AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮುಕ್ತವಾದ ಸಾಂಸ್ಕೃತಿಕ ನಗರಿಗೆ ಹೊರ ರಾಜ್ಯದಿಂದ ಬಂದ್ರು ನೂರಾರು ಜನ!

ಮೈಸೂರು: ಅಂತೂ ಇಂತೂ ಮೈಸೂರು ಕೊರೊನಾ ಮುಕ್ತವಾಗಿದೆ. ಒಂದ್ಕಡೆ ಸಂಭ್ರಮವಿದ್ರೆ, ಮತ್ತೊಂದ್ಕಡೆ ಹೊರ ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಾಗ್ತಿರೋದು ಆತಂಕಕ್ಕೆ‌ ಕಾರಣವಾಗಿದೆ. ಇನ್ನೊಂದ್ಕಡೆ ವಲಸೆ ಕಾರ್ಮಿಕರು‌ ಮೈಸೂರು ಬಿಟ್ಟು ತಮ್ಮ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಆದ್ರೆ ನೂರಾರು ಜನ ಸಾಂಸ್ಕೃತಿಕ ನಗರಿಗೆ ಎಂಟ್ರಿಯಾಗ್ತಿರೋದು ಭೀತಿ ಸೃಷ್ಟಿಸಿದೆ. ಹೂಗಳ ಸುರಿಮಳೆ.. ಅಭಿನಂದನೆಯ ಚಪ್ಪಾಳೆ. ಅಷ್ಟಕ್ಕೂ ಇದು ಮಹಾಮಾರಿ ಕೊರೊನಾ ವಿರುದ್ಧ ಮೈಸೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್‌‌ಗೆ ಜನಪ್ರತಿನಿಧಿಗಳು ನೀಡಿದ ಗೌರವ. ಯೆಸ್ ಮೈಸೂರಿನಲ್ಲಿ 90 ಕೊರೊನಾ ಸೋಂಕಿತರು […]

ಕೊರೊನಾ ಮುಕ್ತವಾದ ಸಾಂಸ್ಕೃತಿಕ ನಗರಿಗೆ ಹೊರ ರಾಜ್ಯದಿಂದ ಬಂದ್ರು ನೂರಾರು ಜನ!
ಸಾಧು ಶ್ರೀನಾಥ್​
|

Updated on: May 18, 2020 | 6:58 AM

Share

ಮೈಸೂರು: ಅಂತೂ ಇಂತೂ ಮೈಸೂರು ಕೊರೊನಾ ಮುಕ್ತವಾಗಿದೆ. ಒಂದ್ಕಡೆ ಸಂಭ್ರಮವಿದ್ರೆ, ಮತ್ತೊಂದ್ಕಡೆ ಹೊರ ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಾಗ್ತಿರೋದು ಆತಂಕಕ್ಕೆ‌ ಕಾರಣವಾಗಿದೆ. ಇನ್ನೊಂದ್ಕಡೆ ವಲಸೆ ಕಾರ್ಮಿಕರು‌ ಮೈಸೂರು ಬಿಟ್ಟು ತಮ್ಮ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಆದ್ರೆ ನೂರಾರು ಜನ ಸಾಂಸ್ಕೃತಿಕ ನಗರಿಗೆ ಎಂಟ್ರಿಯಾಗ್ತಿರೋದು ಭೀತಿ ಸೃಷ್ಟಿಸಿದೆ.

ಹೂಗಳ ಸುರಿಮಳೆ.. ಅಭಿನಂದನೆಯ ಚಪ್ಪಾಳೆ. ಅಷ್ಟಕ್ಕೂ ಇದು ಮಹಾಮಾರಿ ಕೊರೊನಾ ವಿರುದ್ಧ ಮೈಸೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್‌‌ಗೆ ಜನಪ್ರತಿನಿಧಿಗಳು ನೀಡಿದ ಗೌರವ.

ಯೆಸ್ ಮೈಸೂರಿನಲ್ಲಿ 90 ಕೊರೊನಾ ಸೋಂಕಿತರು ಗುಣಮುಖರಾದ ಹಿನ್ನೆಲೆಯಲ್ಲಿ ಮೈಸೂರಿನ ಕೊರೊನಾ ವಾರಿಯರ್ಸ್​ಗಳನ್ನ ಗೌರವಿಸಿ ಸನ್ಮಾನಿಸಲಾಯ್ತು.ಮೈಸೂರಿನ ಕಲಾಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿ ಅಭಿರಾಮ್ ಜಿ ಶಂಕರ್, ಎಸ್​ಪಿ ರಿಷ್ಯಂತ್, ಮೈಸೂರು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಮೇಲೆ ಹೂವಿನ ಮಳೆ ಸುರಿಸಲಾಯಿತು.

ಇನ್ನು ಈ ವೇಳೆ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳ ಕಿಟ್​ಗಳನ್ನು ಸಹಕಾರ ಬ್ಯಾಂಕ್ ಹಾಗೂ ಮೈಮುಲ್ ವತಿಯಿಂದ ವಿತರಿಸಲಾಯಿತು. ಇದೇ ವೇಳೆ ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ಜಿಟಿಡಿ, ಶಾಸಕ ಎಸ್.ಎ. ರಾಮದಾಸ್ ಸೇರಿದಂತೆ ಗಣ್ಯರು ಭಾಗಿಯಾದ್ರು. ಈ ವೇಳೆ‌ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಅಧಿಕಾರಿಗಳನ್ನ ಹಾಡಿ ಹೊಗಳಿದ್ರು.

ಹೊರ ರಾಜ್ಯದಿಂದ ಮೈಸೂರಿಗೆ 600 ಜನರ ಎಂಟ್ರಿ..! ಒಂದ್ಕಡೆ ಮೈಸೂರು ಕೊರೊನಾ ಮುಕ್ತವಾದ ಖುಷಿಯಿದ್ರೆ ಮತ್ತೊಂದು ಕಡೆ‌ ಕೇವಲ ನಾಲ್ಕು ದಿನದಲ್ಲಿ ಹೊರ ರಾಜ್ಯದಿಂದ ಮೈಸೂರಿಗೆ 600ಕ್ಕೂ ಹೆಚ್ಚು ಜನರು ಆಗಮಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಮೈಸೂರಿನಲ್ಲಿ ಇದಕ್ಕಾಗಿ ವಿಶೇಷ ಚೆಕ್‌ಪೋಸ್ಟ್ ಸ್ಥಾಪಿಸಿ, ಎಲ್ಲರನ್ನೂ ಫೆಸಿಲಿಟೇಟ್ ಕ್ವಾರಂಟೈನ್ ಮಾಡಲಾಗಿದೆ. ಆದ್ರೂ ಇದರಿಂದ ಅಪಾಯ ತಪ್ಪಿದ್ದಲ್ಲ ಅನ್ನೋದು ಖುದ್ದು ಹಿರಿಯ ಅಧಿಕಾರಿಗಳ ಮಾತು.

ಒಟ್ನಲ್ಲಿ ಮೈಸೂರು ಕೊರೊನಾ ಯುದ್ಧ ಗೆದ್ದರೂ, ಯುದ್ಧ ಇನ್ನೂ ಮುಗಿದಿಲ್ಲ. ಅಪಾಯದ ತೂಗುಗತ್ತಿ ಸದಾ ತೂಗುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಸೋಂಕು ಭುಗಿಲೇಳುವ ಅಪಾಯ ಇದೆ. ಹೀಗಾಗಿ ಜನ ತುಂಬಾ ಅಲರ್ಟ್ ಆಗಿದ್ರೆ ಒಳ್ಳೆಯದು. ಇಲ್ಲವಾದ್ರೆ ಮತ್ತೆ ಸಮಸ್ಯೆಯ ಸುಳಿಗೆ ಸಿಲುಕಿ, ಲಾಕ್​ಡೌನ್ ಇಲ್ಲವೇ ಸೀಲ್​ಡೌನ್​ನ ಸಂಕಷ್ಟ ಎದುರಿಸಬೇಕಾಗಿ ಬರಬಹುದು. ಹೀಗಾಗಿ ಸರ್ಕಾರದ ನಿಯಮ ಪಾಲಿಸಿ, ಮತ್ತೆ ಮೈಸೂರಿನಲ್ಲಿ ‘ಕೊರೊನಾ’ ಸೋಂಕು ಹರಡದಂತೆ ತಡೆಯಲು ಜನ ಮುಂದಾಗಬೇಕಿದೆ.