ಅಧಿಕಾರಿಗಳಿಂದ ಕಿರುಕುಳ ಆರೋಪ: ಮಾತ್ರೆ ಸೇವಿಸಿ 5 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಯತ್ನ

| Updated By: ಸಾಧು ಶ್ರೀನಾಥ್​

Updated on: Sep 16, 2020 | 2:12 PM

ರಾಮನಗರ: ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಮನನೊಂದು ಮಾತ್ರೆ ಸೇವಿಸಿ 5 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ಲಾಳಘಟ್ಟದಲ್ಲಿ ನಡೆದಿದೆ. ಲಾಳಘಟ್ಟ ಗ್ರಾಮಲೆಕ್ಕಾಧಿಕಾರಿ (village accountant) ಕವಿತಾ ನಿನ್ನೆ ಸಂಜೆ ಕರ್ತವ್ಯ ನಿರ್ವಹಿಸಿಕೊಂಡು ಮನೆಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ತಹಶೀಲ್ದಾರ್ ಎಲ್. ನಾಗೇಶ್ ಖಾತೆಗಳ ಸಂಬಂಧ ಸಾರ್ವಜನಿಕವಾಗಿ ನಿಂಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕವಿತಾ ಈ ರೀತಿಯ ನಿರ್ಣಯ ತೆಗೆದುಕೊಂಡಿದ್ರು ಎನ್ನಲಾಗುತ್ತಿದೆ. ಸದ್ಯ ಕವಿತಾಗೆ ಚನ್ನಪಟ್ಟಣ […]

ಅಧಿಕಾರಿಗಳಿಂದ ಕಿರುಕುಳ ಆರೋಪ: ಮಾತ್ರೆ ಸೇವಿಸಿ 5 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಯತ್ನ
Follow us on

ರಾಮನಗರ: ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಮನನೊಂದು ಮಾತ್ರೆ ಸೇವಿಸಿ 5 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ಲಾಳಘಟ್ಟದಲ್ಲಿ ನಡೆದಿದೆ.

ಲಾಳಘಟ್ಟ ಗ್ರಾಮಲೆಕ್ಕಾಧಿಕಾರಿ (village accountant) ಕವಿತಾ ನಿನ್ನೆ ಸಂಜೆ ಕರ್ತವ್ಯ ನಿರ್ವಹಿಸಿಕೊಂಡು ಮನೆಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ತಹಶೀಲ್ದಾರ್ ಎಲ್. ನಾಗೇಶ್ ಖಾತೆಗಳ ಸಂಬಂಧ ಸಾರ್ವಜನಿಕವಾಗಿ ನಿಂಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಕವಿತಾ ಈ ರೀತಿಯ ನಿರ್ಣಯ ತೆಗೆದುಕೊಂಡಿದ್ರು ಎನ್ನಲಾಗುತ್ತಿದೆ. ಸದ್ಯ ಕವಿತಾಗೆ ಚನ್ನಪಟ್ಟಣ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕಿರಿಯ ಅಧಿಕಾರಿಗಳಿಗೆ ಭದ್ರತೆ ಇಲ್ಲ ಎಂದು ತಹಶೀಲ್ದಾರ್ ಕಚೇರಿ ಮುಂದೆ ಕಂದಾಯ ಅಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.