ಈ ಬಾರಿಯ ಲಾಲ್ ಬಾಗ್ Flower Show ಕ್ಯಾನ್ಸಲ್, ಕಾರಣವೇನು ಗೊತ್ತಾ?
ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ನಗರದ ಲಾಲ್ ಬಾಗ್ನಲ್ಲಿ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಪ್ರತಿವರ್ಷವೂ ವಿಭಿನ್ನ ರೀತಿಯ ವಿಷಯವನ್ನ ಆಧಾರವಾಗಿಟ್ಟುಕೊಂಡು ಫಲಪುಷ್ಪ ಪ್ರದರ್ಶನವನ್ನು ಲಾಲ್ ಬಾಗ್ ಸಸ್ಯ ತೋಟದ ಆಡಳಿತ ಮಂಡಳಿ ಆಯೋಜನೆ ಮಾಡುತ್ತಿತ್ತು. ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲೆಂದು ಬರೀ ಬೆಂಗಳೂರಿಗರೇ ಅಲ್ಲದೆ ರಾಜ್ಯದ ಹಲವೆಡೆಯಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು.ಆದರೆ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಕೊರೊನಾ ಮಹಾಮಾರಿ ಹೆಚ್ಚಾದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಪ್ರತಿವರ್ಷ ಮೇ ತಿಂಗಳಲ್ಲಿಯೇ Flower showಗೆ ತಯಾರಿ ಮಾಡಿಕೊಳ್ಳುತ್ತಿದ್ದ […]

ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ನಗರದ ಲಾಲ್ ಬಾಗ್ನಲ್ಲಿ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಪ್ರತಿವರ್ಷವೂ ವಿಭಿನ್ನ ರೀತಿಯ ವಿಷಯವನ್ನ ಆಧಾರವಾಗಿಟ್ಟುಕೊಂಡು ಫಲಪುಷ್ಪ ಪ್ರದರ್ಶನವನ್ನು ಲಾಲ್ ಬಾಗ್ ಸಸ್ಯ ತೋಟದ ಆಡಳಿತ ಮಂಡಳಿ ಆಯೋಜನೆ ಮಾಡುತ್ತಿತ್ತು.
ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲೆಂದು ಬರೀ ಬೆಂಗಳೂರಿಗರೇ ಅಲ್ಲದೆ ರಾಜ್ಯದ ಹಲವೆಡೆಯಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು.ಆದರೆ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಕೊರೊನಾ ಮಹಾಮಾರಿ ಹೆಚ್ಚಾದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.
ಪ್ರತಿವರ್ಷ ಮೇ ತಿಂಗಳಲ್ಲಿಯೇ Flower showಗೆ ತಯಾರಿ ಮಾಡಿಕೊಳ್ಳುತ್ತಿದ್ದ ತೋಟಗಾರಿಕೆ ಇಲಾಖೆ, ಈ ವರ್ಷ ಆಗಸ್ಟ್ ಬಂದರು ಯಾವುದೇ ರೀತಿಯ ತಯಾರಿಗೆ ಮುಂದಾಗಿಲ್ಲ. ಕೊರೊನಾ ರಾಜ್ಯದಲ್ಲಿ ಹೆಚ್ಚಾಗಿರುವುದರಿಂದ ಹಾಗೂ ಸಾರ್ವಜನಿಕರು ಹೆಚ್ಚಾಗಿ ಸೇರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಕ್ಕೆ ನಿಷೇಧವಿರುವ ಕಾರಣದಿಂದಾಗಿ ಈ ಬಾರಿಯ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಲಾಲ್ ಬಾಗ್ನ ಉಪನಿರ್ದೇಶಕಿ ಕುಸುಮ ಟಿವಿ9 ಗೆ ಮಾಹಿತಿ ನೀಡಿದ್ದಾರೆ.