AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manglore Tourism: ಕಡಲ ಕಿನಾರೆ ಮಂಗಳೂರಿನ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ

ಪ್ರಮುಖ ಆಕರ್ಷಣೀಯ ಅಂಶಗಳೆಂದರೆ ಬಂದರು ಪ್ರದೇಶಗಳು, ಕಡಲ ತೀರಾ, ನೈಸರ್ಗಿಕ ಸೌಂದರ್ಯ ಮತ್ತು ಪ್ರಾಚೀನ ದೇವಾಲಯಗಳು ಹಾಗು ಆಹಾರ ಪದ್ಧತಿ. ನೀವು ಕೇವಲ ಎರಡು ದಿನಗಳ ಒಳಗಾಗಿ ನೋಡಬಹುದಾದ ಮಂಗಳೂರಿನ ಸುಂದರ ತಾಣಗಳ ಕುರಿತ ಮಾಹಿತಿ ಇಲ್ಲಿದೆ

Manglore Tourism: ಕಡಲ ಕಿನಾರೆ ಮಂಗಳೂರಿನ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ
Image Credit source: Thrillophilia
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 01, 2022 | 2:17 PM

ಮಂಗಳೂರು ನಗರವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೀಯ ಅಂಶಗಳೆಂದರೆ ಬಂದರು ಪ್ರದೇಶಗಳು, ಕಡಲ ತೀರಾ, ನೈಸರ್ಗಿಕ ಸೌಂದರ್ಯ ಮತ್ತು ಪ್ರಾಚೀನ ದೇವಾಲಯಗಳು ಹಾಗು ಆಹಾರ ಪದ್ಧತಿ. ನೀವು ಕೇವಲ ಎರಡು ದಿನಗಳ ಒಳಗಾಗಿ ನೋಡಬಹುದಾದ ಮಂಗಳೂರಿನ ಸುಂದರ ತಾಣಗಳ ಕುರಿತ ಮಾಹಿತಿ ಇಲ್ಲಿದೆ.

1. ಪಿಲಿಕುಳ ನಿಸರ್ಗಧಾಮ ಪಿಲಿಕುಳ ನಿಸರ್ಗಧಾಮವು 350 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಅಲ್ಲಿ ಮೃಗಾಲಯ, ಪಾರಂಪರಿಕ ಗ್ರಾಮ, ಕೆರೆ, ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ವಿಸ್ತಾರವಾದ ಗಾಲ್ಫ್ ಕೋರ್ಸ್ ಇದೆ. ನಿಮ್ಮ ಕುಟುಂಬವನ್ನು ಒಂದು ದಿನದ ವಿಹಾರಕ್ಕೆ ಅಥವಾ ಪಿಕ್ನಿಕ್‌ಗೆ ಕರೆದೊಯ್ಯಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

2.ನವ ಮಂಗಳೂರು ಬಂದರು: ಇದು ದೇಶದ 7ನೇ ಅತಿದೊಡ್ಡ ಬಂದರು ಮತ್ತು ಕರ್ನಾಟಕದ ಏಕೈಕ ಪ್ರಮುಖ ಬಂದರು. ಈ ಬಂದರಿನಲ್ಲಿ ಕಬ್ಬಿಣದ ಅದಿರು, ಗ್ರಾನೈಟ್, ಮ್ಯಾಂಗನೀಸ್ ಮುಂತಾದ ಖನಿಜಗಳನ್ನು ಮುಖ್ಯವಾಗಿ ರಫ್ತು ಮಾಡುವ ದೊಡ್ಡ, ದೊಡ್ಡ ಹಡಗುಗಳನ್ನು ನೀವು ಇಲ್ಲಿ ಕಾಣಬಹುದು.

3.ಮಂಗಳಾದೇವಿ ದೇವಾಲಯ

ಮಂಗಳಾದೇವಿ ದೇವಾಲಯವು ದುರ್ಗಾ ದೇವಿಯ ವಿವಿಧ ರೂಪಗಳಲ್ಲಿ ಒಂದಾಗಿದ್ದು, ಇದನ್ನು ಕ್ರಿ.9000 ರಲ್ಲಿ ನಿರ್ಮಿಸಲಾಗಿದೆ ಎಂಬ ಉಲ್ಲೇಖವಿದೆ. ಪ್ರಸ್ತುತ ಮಂಗಳೂರಿನಲ್ಲಿರುವ ಪುರಾತನ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಮಂಗಳಾದೇವಿ ದೇವಾಲಯದಿಂದಾಗಿ ಮಂಗಳೂರಿಗೆ ಮಂಗಳೂರು ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.

4.ಸುಲ್ತಾನ್ ಬತ್ತೇರಿ ಸುಲ್ತಾನ್ ಬತ್ತೇರಿಯು ಐತಿಹಾಸಿಕ ಸ್ಥಳಗಳ ಬಗ್ಗೆ ಆಸಕ್ತಿ ಇರುವವರಿಗೆ ಭೇಟಿ ನೀಡಲು ಇದು ಸೂಕ್ತ ಸ್ಥಳವಾಗಿದೆ. ಅರೇಬಿಯನ್ ಸಮುದ್ರದ ಮೂಲಕ ಆಕ್ರಮಣ ಮಾಡುವ ಹಡಗುಗಳ ಮೇಲೆ ಕಣ್ಣಿಡಲು ಟಿಪ್ಪು ಸುಲ್ತಾನ್ ಕಪ್ಪು ಕಲ್ಲಿನಿಂದ ಕಾವಲುಗೋಪುರವನ್ನು ನಿರ್ಮಿಸಿದನು. ಅವರು ಭೂಗತ ಕೋಣೆಗಳಲ್ಲಿ ಫಿರಂಗಿಗಳನ್ನು ಮತ್ತು ಗನ್‌ಪೌಡರ್‌ಗಳನ್ನು ಸಂಗ್ರಹಿಸುತ್ತಿದ್ದರು. ನಂತರ ಬ್ರಿಟಿಷರು ಅದನ್ನು ವಶಪಡಿಸಿ ನೌಕಾ ಕಚೇರಿಯನ್ನಾಗಿ ಮಾಡಿದರು ಎಂದು ಅಲ್ಲಿನ ಇತಿಹಾಸ ಹೇಳುತ್ತದೆ.

5.ಜಮಾಲಾಬಾದ್ ಕೋಟೆ ಜಮಾಲಾಬಾದ್ ಕೋಟೆಯು ಟ್ರೆಕ್ಕಿಂಗ್ ಇಷ್ಟಪಡುವವರಿಗೆ ಒಂದು ಉತ್ತಮ ತಾಣವಾಗಿದೆ. ಮಂಗಳೂರಿನಿಂದ 65 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಹಾದಿಗಳು ಕಿರಿದಾಗಿದ್ದು, ತುದಿಯನ್ನು ತಲುಪಿದೊಡನೆ ಕೆಲವು ಐತಿಹಾಸಿಕ ಅದ್ಭುತ ನೋಟಗಳನ್ನು ಕಾಣಬಹುದು. ನೀವು ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಒಂದೊಳ್ಳೆ ಪ್ರವಾಸಿ ತಾಣವಾಗಿದೆ.

6.ಪಣಂಬೂರು ಬೀಚ್ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೆಚ್ಚು ಜನಪ್ರಿಯವಾಗಿರುವ ಮಂಗಳೂರಿನ ಈ ಪಣಂಬೂರು ಬೀಚ್ ನೀವು ಭೇಟಿ ನೀಡಬಹುದಾದ ಒಂದೊಳ್ಳೆ ಸ್ಥಳವಾಗಿದೆ. ಈ ಬೀಚ್ ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇಲ್ಲಿ ನೀವು ವಿವಿಧ ರೀತಿಯ ಜಲ ಕ್ರೀಡೆಗಳನ್ನು ಆನಂದಿಸಬಹುದು. ಮುಸ್ಸಂಜೆಯ ವೇಳೆಯಲ್ಲಿ ನಿಮ್ಮವರೊಂದಿಗೆ ಕಾಲ ಕಳೆಯಬಹುದಾದ ಒಂದೊಳ್ಳೆ ತಾಣವಾಗಿದೆ.

7. ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ

1912, ಶ್ರೀ ನಾರಾಯಣ ಗುರುಗಳು ಬಿಲ್ಲವ ಸಮುದಾಯಕ್ಕಾಗಿ ಈ ದೇವಾಲಯವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಈ ದೇವಾಲಯವು ಬೃಹತ್ತಾಗಿದ್ದು, ಸುತ್ತಲೂ ಅಮೃತಶಿಲೆಯ ಗೋಡೆಗಳು ಮತ್ತು ಮಹಡಿಗಳು ಮತ್ತು ಸಂಪೂರ್ಣ ಸುಸಜ್ಜಿತ ವೈವಾಹಿಕ ಸ್ಥಳಗಳನ್ನು ಒಳಗೊಂಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ಕಣ್ಣಿಗೊಂದು ಹಬ್ಬ.

Published On - 2:16 pm, Tue, 1 November 22

ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದೊಂದೇ ಮಾರ್ಗ ಇರೋದು: ಮಹಾದೇವಸ್ವಾಮಿ
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದೊಂದೇ ಮಾರ್ಗ ಇರೋದು: ಮಹಾದೇವಸ್ವಾಮಿ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಭಾರತ-ಪಾಕಿಸ್ತಾನದ ದಾಳಿ ಕೊನೆಗೊಳಿಸಲು ಮೆಹಬೂಬಾ ಮುಫ್ತಿ ಮನವಿ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಅಮಿತ್ ಶಾ ಬಿಎಸ್​ಎಫ್, ಸಿಅರ್​​ಪಿಎಫ್ ಡಿಜಿಗಳ ಜೊತೆ ನಡೆಸಲಿದ್ದಾರೆ ಸಭೆ
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಪಾಕ್​ ದಾಳಿಯ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಒಮರ್
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಹಾರಂಗಿ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
ಆಪರೇಷನ್ ಸಿಂಧೂರ್​ ಕಾರ್ಯಾಚರಣೆ ಬೆಂಬಲಿಸಿ ಕಾಂಗ್ರೆಸ್​ ತಿರಂಗಾ ಯಾತ್ರೆ
"ಮೋದಿ ಹೆಸರು ಹೇಳಲೂ ಹೆದರುವ ಹೇಡಿ ನಮ್ಮ ಪ್ರಧಾನಿ": ಪಾಕ್​ ಸಂಸದ ವ್ಯಂಗ್ಯ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF