ಮ್ಯಾನೇಜರ್ ಕಿರುಕುಳದಿಂದ ಕೆಲಸಗಾರ ನೇಣಿಗೆ ಶರಣು
ಮ್ಯಾನೇಜರ್ ಕಿರುಕುಳ ತಡೆಯಲಾರದೆ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ

ನೇಣಿಗೆ ಶರಣಾದ ಹನುಮಂತ(24)
ದಾವಣಗೆರೆ: ರಿಲಯನ್ಸ್ ಡಿಜಿಟಲ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆಯೊಂದು ಜಿಲ್ಲೆಯ ಹಾಲವರ್ತಿ ಗ್ರಾಮದಲ್ಲಿ ನಡೆದಿದೆ. ಹನುಮಂತ(24) ನೇಣಿಗೆ ಶರಣಾಗಿದ್ದಾನೆ. ಮ್ಯಾನೇಜರ್ ಕಿರುಕುಳ ತಡೆಯಲಾರದೆ ಸಾವಿಗೆ ಶರಣಾಗಿರುವುದಾಗಿ ಪತ್ರ ಬರೆದಿಟ್ಟಿದ್ದಾನೆ.
ಆಫೀಸ್ನಲ್ಲಿ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದರು. ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿತ್ತು ಎಂಬ ಆರೋಪದ ಮೇರೆಗೆ ತನಗಾಗ ನೋವನ್ನು ಪತ್ರದಲ್ಲಿ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.




