AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೋಂಕಿತ ಪೇದೆಯ ಡೆಡ್​ಬಾಡಿ ಪಡೆಯೋಕೆ ಯಾರೂ ಬರಲಿಲ್ಲ.. ಇಷ್ಟೇನಾ ನಮ್​ ಬಗ್ಗೆ ಕಾಳಜಿ’

ಬೆಂಗಳೂರು: ಕೊರೊನಾ ಮಹಾಮಾರಿಯ ಚಕ್ರವ್ಯೂಹದಲ್ಲಿ ಸಿಲುಕಿ ನಮ್ಮ ಖಾಕಿ ಪಡೆ ನಲುಗಿ ಹೋಗಿದೆ. ದಿನೇ ದಿನೆ ನಗರ ಪೊಲೀಸರಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾಕಷ್ಟು ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅದೇಕೋ ಏನೋ.. ನಮ್​ ಕೊರೊನಾ ವಾರಿಯರ್ಸ್​ ನಮ್​ ವೀರ ಪೊಲೀಸರು ಎಂದು ನಮ್ಮ ಖಾಕಿ ಪಡೆಗೆ ಆಚೆ ಸಲ್ಲುತ್ತಿರುವ ಗೌರವ ಮತ್ತು ಮರ್ಯಾದೆ ಕೋವಿಡ್​ ಆಸ್ಪತ್ರೆಗಳಲ್ಲಿ ಸಿಗ್ತಿಲ್ಲ. ಇಂಥದೊಂದು ಪ್ರಸಂಗ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕಂಡುಬಂದಿದೆ. ಮುದ್ದೆಗೆ ಸಾರಿಲ್ಲ, ಕುಡಿಯೋಕೆ ನೀರಿಲ್ಲ ಹೌದು, […]

‘ಸೋಂಕಿತ  ಪೇದೆಯ ಡೆಡ್​ಬಾಡಿ ಪಡೆಯೋಕೆ ಯಾರೂ ಬರಲಿಲ್ಲ.. ಇಷ್ಟೇನಾ ನಮ್​ ಬಗ್ಗೆ ಕಾಳಜಿ’
KUSHAL V
|

Updated on: Jun 22, 2020 | 5:50 PM

Share

ಬೆಂಗಳೂರು: ಕೊರೊನಾ ಮಹಾಮಾರಿಯ ಚಕ್ರವ್ಯೂಹದಲ್ಲಿ ಸಿಲುಕಿ ನಮ್ಮ ಖಾಕಿ ಪಡೆ ನಲುಗಿ ಹೋಗಿದೆ. ದಿನೇ ದಿನೆ ನಗರ ಪೊಲೀಸರಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾಕಷ್ಟು ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ಅದೇಕೋ ಏನೋ.. ನಮ್​ ಕೊರೊನಾ ವಾರಿಯರ್ಸ್​ ನಮ್​ ವೀರ ಪೊಲೀಸರು ಎಂದು ನಮ್ಮ ಖಾಕಿ ಪಡೆಗೆ ಆಚೆ ಸಲ್ಲುತ್ತಿರುವ ಗೌರವ ಮತ್ತು ಮರ್ಯಾದೆ ಕೋವಿಡ್​ ಆಸ್ಪತ್ರೆಗಳಲ್ಲಿ ಸಿಗ್ತಿಲ್ಲ. ಇಂಥದೊಂದು ಪ್ರಸಂಗ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕಂಡುಬಂದಿದೆ. ಮುದ್ದೆಗೆ ಸಾರಿಲ್ಲ, ಕುಡಿಯೋಕೆ ನೀರಿಲ್ಲ ಹೌದು, ನಗರದಲ್ಲಿ ಸೋಂಕಿತ ಪೊಲೀಸರನ್ನು ಚಿಕಿತ್ಸೆಗಾಗಿ ಇರಿಸಲಾಗಿರುವ ಆಸ್ಪತ್ರೆಯ ವಾರ್ಡ್​ನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ ಅಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ಉಪಾಹಾರ, ಊಟವನ್ನ ಕೂಡ ತಡವಾಗಿ ಕೊಡುತ್ತಾರೆ. ಉಣ್ಣಕ್ಕೆ ಮುದ್ದೆ ಕೊಡ್ತಾರೆ ಆದರೆ ಸಾರು ಕೊಡಲ್ಲ. ಕುಡಿಯುವುದಕ್ಕೂ ನೀರು ಸಿಗುತ್ತಿಲ್ಲ ಎಂದು ನೋವಿನ ಮಾತುಗಳನ್ನು ಆಡಿದ್ದಾರೆ.

‘ಆ ಸೋಂಕಿತ ಕಾನ್ಸ್​ಟೇಬಲ್​ನ ಬಾಡಿ ಪಡೆಯೋಕೆ ಯಾರೂ ಬರಲಿಲ್ಲ’ ಇತ್ತ ಬೇರೊಬ್ಬ ಪೊಲೀಸ್​ ಸಿಬ್ಬಂದಿ ಇತರೆ ಕೋವಿಡ್​ ಆಸ್ಪತ್ರೆಗಳಲ್ಲಿ ತಮ್ಮ ಸೋಂಕಿತ ಸಹೋದ್ಯೋಗಿಗಳಿಗೆ ಎದುರಿಸುತ್ತಿರುವ ಅಮಾನವೀಯ ಪರಿಸ್ಥಿತಿಯನ್ನು ಆಡಿಯೋ ಮೆಸೇಜ್​ ಮುಖಾಂತರ ಹಂಚಿಕೊಂಡಿದ್ದಾರೆ. ಕೊರೊನಾ ವಾರಿಯರ್ಸ್​ಗಳಾಗಿ ಸೇವೆ ಸಲ್ಲಿಸಿದ್ರೂ ಆಸ್ಪತ್ರೆಯಲ್ಲಿ ಬೆಡ್ ಸಿಗ್ತಿಲ್ಲ ಅಂತಾ ನೋವಿನ ಮಾತುಗಳನ್ನ ತೋಡಿಕೊಂಡಿದ್ದಾರೆ. ಜೊತೆಗೆ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಯ ದುರ್ವರ್ತನೆಯ ಬಗ್ಗೆಯೂ ಮಾತಾಡಿದ್ದಾರೆ.

ಇದಲ್ಲದೆ, ಕೋವಿಡ್​ನಿಂದ ಇತ್ತೀಚೆಗೆ ಮೃತಪಟ್ಟ ಹೆಡ್​ ಕಾನ್ಸ್​ಟೇಬಲ್​ರ ಮೃತದೇಹವನ್ನ ಪಡೆಯೋಕೆ ಅವರ ಕುಟುಂಬದವರೂ ಬಂದಿರಲಿಲ್ಲ. ನಾವೇ ಕೊನೆಗೆ ಅವರ ಅಂತ್ಯಕ್ರಿಯೆ ನೆರವೇರಿಸಬೇಕಿತ್ತು. ಕೊರೊನಾ ವಾರಿಯರ್ಸ್ ಗೇ ಇಂಥ ಪರಿಸ್ಥಿತಿ ಆದ್ರೆ ಇನ್ನೂ ಜನಸಾಮಾನ್ಯರ ಸ್ಥಿತಿ ಹೇಗೆ ಅನ್ನೋ ಪ್ರಶ್ನೆ ಕೂಡ ಎತ್ತಿದ್ದಾರೆ.

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ