ರಾಜ್ಯದಲ್ಲಿ ಕೊಂಚ ತಗ್ಗಿದ ಕೊರೊನಾ ಸೋಂಕಿನ ಅಬ್ಬರ

ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 70 ಜನರು ಸತ್ತಿದ್ದಾರೆ ಮತ್ತು ಹೊಸದಾಗಿ 7,606 ಜನರಲ್ಲಿ ಸೋಂಕು ದೃಢಪಟ್ಟಿದೆಯೆಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿಯಿಂದ ಗೊತ್ತಾಗಿದೆ. ಮಹಾಮಾರಿಯಿಂದ ಇದುವರೆಗೆ ಮರಣಿಸಿದವರ ಸಂಖ್ಯೆ ಇಂದು ಹತ್ತು ಸಾವಿರ (10,036) ದಾಟಿದೆ. ಇಲ್ಲಿಯವರೆಗೆ 7,07,860 ಸೋಂಕು ತಾಕಿಸಿಕೊಂಡವರ ಪೈಕಿ 5,92,084 ಜನ ಗುಣಮುಖರಾಗಿ ಮನೆಗಳಿಗೆ ಹಿಂತಿರುಗಿದ್ದಾರೆ ಮತ್ತು ಉಳಿದ 1,15,776 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ […]

ರಾಜ್ಯದಲ್ಲಿ ಕೊಂಚ ತಗ್ಗಿದ ಕೊರೊನಾ ಸೋಂಕಿನ ಅಬ್ಬರ

Updated on: Oct 12, 2020 | 10:54 PM

ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 70 ಜನರು ಸತ್ತಿದ್ದಾರೆ ಮತ್ತು ಹೊಸದಾಗಿ 7,606 ಜನರಲ್ಲಿ ಸೋಂಕು ದೃಢಪಟ್ಟಿದೆಯೆಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿಯಿಂದ ಗೊತ್ತಾಗಿದೆ. ಮಹಾಮಾರಿಯಿಂದ ಇದುವರೆಗೆ ಮರಣಿಸಿದವರ ಸಂಖ್ಯೆ ಇಂದು ಹತ್ತು ಸಾವಿರ (10,036) ದಾಟಿದೆ.

ಇಲ್ಲಿಯವರೆಗೆ 7,07,860 ಸೋಂಕು ತಾಕಿಸಿಕೊಂಡವರ ಪೈಕಿ 5,92,084 ಜನ ಗುಣಮುಖರಾಗಿ ಮನೆಗಳಿಗೆ ಹಿಂತಿರುಗಿದ್ದಾರೆ ಮತ್ತು ಉಳಿದ 1,15,776 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 18 ಜನ ಬಲಿಯಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 3,498 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಗರದಲ್ಲಿ ಇದುವರೆಗೆ ಸೋಂಕಿಗೆ ತುತ್ತಾದವರ ಸಂಖ್ಯೆ 3,362 ತಲುಪಿದೆ ಮತ್ತು ಸೋಂಕಿತರ ಸಂಖ್ಯೆ 2,85,055 ರಷ್ಟಾಗಿದ್ದು ಅವರಲ್ಲಿ 2,17,122 ಜನರು ಗುಣಮುಖರಾಗಿದ್ದಾರೆ. ಮಿಕ್ಕಿದ 64,570 ಸೋಂಕಿತರು ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.