ಸರ್ಕಾರ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಪರ ನಿಲ್ಲಬೇಕು: ಕಾರ್ಮಿಕ ಸಂಘಟನೆ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ

|

Updated on: Dec 18, 2020 | 2:44 PM

ಸರಕಾರ ಕಾರ್ಮಿಕರ ಪರ ನಿಲ್ಲಬೇಕೇ ಹೊರತು ಕಂಪನಿಯ ಪರವಾಗಲ್ಲ. ಕಾರ್ಮಿಕರಿಗೆ ಸಿಗಬೇಕಿರುವ ಬಾಕಿ ವೇತನ ನೀಡಬೇಕು ಎಂದು ಕಾರ್ಮಿಕ ಸಂಘಟನೆಯ ಮುಖಂಡ ಮಾಜಿ ಶಾಸಕ ಜಿ.ವಿ ಶ್ರೀರಾಮ ರೆಡ್ಡಿ ಹೇಳಿದ್ದಾರೆ

ಸರ್ಕಾರ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಪರ ನಿಲ್ಲಬೇಕು: ಕಾರ್ಮಿಕ ಸಂಘಟನೆ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ
ಕಾರ್ಮಿ ಸಂಘಟನೆಯ ಮುಖಂಡ ಶ್ರೀರಾಮ ರೆಡ್ಡಿ
Follow us on

ಕೋಲಾರ: ನರಸಾಪುರ ಬಳಿ ಇರುವ ವಿಸ್ಟ್ರಾನ್ ಕಂಪನಿಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿತ್ತು. ಕಂಪನಿಯಲ್ಲಿ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರು. ಈ ಕುರಿತು ಕಾರ್ಮಿಕರು ದಾಂಧಲೆ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ, ಸರಕಾರ ಕಾರ್ಮಿಕರ ಪರ ನಿಲ್ಲಬೇಕೇ ಹೊರತು ಕಂಪನಿಯ ಪರವಾಗಿ ಅಲ್ಲ. ಕಾರ್ಮಿಕರಿಗೆ ಸಿಗಬೇಕಿರುವ ಬಾಕಿ ವೇತನ ನೀಡಬೇಕು ಎಂದು ಕಾರ್ಮಿಕ ಸಂಘಟನೆಯ ಮುಖಂಡ ಮಾಜಿ ಶಾಸಕ ಜಿ.ವಿ ಶ್ರೀರಾಮ ರೆಡ್ಡಿ ಕೋಲಾರದ ಪತ್ರಕರ್ತ ಭವನದಲ್ಲಿ ಆಗ್ರಹಿಸಿದ್ದಾರೆ

ಕಂಪನಿ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ದಾಂಧಲೆ ಗೆ ಕಾರಣ. ವಿಸ್ಟ್ರಾನ್ ಕಂಪನಿಯ ಲೋಪವನ್ನು ಪರಿಗಣಿಸಿ ಕಂಪನಿಯ ಕೆಲ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕಾರ್ಮಿಕರ ವಿರುದ್ಧ ಹೂಡಿರುವ ದಾವೆಯನ್ನು ಕಾನೂನಾತ್ಮಕವಾಗಿ ಹಿಂಪಡೆಯಬೇಕು ಎಂದು ಅವರು ಹೇಳಿದ್ದಾರೆ.

ದಾಂಧಲೆಗೆ ತುತ್ತಾಗಿದ್ದ ವಿಸ್ಟ್ರಾನ್ ಕಂಪನಿ, ಶೀಘ್ರದಲ್ಲೇ ಕೆಲಸ ಪುನರಾರಂಭ