ಯಾವ ಸಿದ್ದರಾಮಯ್ಯ ಬಂದ್ರು ಏನೂ ಪ್ರಯೋಜನವಿಲ್ಲ: ಇದು ಬಾದಾಮಿ ಕ್ಷೇತ್ರದ ಜನರ ಆಕ್ರೋಶ

ಬಾಗಲಕೋಟೆ: ಮಲಪ್ರಭಾ ನದಿಯ ಅಬ್ಬರಕ್ಕೆ ಬಾಗಲಕೊಟೆ ಜಿಲ್ಲೆಯಲ್ಲಿನ ನದಿ ತೀರದ ಜನರು ತತ್ತರಿಸಿಹೊಗಿದ್ದಾರೆ. ಅದ್ರಲ್ಲೂ ಬಾದಾಮಿ ತಾಲೂಕಿನ ಬೀರನೂರು ಗ್ರಾಮ‌ದಲ್ಲಿ ಮನೆಗಳಿಗೆೇ ನೀರು ನುಗ್ಗುತ್ತಿದೆ. ಪರಿಣಾಮ ಗ್ರಾಮಸ್ಥರು ಕಂಗೆಟ್ಟು ಹೋಗಿದ್ದಾರೆ. ಹೌದು ಮಲಪ್ರಭಾ ನದಿ ನೀರಿನ ಪ್ರವಾಹಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ಅದರಲ್ಲೂ ನದಿ ತೀರದ ಪಾತ್ರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮಗಳಲ್ಲಿ ನದಿ ನೀರು ಬಂದಿರುವ ಪರಿಣಾಮ ದನಕರುಗಳಿಗೆ ಮೇವಿಲ್ಲದೆ ರೈತರು ಪರದಾಡುವಂತಾಗಿದೆ. ಅದರಲ್ಲೂ ಬೀರನೂರು ಗ್ರಾಮದಲ್ಲಿ 35 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಈ […]

ಯಾವ ಸಿದ್ದರಾಮಯ್ಯ ಬಂದ್ರು ಏನೂ ಪ್ರಯೋಜನವಿಲ್ಲ: ಇದು ಬಾದಾಮಿ ಕ್ಷೇತ್ರದ ಜನರ ಆಕ್ರೋಶ
Guru

| Edited By: sadhu srinath

Aug 18, 2020 | 12:54 PM

ಬಾಗಲಕೋಟೆ: ಮಲಪ್ರಭಾ ನದಿಯ ಅಬ್ಬರಕ್ಕೆ ಬಾಗಲಕೊಟೆ ಜಿಲ್ಲೆಯಲ್ಲಿನ ನದಿ ತೀರದ ಜನರು ತತ್ತರಿಸಿಹೊಗಿದ್ದಾರೆ. ಅದ್ರಲ್ಲೂ ಬಾದಾಮಿ ತಾಲೂಕಿನ ಬೀರನೂರು ಗ್ರಾಮ‌ದಲ್ಲಿ ಮನೆಗಳಿಗೆೇ ನೀರು ನುಗ್ಗುತ್ತಿದೆ. ಪರಿಣಾಮ ಗ್ರಾಮಸ್ಥರು ಕಂಗೆಟ್ಟು ಹೋಗಿದ್ದಾರೆ.

ಹೌದು ಮಲಪ್ರಭಾ ನದಿ ನೀರಿನ ಪ್ರವಾಹಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ಅದರಲ್ಲೂ ನದಿ ತೀರದ ಪಾತ್ರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮಗಳಲ್ಲಿ ನದಿ ನೀರು ಬಂದಿರುವ ಪರಿಣಾಮ ದನಕರುಗಳಿಗೆ ಮೇವಿಲ್ಲದೆ ರೈತರು ಪರದಾಡುವಂತಾಗಿದೆ. ಅದರಲ್ಲೂ ಬೀರನೂರು ಗ್ರಾಮದಲ್ಲಿ 35 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಈ ಗ್ರಾಮಗಳಲ್ಲಿ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರೈತರಲ್ಲಿ ಆಕ್ರೋಶ, ಅಸಮಾಧಾನಮೂಡಿದೆ. ಯಾವ ಸಿದ್ದರಾಮಯ್ಯ ಬಂದ್ರು ಏನು ಪ್ರಯೋಜನವಿಲ್ಲ. ಸಿದ್ದರಾಮಯ್ಯ ಕಳೆದ ಬಾರಿ ಬಂದು ಹೋದರು. ಆದರೆ ನಮಗೆ ಒಂದೇ ಒಂದು ರೂಪಾಯಿ ಪರಿಹಾರ ಬಂದಿಲ್ಲ. ತಾತ್ಕಾಲಿಕ‌ ಹತ್ತು ಸಾವಿರ ರೂಪಾಯಿ ಕೂಡಾ ಬರಲಿಲ್ಲ.

ಒಂದು ಲಕ್ಷ ರೂಪಾಯಿ ಕೊಟ್ಟು ಎತ್ತು ತಂದಿದ್ದೇನೆ. ಈಗ ಅವುಗಳಿಗೆ ಮೇವಿಲ್ಲ. ಹೀಗೆ ಆದರೆ ನಾವು ಬದುಕೋದ ಹೇಗೆ? ದನಕರುಗಳನ್ನು ಕಟ್ಟಿಕೊಂಡು ಸತ್ತು ಹೋಗ್ತೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada