ಈ ರಾಶಿಯವರಿಗೆ ಇಂದು ವೃತ್ತಿಪರ ರಂಗದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ ಇದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ, ಶನಿವಾರ ಸಾಧನೆಗೆ ಚುರುಕುತನ, ರಾಜಕೀಯದಲ್ಲಿ ಇಬ್ಬಂದಿತನ, ಸಹೋದ್ಯೋಗಿಗಳ ಜೊತೆ ಮೊಂಡುತನ ಇವೆಲ್ಲ ಇರಲಿವೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ – 06 – 26 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:31 – 11:03, ಯಮಘಂಡ ಕಾಲ 14:08 – 15:40, ಗುಳಿಕ ಕಾಲ 06:27 – 07:59
ಮೇಷ ರಾಶಿ: ವಿನಾಕಾರಣ ವಾಗ್ವಾದದಿಂದ ನೀವು ಬೇಸರವಾಗಬಹುದು. ಇಂದು ನಿಮ್ಮ ಹಿಂದಿನ ಶ್ರಮಕ್ಕೆ ಫಲವು ಪ್ರಾಪ್ತವಾಗಿ ಖುಷಿ ಎನಿಸುವುದು. ಜೀವನದಲ್ಲಿ ನಮಗಾಗಿ ನಾವು ಬದುಕಬೇಕೆ ಹೊರತು ಬೇರೆಯವರಿಗೋಸ್ಕರವಲ್ಲ ಎಂಬ ಯೋಚನೆ ಬರುವುದು. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೇ. ಬದಲಾವಣೆಯೆ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ನಿಲ್ಲುವುದು. ಇಂದು ಸಂಗಾತಿಗೆ ನಿಮ್ಮ ಮೇಲೆ ಅಭಿಮಾನ ಬರಬಹುದು. ಅವಿವಾಹಿತರು ವಿವಾಹದ ಬಗ್ಗೆ ಬಂಧುಗಳ ಜೊತೆ ಚರ್ಚಿಸುವಿರಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ.
ವೃಷಭ ರಾಶಿ: ನೀವು ಹಾಕಿಕೊಂಡ ಗುರಿಯನ್ನು ಆದಷ್ಟು ಬೇಗ ಮುಟ್ಟಿ. ತಪ್ಪನ್ನು ಯಾರ ಮೇಲೋ ಹಾಕುವಿರಿ. ನಿಮ್ಮ ಸ್ವಭಾವಕ್ಕೆ ಜನರು ಸಕ್ಕರೆಯನ್ನು ಇರುವೆಗಳು ಮುತ್ತಿದಂತೆ ಜನರು ಮುತ್ತುವರು. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಉಪಯೋಗವಾಗಬಹುದು. ಸಂಗಾತಿಯೊಡನೆ ಸಲ್ಲಾಪ ಮಾಡುವಿರಿ. ಸಂಪತ್ತು ನಿಮ್ಮ ಶ್ರಮಕ್ಕನುಸಾರ ಸಿಗಲಿದೆ. ನಿಮ್ಮ ಬರೆವಣಿಗೆಯಿಂದ, ಮಾತಿನಿಂದ ನಿಮಗೆ ಕೀರ್ತಿಯು ಲಭ್ಯ. ಇಂದು ನೀವು ಯಾರದೋ ವಿರುದ್ಧವಾಗಿ ಹೋಗುವುದು ಬೇಡ. ಲೆಕ್ಕಪತ್ರವನ್ನು ಸರಿಯಾಗಿ ಇಟ್ಟುಕೊಳ್ಳಿ. ಕ್ರಿಯಾಶೀಲತೆಗೆ ನಿಮಗೆ ಯಾವುದೇ ಪ್ರಶಂಸೆ ಸಿಗದಿರುವುದು ಕಷ್ಟವಾದೀತು. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಇಲ್ಲವಾದರೆ ದೇಹಾರೋಗ್ಯ ಕೆಡಬಹುದು. ಉತ್ತಮ ಆರೋಗ್ಯದಿಂದ ಆನಂದಿಸುವಿರಿ. ನಿಮ್ಮವರ ಬಗ್ಗೆ ಸರಿಯಾದ ಭಾವನೆಯು ಇಲ್ಲದೇ ಇರಬಹುದು.
ಮಿಥುನ ರಾಶಿ: ಮನಸ್ಸಿನಲ್ಲಿಯೇ ಒದ್ದಾಡುವ ನಿಮಗೆ ಹಿತವಾದ ಸಂಘದ ಬರುವುದು. ಇಂದು ದಾಂಪತ್ಯಜೀವನದಲ್ಲಿ ಬಹಳ ಗೊಂದಲವಾಗಬಹುದು. ಇನ್ಮೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಾವಧಾನತೆಯಿರಲಿ. ಸ್ನೇಹಿತರ ಜೊತೆ ಸೇರಿ ಹಣವನ್ನು ಖರ್ಚು ಮಾಡಲು ಮುಂದಾಗುತ್ತೀರಿ. ನಿಮ್ಮ ನ್ಯೂನತೆಗಳು ಇನ್ನೊಬ್ಬರ ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ಇಂದು ನಿಮ್ಮ ಪೂರ್ವಜರ, ಹಿರಿಯರ ಕಾರ್ಯಗಳು ನೆನಪಾಗುವುದು. ಸಂಗಾತಿಯ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ನಿಮ್ಮ ಮಾತುಗಳನ್ನು ಹರಿ ಬಿಡುವುದು ಬೇಡ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಈ ದಿನ ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಆರೋಗ್ಯದ ಆರೈಕೆಯ ಬಗ್ಗೆ ಗಮನವಿರಲಿ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ: ನಿಮಗೆ ಪ್ರತಿ ಹಂತವೂ ಪರೀಕ್ಷೆಯ ಕಾಲವಾಗಿರುತ್ತದೆ. ಇಂದು ನೀವು ಒಪ್ಪಿಕೊಂಡ ಕಾರ್ಯವನ್ನು ಬಿಡದೆ ಮುನ್ನಡೆಸು ಛಾತಿ ನಿಮ್ಮ ಯಶಸ್ಸಿನ ಗುಟ್ಟುಗಳಲ್ಲೊಂದು. ಗೊತ್ತಿದ್ದೂ ಉದ್ವೇಗಕ್ಕೆ ಒಳಗಾಗಬೇಡಿ. ಸಂಗಾತಿಯ ಬಗ್ಗೆ ಅಸೂಯೆ ಬರಬಹುದು. ಇಂದು ಹುಟ್ಟಿದ ಪ್ರೇಮವು ಕೆಲವೇ ದಿನದಲ್ಲಿ ಸಾಯುತ್ತದೆ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ಇರುವಿರಿ. ಅಧ್ಯಾತ್ಮದ ಚಿಂತನೆಯಿಂದ ನಿಮ್ಮ ಬದುಕಿನ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಯಾರನ್ನೂ ನೀವು ಪೂರ್ಣವಾಗಿ ನಂಬಲಾರಿರಿ. ಸಂಗಾತಿಯ ಬಗ್ಗೆ ಕುತೂಹಲವಿರಬಹುದು. ಸ್ಪರ್ಧೆಯಲ್ಲಿ ಸಣ್ಣ ಅಂತರದಲ್ಲಿ ಸೋಲು. ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ಖಾಸಗಿ ಸಂಸ್ಥೆಯಲ್ಲಿ ಉನ್ನತ ಸ್ಥಾನ, ನೆಮ್ಮದಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ಬೆರೆಯುವಿಕೆಯು ಕಡಿಮೆ ಆಗಬಹುದು. ನಿಮ್ಮ ತಿಳುವಳಿಕೆ ಎಲ್ಲರೂ ಬಹಳ ಪ್ರಭಾವಿತರಾಗಬಹುದು.
ಸಿಂಹ ರಾಶಿ: ಎಲ್ಲರ ವಿರೋಧದ ನಡುವೆಯೂ ನಿಮಗೆ ಅನಿಸಿದ್ದನ್ನು ಮಾಡುವಿರಿ. ಇಂದು ಯಾರದೋ ಜೊತೆ ವ್ಯಾಪಾರದ ಕಾರಣಕ್ಕೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ನೀವು ವಾಹನವನ್ನು ಚಾಲನೆ ಮಾಡುವುದು ಬೇಡ. ಸ್ಥಿರಾಸ್ತಿಯು ಕೈ ತಪ್ಪುವ ಸೂಚನೆ ಸಿಗಲಿದ್ದು, ಏನು ಮಾಡುವ ಆಲೋಚನೆ ಬರದು. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಎಲ್ಲ ಸೋಲುಗಳನ್ನು ಪಾಠವನ್ನಾಗಿ ಸ್ವೀಕರಿಸಿ, ಸಂತೋಷವೂ ಸಿಗುವುದು. ಪುತ್ರೋತ್ಸವದ ಆನಂದ ನಿಮ್ಮ ಪಾಲಿಗಿದೆ. ನೆರೆ-ಹೊರೆಯವರ ಜೊತೆ ಕಲಹವಾಗಬಹುದು. ನೀವು ಕೊಟ್ಟ ಹಣವು ಬರಬೇಕಾದ ಕಡೆಯಿಂದ ಬಾರದೇ ಇರಬಹುದು. ಮರೆವಿನ ಶಕ್ತಿ ಅತಿಯಾದಂತೆ ತೋರುವುದು. ಕೆಲವು ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಹೊಸ ಯೋಜನೆಯನ್ನು ಪಡೆದುಕೊಳ್ಳುವಿರಿ. ನೀವು ಇಂದು ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ಯಾರಮೇಲೂ ಅವಲಂಬಿತವಾಗುವುದು ನಿಮಗೆ ಇಷ್ಟವಾಗದು.
ಕನ್ಯಾ ರಾಶಿ: ವೃತ್ತಿಯಲ್ಲಿ ಒತ್ತಡಕ್ಕೆ ಕೆಲವು ಕಾರ್ಯವನ್ನು ಮಾಡಬೇಕಾಗುವುದು. ನೀವು ಹೊಸ ವಸ್ತುಗಳನ್ನು ಖರೀದಿಸುವಿರಿ. ಇದರಿಂದ ಮನೆಯಲ್ಲಿ ಕಿರಿಕಿರಿಯ ವಾತಾವರಣವೂ ನಿರ್ಮಾಣವಾಗುವುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳಿಂದ ಹೆಚ್ಚು ಲಾಭವಿರಲಿದೆ. ಆರೋಪಗಳನ್ನು ನೀವು ಸುಳ್ಳಾಗಿಸುವಿರಿ. ಯಾವ ಮಾತನ್ನೂ ಯೋಚಿಸದೇ ಕೊಡಬೇಡಿ. ಅದೇ ಮುಳುವಾದೀತು. ಸಂಗಾತಿಯ ಸೌಂದರ್ಯಕ್ಕೆ ಮಾರುಹೋಗಬೇಡಿ. ಎಲ್ಲರ ಜೊತೆ ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ಯಾವ ಕಾರ್ಯವನ್ನೂ ಪೂರ್ಣವಾದ ಮನಸ್ಸಿನಿಂದ ಮಾಡಲಾರಿರಿ. ನಿಮ್ಮ ಬಗ್ಗೆ ನಂಬಿಕೆ ಕಡಿಮೆ ಆಗಬಹುದು. ರಾಜಕೀಯ ನೇತಾರರಿಗೆ ಇಬ್ಬಂದಿತನ. ಕೇಳಿ ಬಂದವರಿಗೆ ಅಲ್ಪ ಸಹಾಯ. ಕುಟುಂಬದ ಬಗ್ಗೆ ನಿಮಗೆ ಹೆಮ್ಮೆ ಎನಿಸಬಹುದು. ಹಳೆಯ ಬಂಧುಗಳನ್ನು ಭೇಟಿಯಿಂದ ನಿಮ್ಮಲ್ಲಿ ಉತ್ಸಾವಿರುವುದು. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ.