ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!

ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಶೇಕ್ ಫಾಝಿಲ್ ಬಗ್ಗೆ ಬಗೆದಷ್ಟು ವಿಚಾರಗಳು ಹೊರಬೀಳುತ್ತಿವೆ.

ಬೆಂಗಳೂರಿನಲ್ಲಿ ಕನ್ಸ್​ಟ್ರಕ್ಷನ್ ಕಂಪನಿ ನಡೆಸುತ್ತಿದ್ದ ಫಾಝಿಲ್..
ಕೊಲಂಬೊದ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದ್ದ ಫಾಝಿಲ್, ಬೆಂಗಳೂರಿನಲ್ಲಿ ಬಿಲ್ಡರ್ ಎಂದು ಹೇಳಿ ಕಟ್ಟಡ ಖರೀದಿಸುತ್ತಿದ್ದ. ಲಿಟಿಗೇಷನ್ ಇರುವ ಕಟ್ಟಡ ಖರೀದಿಸಿ ಸೆಟ್ಲ್​​ಮೆಂಟ್ ಮಾಡ್ತಿದ್ದ. ಜೊತೆಗೆ ಕೋಟಿ ಕೋಟಿ ಬೆಲೆ ಬಾಳುವ ಕಟ್ಟಡ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದ.

ಲಿಟಿಗೇಷನ್ ಸೆಟ್ಲ್​​ಮೆಂಟ್ ಮಾಡಿ, ಕೋಟಿ ಕೋಟಿ ಹಣಕ್ಕೆ ಕಟ್ಟಡ ಮಾರಿ ಹಣ ಸಂಪಾದಿಸುತ್ತಿದ್ದ. ಜೊತೆಗೆ ಬ್ಯಾಂಕ್​ಗಳಲ್ಲಿ ಲೋನ್ ಬಾಕಿ ಇರುತ್ತಿದ್ದ ಕಟ್ಟಡಗಳೇ ಇವನ ಟಾರ್ಗೆಟ್ ಆಗಿರುತ್ತಿದ್ದವು. ಹರಾಜಿಗೆ ಬಂದ ಕಟ್ಟಡಗಳ ಲೋನ್ ಸೆಟ್ಲ್​​ ಮಾಡಿ ಅವುಗಳನ್ನು ತಾನೇ ಖರೀದಿಸಿ ಮತ್ತೆ ಮಾರುತ್ತಿದ್ದ.
ಕಡಿಮೆ ಸಂಭಾವನೆ ಪಡೆವ ನಟಿಯರೆ ಈತನ ಟಾರ್ಗೆಟ್​..
ಇದೆ ಫಾಝಿಲ್ ತಾನು ಹಣ ಹೂಡಿದ್ದ ಕ್ಯಾಸಿನೋ ಮಾರ್ಕೆಟಿಂಗ್​ಗೆ ಕಡಿಮೆ ಸಂಭಾವನೆ ಪಡೆಯುವ ನಟಿಯರನ್ನು ಹುಡುಕುತ್ತಿದ್ದ. ಜೊತೆಗೆ ಕರ್ನಾಟಕದಲ್ಲಿ ಹೈ-ಫೈ ಲಿಂಕ್ ಹೊಂದಿದ್ದ ನಟಿಯರಿಗೆ ಶೋಧಿಸುತ್ತಿದ್ದ, ಈ ಸಮಯದಲ್ಲಿ ಫಾಝಿಲ್​ಗೆ ಸಿಕ್ಕಿದ್ದೇ ಸಂಜನಾ.

ಸಂಜನಾಳನ್ನು ಪರಿಚಯ ಮಾಡಿಕೊಂಡ ಫಾಝಿಲ್, ಸಂಜನಾಳನ್ನು ತನ್ನ ಕ್ಯಾಸಿನೋಗೆ ಕರೆದೊಯ್ಯುತ್ತಿದ್ದ. ನಂತರ ಸಂಜನಾ ಮೂಲಕ ಯುವಕರನ್ನು ಫಾಝಿಲ್ ಸೆಳೆಯುತ್ತಿದ್ದ, ಅಲ್ಲದೆ ರಾಜ್ಯದ ಶ್ರೀಮಂತರೆ ಇವನ ಫಸ್ಟ್​ ಟಾರ್ಗೆಟ್​ ಆಗಿರುತ್ತಿದ್ದರು.

Click on your DTH Provider to Add TV9 Kannada