ದೆಹಲಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ: ಕುಮಾರಸ್ವಾಮಿ ಸರಣಿ ಟ್ವೀಟ್

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೀದಿಗಳಿದಿರುವ ರೈತರ ಅಳಲು ಆಲಿಸಬೇಕು ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ: ಕುಮಾರಸ್ವಾಮಿ ಸರಣಿ ಟ್ವೀಟ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
Edited By:

Updated on: Nov 30, 2020 | 7:22 PM

ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೀದಿಗಳಿದಿರುವ ರೈತರ ಅಳಲು ಆಲಿಸಬೇಕು ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.

ರೈತರು ನಡೆಸುತ್ತಿರುವ ಹೋರಾಟ 5ನೇ ದಿನಕ್ಕೆ ತಲುಪಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಅನುಮಾನಗಳನ್ನು ನಿವಾರಿಸುವ ಪ್ರಯತ್ನ ಮಾಡಬೇಕು. ಇಲ್ಲವಾದರೆ, ರೈತರಲ್ಲಿ ಅನುಮಾನಗಳು ಬೆಳೆಯುತ್ತಾ ಹೋಗುತ್ತದೆ ಎಂದು ಹೇಳಿದ್ದಾರೆ.

ರೈತರ ಸಮಸ್ಯೆಗಳನ್ನು ಆಲಿಸಬೇಕಾದರೆ ಬುರಾರಿ ಉದ್ಯಾನಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರ ರೈತರಲ್ಲಿ ಮನವಿ ಮಾಡಿದೆ. ಆದರೆ ಇದನ್ನು ರೈತರು ಒಪ್ಪಿಲ್ಲ. ಇದು ತಮಗೆ ಒಡ್ಡಿರುವ ಷರತ್ತು ಎಂದು ಅವರು ಭಾವಿಸಿದ್ದಾರೆ. ಈ ಷರತ್ತನ್ನು ತಕ್ಷಣ ಹಿಂದಕ್ಕೆ ಪಡೆಯುವುದೇ ಸೂಕ್ತ ಎಂದು ಎಚ್​ಡಿಕೆ ಸಲಹೆ ನೀಡಿದ್ದಾರೆ. ಕೊರೊನಾ ಸೋಂಕು ವ್ಯಾಪಿಸಿರುವ ಈ ಸಮಯದಲ್ಲಿ ಪ್ರತಿಭಟನೆಯಿಂದ ಯಾರಿಗಾದರೂ ಅಪಾಯವಾದರೆ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು…
ಕೊರೊನಾ ಹೆಚ್ಚಳಕ್ಕೆ ಕಾರಣವಾಗಲಿದೆಯೇ ರೈತರ ದೆಹಲಿ ಚಲೋ ಚಳವಳಿ
ಪಂಜಾಬ್ ರೈತರಿಂದ ದೆಹಲಿ ಚಲೊ: ಇಲ್ಲಿವೆ ಕುಗ್ಗದ-ಜಗ್ಗದ ರೈತನ ದಾರುಣ ಚಿತ್ರಣಗಳು
ಪ್ರತಿಭಟನೆ ಸ್ಥಳ ಬದಲಿಸಿದರೆ ಮಾತುಕತೆ ಎಂಬ ಅಮಿತ್​ ಶಾ ಷರತ್ತಿಗೆ ರೈತರ ತಿರಸ್ಕಾರ

Published On - 7:19 pm, Mon, 30 November 20