ತನ್ನ ಪತ್ನಿ ಹಾಗೂ ಮಗನನ್ನು ನೋಡಲು ಬಂದು ಬೀದಿ ಹೆಣವಾಗಿದ್ದ, ತನಿಖೆಯಲ್ಲಿ ಬಯಲಾಯ್ತು ‘ಆ ಇಬ್ಬರ‘ ಸಂಚು
ಡಿಸೆಂಬರ್ 24 ರ ಬೆಳಿಗ್ಗೆ ಹುಬ್ಬಳ್ಳಿ ತಾಲೂಕಿನ ಅಂಚಗೇರಿ ಬಳಿ ನಡೆದಿದ್ದ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಹುಬ್ಬಳ್ಳಿ: ಡಿಸೆಂಬರ್ 24 ರ ಬೆಳಿಗ್ಗೆ ಹುಬ್ಬಳ್ಳಿ ತಾಲೂಕಿನ ಅಂಚಗೇರಿ ಬಳಿ ನಡೆದಿದ್ದ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಡಿ.24 ಬೆಳಿಗ್ಗೆ ಹುಬ್ಬಳ್ಳಿ ತಾಲೂಕಿನ ಅಂಚಗೇರಿ ಬಳಿ ಜಗದೀಶ್ ಕೊಲ್ಲಾಪುರ ಎಂಬ ಯುವಕನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈಗ ಪ್ರಕರಣ ನಡೆದ 24 ಗಂಟೆಗಳಲ್ಲಿಯೇ ಆರೋಪಿಯ ಹೆಡಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಗದೀಶ್ ಕೊಲ್ಲಾಪುರ ಕೊಲೆಯಾದ ಯುವಕ. ತನಿಖೆ ವೇಳೆ ಈತನ ಹೆಂಡತಿ ಹಾಗೂ ಆಕೆಯ ಪ್ರಿಯಕರನೇ ಕೊಲೆ ಆರೋಪಿಗಳು ಎಂದು ತಿಳಿದುಬಂದಿದೆ. ಜಗದೀಶ್ ಕೊಲ್ಲಾಪುರನನ್ನು ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದರು. ಅನೈತಿಕ ಸಂಬಂಧಕ್ಕೆ ಅಡ್ಡಿ ಮಾಡಿದ್ದು ಕೊಲೆಗೆ ಕಾರಣ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಹೇರಿಗೆಗೆಂದು ತವರು ಮನೆಗೆ ಬಂದಿದ್ದ ಪತ್ನಿ ಹಾಗೂ ಮಗುವನ್ನು ನೋಡಲು ಬಂದು ಬೀದಿ ಹೆಣವಾಗಿದ್ದ ಜಗದೀಶ್ ಕೊಲ್ಲಾಪುರನ ಕೊಲೆ ಆರೋಪಿಗಳನ್ನು ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಅಕ್ಷತಾ ಹಾಗೂ ಆಕೆಯ ಪ್ರಿಯಕರ ಕಾಶಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಾಶಪ್ಪ ಕೆಇಬಿ ಉದ್ಯೋಗಿ.
ಹಲವು ವರ್ಷಗಳಿಂದ ಅಕ್ಷತಾ ಜೊತೆ ಕಾಶಪ್ಪ ಸಂಬಂಧವಿಟ್ಟುಕೊಂಡಿದ್ದ. ಪತ್ನಿಯ ಸೂಚನೆ ಮೇರೆಗೆ ಪತಿ ಜಗದೀಶ್ ಕೊಲ್ಲಾಪುರನನ್ನು ಗ್ರಾಮದ ಹೊರಗೆ ಎಣ್ಣೆ ಪಾರ್ಟಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ. ಇಬ್ಬರೂ ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
Published On - 5:30 pm, Thu, 26 November 20