂದು ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿ ಬಂದಿದ್ದೇವೆ. ಕಚೇರಿ ಕೆಳ ಭಾಗದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಚರ್ಚೆ ಮಡೆಯುತ್ತಿತ್ತು. ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಆಪರೇಷನ್ ಮಾಡಿದೆ ಎನ್ನುವ ಬಗ್ಗೆ ಚರ್ಚೆ ನಡಿಯುತಿತ್ತು. ಈ ವೇಳೆ ಸ್ವಲ್ಪ ಏರುಧ್ವನಿಯಲ್ಲಿ ಮಾತುಕತೆ ಆಗಿದೆ. ಅದು ಬಿಟ್ಟು ಯಾರಮೇಲೂ ಹಲ್ಲೆಯಾಗಿಲ್ಲ. ಯಾರು ಕೈ ಕೈ ಮಿಲಾಯಿಸಿಲ್ಲ ಎಂದು ಸಲೀಂ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
Published On - 3:44 pm, Fri, 22 January 21