ರಾಜ್ಯದಲ್ಲಿ ಇನ್ಮುಂದೆ ಎಲ್ಲೇ ಕೊರೊನಾ ಬಂದ್ರೂ ಸರ್ಕಾರ ಏನು ಮಾಡುತ್ತೆ ಗೊತ್ತಾ?

ಮೈಸೂರು: ರಾಜ್ಯದಲ್ಲಿ ಇನ್ನು ಮುಂದೆ ಯಾರಿಗಾದರೂ ಕೊರೊನಾ ಬಂದ್ರೆೇ ಕೇವಲ ಸೀಲ್‌ಡೌನ್‌ ಮಾತ್ರ ಇರುತ್ತೆ. ಎಲ್ಲಿಯೂ ಕೂಡಾ ಲಾಕ್‌ಡೌನ್ ಇರೋದಿಲ್ಲ ಎಂದು ಸಹಕಾರ ಸಚಿವ ಎಸ್‌ಟಿ ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಚಿವರು, ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯೂ ಕೂಡಾ ಲಾಕ್‌ಡೌನ್ ವಿಧಿಸೋಲ್ಲ, ಈ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ ಎಂದು ತಿಳಿಸಿದರು. ಕೊರೊನಾ ಪಾಸಿಟಿವ್ ಬಂದ ಮನೆಗಳನ್ನ ಮಾತ್ರ ಸೀಲ್‌ಡೌನ್ ಮಾಡುತ್ತೇವೆ, ಅಲ್ಲಿ ಮಾತ್ರ ಸೀಲ್‌ಡೌನ್ ಇರುತ್ತೆ ಇನ್ನುಳಿದಂತೆ ಇತರೆಡೆ ನಾರ್ಮಲ್‌ […]

ರಾಜ್ಯದಲ್ಲಿ ಇನ್ಮುಂದೆ ಎಲ್ಲೇ ಕೊರೊನಾ ಬಂದ್ರೂ ಸರ್ಕಾರ ಏನು ಮಾಡುತ್ತೆ ಗೊತ್ತಾ?

Updated on: Jul 19, 2020 | 1:42 PM

ಮೈಸೂರು: ರಾಜ್ಯದಲ್ಲಿ ಇನ್ನು ಮುಂದೆ ಯಾರಿಗಾದರೂ ಕೊರೊನಾ ಬಂದ್ರೆೇ ಕೇವಲ ಸೀಲ್‌ಡೌನ್‌ ಮಾತ್ರ ಇರುತ್ತೆ. ಎಲ್ಲಿಯೂ ಕೂಡಾ ಲಾಕ್‌ಡೌನ್ ಇರೋದಿಲ್ಲ ಎಂದು ಸಹಕಾರ ಸಚಿವ ಎಸ್‌ಟಿ ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಚಿವರು, ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯೂ ಕೂಡಾ ಲಾಕ್‌ಡೌನ್ ವಿಧಿಸೋಲ್ಲ, ಈ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.

ಕೊರೊನಾ ಪಾಸಿಟಿವ್ ಬಂದ ಮನೆಗಳನ್ನ ಮಾತ್ರ ಸೀಲ್‌ಡೌನ್ ಮಾಡುತ್ತೇವೆ, ಅಲ್ಲಿ ಮಾತ್ರ ಸೀಲ್‌ಡೌನ್ ಇರುತ್ತೆ ಇನ್ನುಳಿದಂತೆ ಇತರೆಡೆ ನಾರ್ಮಲ್‌ ಆಗಿರುತ್ತೆ, ಎಲ್ಲಿಯೂ ಲಾಕ್‌ಡೌನ್ ಇರುವುದಿಲ್ಲ ಎಂದು ಸಚಿವ ಎಸ್‌ಟಿ ಸೋಮಶೇಖರ್ ಸಿಎಂ ಬಿಎಸ್‌ವೈ ಮಾತನ್ನು ಪುನರುಚ್ಚರಿಸಿದರು.