ನಾಯಕ್ ತಾಂಡಾದಲ್ಲಿ 6 ಕೋಟಿ ರೂ ಗಾಂಜಾ ಪ್ರಕರಣ: CPI ಸೇರಿ 5 ಸಿಬ್ಬಂದಿ ಅಮಾನತು
ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ್ ತಾಂಡಾದಲ್ಲಿ 6 ಕೋಟಿ ಮೌಲ್ಯದ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಆರೋಪದ ಮೇಲೆ ಕಾಳಗಿ ಠಾಣೆಯ CPI ಸೇರಿ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಜಿಲ್ಲಾ SP ಡಾ. ಸಿಮಿ ಮೇರಿಯಂ ಜಾರ್ಜ್ ಸಿಬ್ಬಂದಿಯ ಅಮಾನತಿಗೆ ಆದೇಶ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತಾಂಡಾದ ಕುರಿ ಫಾರ್ಮ್ಹೌಸ್ ಒಂದರಲ್ಲಿ 1,300 ಕಿಲೋ ಗಾಂಜಾ ಪತ್ತೆಯಾಗಿತ್ತು. ಬೆಂಗಳೂರಿನ ಶೇಷಾದ್ರಿಪುರಂ […]
ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ್ ತಾಂಡಾದಲ್ಲಿ 6 ಕೋಟಿ ಮೌಲ್ಯದ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಕರ್ತವ್ಯ ಲೋಪ ಆರೋಪದ ಮೇಲೆ ಕಾಳಗಿ ಠಾಣೆಯ CPI ಸೇರಿ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಜಿಲ್ಲಾ SP ಡಾ. ಸಿಮಿ ಮೇರಿಯಂ ಜಾರ್ಜ್ ಸಿಬ್ಬಂದಿಯ ಅಮಾನತಿಗೆ ಆದೇಶ ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ತಾಂಡಾದ ಕುರಿ ಫಾರ್ಮ್ಹೌಸ್ ಒಂದರಲ್ಲಿ 1,300 ಕಿಲೋ ಗಾಂಜಾ ಪತ್ತೆಯಾಗಿತ್ತು.
ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ರೇಡ್ ಮಾಡಿದ್ದ ವೇಳೆ 6 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿತ್ತು.
Published On - 12:44 pm, Sat, 12 September 20