AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ 4.O: ಜಿಮ್​ಗೆ ಅನುಮತಿ ಕೊಡದಿದ್ರೆ ರಾಜ್ಯಾದ್ಯಂತ ಪ್ರೊಟೆಸ್ಟ್ ಮಾಡ್ತಾರಂತೆ!

ಬೆಂಗಳೂರು: ಕೊರೊನಾ ದೇಶಕ್ಕೆ ಕಾಲಿಟ್ಟಿದ್ದೇ ತಡ ಪ್ರಧಾನಿ ಲಾಕ್​ಡೌನ್ ಘೋಷಿಸಿ ಬಿಟ್ರು. ಜೀವ ಇದ್ರೆ ಜೀವನ, ಎಲ್ರೂ ಮನೆಯಲ್ಲೇ ಇರಿ ಅಂದ್ರು. ಅದ್ರಂತೆ ಲಾಕ್​ಡೌನ್ 1 & 2ನೇ ಹಂತದಲ್ಲಿ ಮೋದಿ ಮಾತನ್ನ ಚಾಚೂ ತಪ್ಪದೆ ಪಾಲಿಸಿದ್ರು. ಆದ್ರೆ 3ನೇ ಹಂತದ ಲಾಕ್​ಡೌನ್​ನಲ್ಲಿ ರಿಲೀಫ್ ಕೊಟ್ಟಿದ್ದೇ ತಡ, ಜನಜೀವನ ಮಾಮೂಲಿಯಂತೆ ಶುರುವಾಯ್ತು. ಇದ್ರ ನಡ್ವೆ ಅಂಗಡಿ ಮುಂಗಟ್ಟು ಬಾಗಿಲು ತೆರೆದ್ರೆ, ಕೈಗಾರಿಕೆಗಳು ಕೂಡ ಆರಂಭವಾದ್ವು. ಆದ್ರೆ ನೂರಾರು ಮಂದಿಯ ಹೊಟ್ಟೆ ತುಂಬಿಸ್ತಿದ್ದ ಹೋಟೆಲ್ & ರೆಸ್ಟೋರೆಂಟ್​ಗಳ ಬಾಗಿಲು […]

ಲಾಕ್​ಡೌನ್ 4.O: ಜಿಮ್​ಗೆ ಅನುಮತಿ ಕೊಡದಿದ್ರೆ ರಾಜ್ಯಾದ್ಯಂತ ಪ್ರೊಟೆಸ್ಟ್ ಮಾಡ್ತಾರಂತೆ!
ಸಾಧು ಶ್ರೀನಾಥ್​
|

Updated on: May 18, 2020 | 7:43 AM

Share

ಬೆಂಗಳೂರು: ಕೊರೊನಾ ದೇಶಕ್ಕೆ ಕಾಲಿಟ್ಟಿದ್ದೇ ತಡ ಪ್ರಧಾನಿ ಲಾಕ್​ಡೌನ್ ಘೋಷಿಸಿ ಬಿಟ್ರು. ಜೀವ ಇದ್ರೆ ಜೀವನ, ಎಲ್ರೂ ಮನೆಯಲ್ಲೇ ಇರಿ ಅಂದ್ರು. ಅದ್ರಂತೆ ಲಾಕ್​ಡೌನ್ 1 & 2ನೇ ಹಂತದಲ್ಲಿ ಮೋದಿ ಮಾತನ್ನ ಚಾಚೂ ತಪ್ಪದೆ ಪಾಲಿಸಿದ್ರು. ಆದ್ರೆ 3ನೇ ಹಂತದ ಲಾಕ್​ಡೌನ್​ನಲ್ಲಿ ರಿಲೀಫ್ ಕೊಟ್ಟಿದ್ದೇ ತಡ, ಜನಜೀವನ ಮಾಮೂಲಿಯಂತೆ ಶುರುವಾಯ್ತು.

ಇದ್ರ ನಡ್ವೆ ಅಂಗಡಿ ಮುಂಗಟ್ಟು ಬಾಗಿಲು ತೆರೆದ್ರೆ, ಕೈಗಾರಿಕೆಗಳು ಕೂಡ ಆರಂಭವಾದ್ವು. ಆದ್ರೆ ನೂರಾರು ಮಂದಿಯ ಹೊಟ್ಟೆ ತುಂಬಿಸ್ತಿದ್ದ ಹೋಟೆಲ್ & ರೆಸ್ಟೋರೆಂಟ್​ಗಳ ಬಾಗಿಲು ಮಾತ್ರ ಇಂದಿಗೂ ಬಂದ್ ಆಗಿದೆ. ಕೆಲವೇ ಹೋಟೆಲ್​​ಗಳಲ್ಲಿ ಮಾತ್ರ ಸದ್ಯ ಪಾರ್ಸೆಲ್ ವ್ಯವಸ್ಥೆಯಿದೆ. ಹೀಗಾಗಿ ಹೋಟೆಲ್ & ರೆಸ್ಟೋರೆಂಟ್ ಮಾಲೀಕರು ಇದೀಗ ಸರ್ಕಾರದ ಮುಂದೆ ತಮ್ಮ ಅಳಲು ತೋಡಿಕೊಳ್ತಿದ್ದಾರೆ.

ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ಕೊಡಿ..! ಹೌದು, ಲಾಕ್​ಡೌನ್​ನಿಂದ ಹೋಟೆಲ್ ಉದ್ಯಮ ಹಳ್ಳಹಿಡಿದಿದೆ. 54 ದಿನಗಳಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ ಬಂದ್ ಆಗಿದ್ದಕ್ಕೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರ-ವಹಿವಾಟು ಇಲ್ಲದೆ, ಒಂದು ರೂಪಾಯಿ ಆದಾಯವಿಲ್ಲದೆ ಕಂಗಲಾಗಿದ್ದಾರೆ. ಹೀಗಾಗಿ ಹೋಟೆಲ್ ಉದ್ಯಮಿ ಆರಂಭಿಸೋಕೆ ಪರ್ಮಿಷನ್ ಕೊಡಿ ಅಂತಾ ಬೆಂಗಳೂರಿನ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಸ್.ರಾವ್ ಸಿಎಂಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಲಾಕ್​ಡೌನ್​ನಿಂದ ಹೋಟೆಲ್ ಉದ್ಯಮ ಮುಳುಗಿದಂತಾಗಿದೆ. ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆ ಎಂದು ಸಿಎಂ ಬಳಿ ಪರಿಪರಿಯಾಗಿ ಕೇಳಿಕೊಂಡಿದ್ದಾರೆ.

ಜಿಮ್​ಗೆ ಅನುಮತಿ ಕೊಡದಿದ್ರೆ ಪ್ರೊಟೆಸ್ಟ್..! ಇತ್ತ ಜಿಮ್ ಮಾಲೀಕರು ಕೂಡ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಂದಿನಿಂದ ಜಿಮ್ ಓಪನ್ ಮಾಡೋಕೆ ಪರ್ಮಿಷನ್ ಕೊಡದಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡೋದಾಗಿ ಎಚ್ಚರಿಸಿದ್ದಾರೆ. ಸರ್ಕಾರದಿಂದ ಜಿಮ್ ಮಾಲೀಕರಿಗೆ ಯಾವ ಸೌಲಭ್ಯ ಸಿಕ್ಕಿಲ್ಲ, ಜೊತೆಗೆ ಜಿಮ್​ಗಳನ್ನ MSME ಸೆಕ್ಟರ್​ನಡಿ ಸೇರಿಸಲು ನಿರ್ಧರಿಸಿಲ್ಲ. ಇಂದಿನಿಂದ ಜಿಮ್​​ ಓಪನ್ ಮಾಡೋಕೆ ಅವಕಾಶ ನೀಡದಿದ್ರೆ ರಾಜ್ಯಾದ್ಯಂತ ಜಿಮ್ ಮಾಲೀಕರು, ಬಾಡಿ ಬಿಲ್ಡರ್​ಗಳು ಪ್ರತಿಭಟನೆ ಮಾಡ್ತೀವಿ ಎಂದಿದ್ದಾರೆ.

ಮೊಬೈಲ್ ವ್ಯಾಪಾರಿಗಳಿಗೂ ಭಾರಿ ಹೊಡೆತ..! ಇನ್ನು ದೇಶದಲ್ಲಿ ಮೊಬೈಲ್ ಮಾರುಕಟ್ಟೆಗೂ ಕೊರೊನಾ ಬರೆ ಎಳೆದಿದೆ. ಕೊರೊನಾಗೂ ಮುನ್ನ ಚೀನಾದಿಂದ ಹಡಗುಗಳಲ್ಲಿ ಮೊಬೈಲ್ ಬಿಡಿಭಾಗಗಳು ಬರ್ತಿದ್ವು. ಆದ್ರೀಗ ವಿಮಾನದ ಮೂಲಕ ಬಿಡಿ ಭಾಗಗಳ ಸಾಗಣೆ ಮಾಡ್ತಿರೋದ್ರಿಂದ 100 ರೂ. ಇದ್ದ ವಸ್ತು 1,000 ರೂಪಾಯಿಗೆ ಏರಿಕೆಯಾಗಿದೆ. ಜೊತೆಗೆ ಮೊಬೈಲ್ ಬಿಡಿಭಾಗಗಳ ಸಂಖ್ಯೆ ಇಳಿಮುಖವಾಗಿರೋದ್ರಿಂದ ಸಂಕಷ್ಟ ಎದುರಾಗಿದೆ ಅಂತಾ ಮೊಬೈಲ್ ವಿತರಕರ ಸಂಘದವ್ರು ತಮ್ಮ ನೋವು ತೋಡಿಕೊಂಡ್ರು.

ಇದ್ರ ಜೊತೆಗೆ ಆಟೋ, ಕ್ಯಾಬ್‌ ಚಾಲಕರು ಕೆಲಸ ಮಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದ್ರೆ, ಮತ್ತೊಂದೆಡೆ ಲಿಕ್ಕರ್ ಶಾಪ್​ನವ್ರು ನಮಗೂ ಹೊಸ ಮದ್ಯ ಖರೀದಿಸಿ ಮಾರಾಟಕ್ಕೆ ಪರ್ಮಿಷನ್ ಕೊಡಿ ಎಂದಿದ್ದಾರೆ. ಇದಿಷ್ಟೇ ಅಲ್ಲದೆ ಶಾಲಾ-ಕಾಲೇಜುಗಳ ಅಡ್ಮಿಷನ್‌ ಆರಂಭವಾಗಿದ್ದು, ಪೋಷಕರಿಗೆ ಮಾತ್ರ ಫೀಸ್ ಕಟ್ಟೋ ಬಗ್ಗೆ ಟೆನ್ಷನ್ ಶುರುವಾಗಿದೆ. ಇವ್ರೆಲ್ಲರೂ ಸರ್ಕಾರಕ್ಕೆ ತಮ್ಮ ಸಂಕಷ್ಟವನ್ನೇನೋ ಹೇಳಿಕೊಂಡಿದ್ದಾರೆ. ಆದ್ರೆ ಇವ್ರ ಮನವಿಗೆ ಸಿಎಂ ಮಣೆ ಹಾಕ್ತಾರಾ..? ಇಂದಿನಿಂದ ಹೋಟೆಲ್, ಜಿಮ್, ಫಿಟ್ನೆಸ್ ಸೆಂಟರ್​ಗಳನ್ನ ತೆರೆಯಲು ಅನುಮತಿ ಸಿಗುತ್ತಾ ಕಾದು ನೋಡ್ಬೇಕಿದೆ.

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ