ಬಿಜೆಪಿಯವರು ಈಗ ಸರ್ವತಂತ್ರ ಸ್ವತಂತ್ರರು, ಅದೇನು ಮಾಡ್ತಾರೋ ಎಲ್ಲವನ್ನೂ ಮಾಡಲಿ: ಡಿಕೆಶಿ
ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಯವರಿಗೆ ಬಹಳ ಶಕ್ತಿ ಇದೆ. ಅವರು ಈಗ ಎಷ್ಟು ಬೋರ್ಡ್ ಬೇಕಾದ್ರು ಮಾಡಬಹುದು, ಯಾವ ಸಮಾಜಕ್ಕೆ ಬೇಕಾದ್ರೂ ಸ್ಥಾನಮಾನ ಕೊಡಬಹುದು. ಹಾಗಾಗಿ ನಮ್ಮದೇನು ಅದರ ಬಗ್ಗೆ ಅಭ್ಯಂತರವಿಲ್ಲ
ಕಾರವಾರ: ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರವಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿಯವರಿಗೆ ಬಹಳ ಶಕ್ತಿ ಇದೆ. ಅವರು ಈಗ ಎಷ್ಟು ಬೋರ್ಡ್ ಬೇಕಾದ್ರು ಮಾಡಬಹುದು, ಯಾವ ಸಮಾಜಕ್ಕೆ ಬೇಕಾದ್ರೂ ಸ್ಥಾನಮಾನ ಕೊಡಬಹುದು. ಹಾಗಾಗಿ ನಮ್ಮದೇನು ಅದರ ಬಗ್ಗೆ ಅಭ್ಯಂತರವಿಲ್ಲವೆಂದು ಡಿಕೆಶಿ ಈ ವಿಚಾರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಬಿಜೆಪಿಯವರು ತಮ್ಮನ್ನ ತಾವು ಸರ್ವತಂತ್ರ ಸ್ವತಂತ್ರರು ಎಂದುಕೊಂಡಿದ್ದಾರೆ. ನೋಡೋಣ ಅದೇನು ಮಾಡುತ್ತಾರೋ ಎಲ್ಲವನ್ನೂ ಮಾಡಲಿ ಎಂದರು. ಜೊತೆಗೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತಾನಾಡಿದ ಡಿಕೆಶಿ, ನಾಯಕತ್ವ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಆದ್ರೆ ಇಲ್ಲಿಂದ ಹೋದವರಲ್ಲಿ ಕೆಲವರು ಅವರಿಗೇನು ಗಿಷ್ಟ್ ಕೊಡಬೇಕೋ ಅದನ್ನ ಕೊಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
Published On - 6:52 pm, Fri, 27 November 20