Dhanashree Dance: ಚಾಹಲ್ ಪತ್ನಿ ಜತೆ ಡಾನ್ಸ್ ಮಾಡಿದ ಶ್ರೇಯಸ್ ಅಯ್ಯರ್; ವಿಡಿಯೋ ಸಖತ್ ವೈರಲ್
Shreyas Iyer - Dhanashree Verma Dance: ಜಿಮ್ನಲ್ಲಿ ಪಾದರಸದಂತೆ ಚುರುಕಾಗಿ ತಮ್ಮ ಸಹ ಆಟಗಾರನ ಪತ್ನಿ ಜತೆ ಹೆಜ್ಜೆ ಹಾಕಿರುವ ಶ್ರೇಯಸ್ ಅಯ್ಯರ್ ಥಿಂಕಿಂಗ್ ಆನ್ ಅವರ್ ಫೀಟ್ ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ಇದಕ್ಕೆ ಅಷ್ಟೇ ಕ್ರಿಯೇಟಿವ್ ಆಗಿ ‘ಟು ಕೂಲ್ ಬ್ರೋ’ ಎಂದು ಕಮೆಂಟಿಸಿದ್ದಾರೆ ಇನ್ನೋರ್ವ ಕ್ರಿಕೇಟಿಗ ಹಾರ್ದಿಕ್ ಪಾಂಡ್ಯ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ (Shreyas Iyer) ವಿಶೇಷ ವ್ಯಕ್ತಿಯೋರ್ವರ ಜತೆ ಡಾನ್ಸ್ ಮಾಡಿರುವ ವಿಡಿಯೋವೊಂದು ಈಗ ಸಖತ್ ಸುದ್ದಿ ಮಾಡುತ್ತಿದೆ. ಅಯ್ಯರ್ ಡಾನ್ಸ್ ಮಾಡಿರೋದು ಅಂತಿಂತ ವ್ಯಕ್ತಿಯ ಜತೆಯಲ್ಲ, ಡಾನ್ಸ್ ಕೋರಿಯೋಗ್ರಾಫರ್ ಧನಶ್ರೀ ವರ್ಮಾರ (Dhanashree Verma) ಜತೆ, ಅವರು ಯಾರು ಅಂತ ಪ್ರತ್ಯೇಕವಾಗಿ ಹೇಳಬೇಕು? ಹೌದು, ಟೀಂ ಇಂಡಿಯಾ ಸ್ಪಿನ್ನರ್, ಪ್ರತಿಭಾನ್ವಿತ ಕ್ರಿಕೆಟರ್ ಯಜುವೇಂದ್ರ ಚಾಹಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ ಜತೆಯೇ ಶ್ರೇಯಸ್ ಅಯ್ಯರ್ ಮಾಡಿರೋ ನೃತ್ಯ ಇದೀಗ ಸಿನಿಮಾ ಮತ್ತು ಕ್ರಿಕೆಟ್ ಪ್ರಿಯರ ಹುಬ್ಬೇರಿಸಿದೆ.
ಧನಶ್ರೀ ವರ್ಮಾ ಮತ್ತು ಯಜುವೇಂದ್ರ ಚಾಹಲ್ ಎಂಬ ಮುದ್ದಾದ ಜೋಡಿ ಇತ್ತೀಚಿಗಷ್ಟೇ ಹಸೆಮಣೆ ಏರಿದ್ದರು. ಪ್ರತಿಭಾನ್ವಿತ ನೃತ್ಯಪಟು ಆಗಿರುವ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ತಮ್ಮ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಶ್ರೇಯಸ್ ಅಯ್ಯರ್ ಜತೆ ಹಾಕಿರುವ ಸ್ಟೆಪ್ಸ್ ಎಂದಿಗಿಂತ ಸಖತ್ತಾಗಿದೆ.
View this post on Instagram
ಜಿಮ್ನಲ್ಲಿ ಪಾದರಸದಂತೆ ಚುರುಕಾಗಿ ತಮ್ಮ ಸಹ ಆಟಗಾರನ ಪತ್ನಿ ಜತೆ ಹೆಜ್ಜೆ ಹಾಕಿರುವ ಶ್ರೇಯಸ್ ಅಯ್ಯರ್ ಥಿಂಕಿಂಗ್ ಆನ್ ಅವರ್ ಫೀಟ್ ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ಇದಕ್ಕೆ ಅಷ್ಟೇ ಕ್ರಿಯೇಟಿವ್ ಆಗಿ ‘ಟೂ ಕೂಲ್ ಬ್ರೋ’ ಎಂದು ಕಮೆಂಟಿಸಿದ್ದಾರೆ ಇನ್ನೋರ್ವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ.
ಹಾಗಾದ್ರೆ, ಈ ಕ್ರಿಕೆಟಿಗರು ಸದ್ಯ ಎಲ್ಲಿ ಆಡುತ್ತಿದ್ದಾರೆ ಎಂದು ನೀವು ಯೋಚಿಸಿದಿರಾ? ಇಲ್ಲ, ಸದ್ಯ ಯಜುವೇಂದ್ರ ಚಾಹಲ್, ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಮೂವರು ಸಹ ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ, ಡಾನ್ಸ್ ಮಾಡುತ್ತ ಮನಸಿಗೆ ಖುಷಿ ನೀಡುವ ಒಂದಿಲ್ಲೊಂದು ಕ್ರಿಯೇಟಿವ್ ಕೆಲಸ ಮಾಡುತ್ತ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನುತ್ತದೆ ಗಾಸಿಪ್ ಬ್ಯೂರೋ.
ಇದನ್ನೂ ಓದಿ:India vs England, 2nd Test, Day 1, LIVE Score: ಲಂಚ್ ವಿರಾಮಕ್ಕೆ ಭಾರತ 106/3
Published On - 12:45 pm, Sat, 13 February 21



