ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್, ಬೊಂಡ ಮಂಜನ ಕಾಲಿಗೆ ಗುಂಡು
ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದ್ದು, ನಟೋರಿಯಸ್ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸಂಘಟಿತ ಅಪರಾಧ ದಳ ಎಸಿಪಿ ಜಗನ್ನಾಥ್ ರೈ ನೇತೃತ್ವದ ತಂಡದಿಂದ ಈ ಕಾರ್ಯಚರಣೆ ನಡೆದಿದ್ದು, ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಅವರಿಂದ ಆತ್ಮರಕ್ಷಣೆಗಾಗಿ ಆರೋಪಿ ಬೊಂಡ ಮಂಜನ ಎಡ ಮೊಣಕಾಲಿಗೆ ಗುಂಡು ಹಾರಿಸಲಾಗಿದೆ. ನಗರದ ಕೋಣನಕುಂಟೆ ಠಾಣಾ ವ್ಯಾಪ್ತಿಯ ನಾರಾಯಣನಗರ ಡಬಲ್ ರೋಡ್ನಲ್ಲಿ ಈ ಘಟನೆ ನೆಡೆದಿದೆ. ಮಂಜನ ವಿರುದ್ದ ಬರೋಬ್ಬರಿ […]
ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದ್ದು, ನಟೋರಿಯಸ್ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಸಂಘಟಿತ ಅಪರಾಧ ದಳ ಎಸಿಪಿ ಜಗನ್ನಾಥ್ ರೈ ನೇತೃತ್ವದ ತಂಡದಿಂದ ಈ ಕಾರ್ಯಚರಣೆ ನಡೆದಿದ್ದು, ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಅವರಿಂದ ಆತ್ಮರಕ್ಷಣೆಗಾಗಿ ಆರೋಪಿ ಬೊಂಡ ಮಂಜನ ಎಡ ಮೊಣಕಾಲಿಗೆ ಗುಂಡು ಹಾರಿಸಲಾಗಿದೆ. ನಗರದ ಕೋಣನಕುಂಟೆ ಠಾಣಾ ವ್ಯಾಪ್ತಿಯ ನಾರಾಯಣನಗರ ಡಬಲ್ ರೋಡ್ನಲ್ಲಿ ಈ ಘಟನೆ ನೆಡೆದಿದೆ.
ಮಂಜನ ವಿರುದ್ದ ಬರೋಬ್ಬರಿ 23 ಪ್ರಕರಣಗಳು ದಾಖಲಾಗಿದ್ದವು.. ತಲಘಟ್ಟಪುರ ಠಾಣೆ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ವಿರುದ್ದ ಬರೋಬ್ಬರಿ 23 ಪ್ರಕರಣಗಳು ದಾಖಲಾಗಿದ್ದವು. ಕಳೆದ ಒಂದು ತಿಂಗಳಿನಿಂದ ಆರೋಪಿ ಪತ್ತೆಗಾಗಿ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸ್ತಿದ್ರು. ಕೋಣನಕುಂಟೆಯಲ್ಲಿ ಆರೋಪಿ ಚಲವಲನದ ಬಗ್ಗೆ ಇಂದು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಪುನೀತ್ ಮತ್ತು ತಂಡ ಆರೋಪಿಯನ್ನು ಬಂಧಿಸಲು ತೆರಳಿದ್ದರು.
ಈ ವೇಳೆ ಬೈಕ್ನಲ್ಲಿ ನಾರಾಯಣನಗರ ಬಳಿ ಪರಾರಿಯಾಕ್ತಿದ್ದಾಗ ಮಂಜನನ್ನ ಪೊಲೀಸರು ಅಡ್ಡಗಟ್ಟಿದ್ದಾರೆ. ಏಕಾಏಕಿ ಸಿಸಿಬಿ ಮುಖ್ಯಪೇದೆ ನಾಗರಾಜ್ ಕೈಗೆ ಆರೋಪಿ ಮಂಜ ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿದ ಇನ್ಸ್ಪೆಕ್ಟರ್ ಪುನೀತ್, ಮಂಜನನ್ನು ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಪ್ರತಿರೋಧವೊಡ್ಡಿ ಇನ್ಸ್ಪೆಕ್ಟರ್ ಮೇಲೂ ಹಲ್ಲೆಗೆ ರೌಡಿ ಮಂಜ ಮುಂದಾಗಿದ್ದಾನೆ.
ಆತ್ಮರಕ್ಷಣೆಗಾಗಿ ನಟೋರಿಯಸ್ ರೌಡಿ ಮಂಜ ಅಲಿಯಾಸ್ ಬೊಂಡಮಂಜನ ಕಾಲಿಗೆ ಗುಂಡು ಹಾರಿಸಿ ರೌಡಿಶೀಟರ್ ಮಂಜನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಗಾಯಾಳು ಹೆಚ್ ಸಿ ನಾಗರಾಜ್ ಮತ್ತು ರೌಡಿಶೀಟರ್ ಮಂಜನನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
Published On - 7:08 am, Wed, 18 November 20