AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾರಾಯಣಗೌಡ್ರು ಸೀರೆ, ಮೂಗು ಬೊಟ್ಟು ತಂದಿದ್ದಾರೆ, ಆದ್ರೆ ಜನ ಮಾರುಹೋಗಲ್ಲ’

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ವ್ಯಾಪಾರ ಮಾಡಲು ಮುಂಬೈಗೆ ಹೋದ್ರು. ಅಲ್ಲಿ ವ್ಯಾಪಾರ ಮಾಡಲು ಆಗಲಿಲ್ಲ. ಇಲ್ಲಿಗೆ ವ್ಯಾಪಾರ ಮಾಡಲು ಬಂದಿದ್ರು. ಈಗ ದೊಡ್ಡ ವ್ಯಾಪಾರ ಮಾಡಿಕೊಂಡಿದ್ದಾರೆ. ಅದೇ ವ್ಯಾಪಾರದ ದುಡ್ಡಲ್ಲಿ ಹಳೆಯ ಮಾಡಲ್ ಸೀರೆ, ರೋಲ್‌ ಗೋಲ್ಡ್ ಮೂಗಬೊಟ್ಟು, ಡೂಪ್ಲಿಕೇಟ್ ರಾಡೋ ವಾಚ್ ಬಂದಿವೆ. ಇವುಗಳಿಗೆ ನಮ್ಮ ಜನ ಮಾರುಹೋಗಲ್ಲ ಎಂದು ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ವಾಗ್ದಾಳಿ ನಡೆಸಿದರು. ಕೆ.ಸಿ.ನಾರಾಯಣಗೌಡ ಅವರ ಆಮಿಷಗಳಿಗೆ ಕ್ಷೇತ್ರದ ಜನರು ಮಾರುಹೋಗುವುದಿಲ್ಲ. ಅವರ ವ್ಯಾಪಾರದ ದುಡ್ಡಿನಿಂದ ಒಂದೆರಡು […]

‘ನಾರಾಯಣಗೌಡ್ರು ಸೀರೆ, ಮೂಗು ಬೊಟ್ಟು ತಂದಿದ್ದಾರೆ, ಆದ್ರೆ ಜನ ಮಾರುಹೋಗಲ್ಲ’
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 24, 2019 | 4:51 PM

Share

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ವ್ಯಾಪಾರ ಮಾಡಲು ಮುಂಬೈಗೆ ಹೋದ್ರು. ಅಲ್ಲಿ ವ್ಯಾಪಾರ ಮಾಡಲು ಆಗಲಿಲ್ಲ. ಇಲ್ಲಿಗೆ ವ್ಯಾಪಾರ ಮಾಡಲು ಬಂದಿದ್ರು. ಈಗ ದೊಡ್ಡ ವ್ಯಾಪಾರ ಮಾಡಿಕೊಂಡಿದ್ದಾರೆ. ಅದೇ ವ್ಯಾಪಾರದ ದುಡ್ಡಲ್ಲಿ ಹಳೆಯ ಮಾಡಲ್ ಸೀರೆ, ರೋಲ್‌ ಗೋಲ್ಡ್ ಮೂಗಬೊಟ್ಟು, ಡೂಪ್ಲಿಕೇಟ್ ರಾಡೋ ವಾಚ್ ಬಂದಿವೆ. ಇವುಗಳಿಗೆ ನಮ್ಮ ಜನ ಮಾರುಹೋಗಲ್ಲ ಎಂದು ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ವಾಗ್ದಾಳಿ ನಡೆಸಿದರು.

ಕೆ.ಸಿ.ನಾರಾಯಣಗೌಡ ಅವರ ಆಮಿಷಗಳಿಗೆ ಕ್ಷೇತ್ರದ ಜನರು ಮಾರುಹೋಗುವುದಿಲ್ಲ. ಅವರ ವ್ಯಾಪಾರದ ದುಡ್ಡಿನಿಂದ ಒಂದೆರಡು ಸಾವಿರ ವೋಟ್ ತಗೋಬಹುದು ಅಷ್ಟೇ. ಅವರು ಇಂತಹ ಗಿಮಿಕ್​ಗಳಿಂದ ರಾಜಕಾರಣ ಮಾಡಲು ಆಗಲ್ಲ. ಮತ್ತೆ ಅವರನ್ನು ಇಲ್ಲಿಯ ಜನರು ಯಾವ ರೀತಿ ಮುಂಬೈಗೆ ಕಳಿಸ್ತಾರೆ ನೋಡಿ ಎಂದು ಮಡುವಿನ ಕೋಡಿ ಗ್ರಾಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು.

ಬಿಜೆಪಿ ದೇವೇಗೌಡರ ಮನೆ ಬಾಗಿಲು ತಟ್ಟುತ್ತೆ: ಉಪಚುನಾವಣೆಯಲ್ಲಿ ಬಿಜೆಪಿ 2-3 ಸೀಟ್ ಗೆಲ್ಲದಿದ್ರೆ ಏನ್ ಆಗುತ್ತೆ. ಫಲಿತಾಂಶದ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಡಿ.5ರ ಮೇಲೆ ನಮ್ಮ ರಾಜಕೀಯ ಲೆಕ್ಕಾಚಾರ ತಿಳಿಸುತ್ತೇವೆ. ನೂರಕ್ಕೆ ನೂರು ಭಾಗ ಚುನಾವಣೆ ಬಳಿಕ ಬಿಜೆಪಿ ದೇವೇಗೌಡರ ಮನೆಗೆ ಬರೋದನ್ನ ತಪ್ಪಿಸಲು ಆಗುವುದಿಲ್ಲ ಎಂದರು.

Published On - 4:46 pm, Sun, 24 November 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು