ರಫೇಲ್ ತಯಾರಿಸುವ ತಾಕತ್ತು HALಗೆ ಇದೆ, ಆದರೆ..
ಹೆಚ್‌ಎಎಲ್ ತನ್ನ ಹೆಲಿಕಾಪ್ಟರ್ ತಯಾರಿಕೆ ಬಲಪಡಿಸಿದೆ. ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ ಎಂದು HAL ಸಿಎಂಡಿಆರ್ ಮಾಧವನ್ ತಿಳಿಸಿದ್ದಾರೆ.
ಬೆಂಗಳೂರು: ರಫೇಲ್ ತಯಾರಿಸುವ ತಾಕತ್ತು HALಗೆ ಇದೆ. ಆದರೆ, ಡಾಸಲ್ಟ್ ಸಂಸ್ಥೆ ಕೋರ್ ಟೆಕ್ನಾಲಜಿಯನ್ನು ನಮಗೆ ನೀಡಲು ಸಿದ್ಧವಿರಲಿಲ್ಲ. ಕೇವಲ ರಫೇಲ್ ಅಸ್ಸೆಂಬ್ಲಿ ಮಾಡೋಕೆ ನಾವು ಸಿದ್ಧರಿರಲಿಲ್ಲ ಎಂದು HAL ಮುಖ್ಯಸ್ಥರಾದ (ಸಿಎಂಡಿಆರ್) ಮಾಧವನ್ ಹೇಳಿದ್ದಾರೆ.
ಇಂದು (ಫೆ.4) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಧವನ್, ಕೊರೊನಾ ಸಮಯದಲ್ಲಿ ಸಂಕಷ್ಟ ಆಗಿತ್ತು. ಕೊವಿಡ್ ಮಧ್ಯೆಯೂ 150ನೇ ಡಾನಿಯರ್ ಹೆಲಿಕಾಪ್ಟರ್ ಸಿದ್ಧವಾಗಿದೆ. ಈ ಬಾರಿ ವಹಿವಾಟು ಹೆಚ್ಚಿಸಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶ. HAL ವಿನ್ಯಾಸ ಹಾಗೂ ಉತ್ಪಾದನೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದರು.
ಎಚ್‌ಎಎಲ್ ತನ್ನ ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯವನ್ನು ಸುಧಾರಿಸಿಕೊಂಡಿದೆ. ಇದರ ಜತೆ ಈ ವರ್ಷ ನಾವು ದೇಶೀಯ ತಯಾರಿಕೆಗೆ ಹೆಚ್ಚು ಒತ್ತು ನೀಡಿದ್ದೇವೆ. HAL ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬಂದಿದೆ. ಈ ಬಾರಿ 16 ಲಘು ಯುದ್ಧ ವಿಮಾನ ತಯಾರಿಕೆಗೆ ಆರ್ಡರ್ ಬಂದಿದೆ. ಇದರ ಮೌಲ್ಯ ಸುಮಾರು 36 ಸಾವಿರ ಕೋಟಿ ರೂಪಾಯಿ. 36 ತಿಂಗಳ ನಂತರ ಮೊದಲ ಲಘು ಯುದ್ಧ ವಿಮಾನವನ್ನು ಡೆಲಿವರಿ ಮಾಡಿದ್ದೇವೆ. ಮುಂದಿನ 9 ವರ್ಷಗಳಲ್ಲಿ ಅಷ್ಟೂ ಯುದ್ಧ ವಿಮಾನವನ್ನು ತಯಾರಿಸಿ ಪೂರೈಸುತ್ತೇವೆ ಎಂದು ಮಾಧವನ್ ಮಾಹಿತಿ ನೀಡಿದರು.
ಎಚ್‌ಎಎಲ್ ಭಾರತೀಯ ವಾಯುಪಡೆಗೆ 83 ತೇಜಸ್ ವಿಮಾನಗಳನ್ನು ನೀಡುತ್ತಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳು ತೇಜಸ್ ಕೊಳ್ಳಲು ಆಸಕ್ತಿ ತೋರಿವೆ. ಸದ್ಯ, 12 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ತಯಾರಿಕೆಗೆ ಆರ್ಡರ್ ಬಂದಿದೆ ಎಂದು ಮಾಧವನ್ ತಿಳಿಸಿದರು.
HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್