ಕ್ರಿಮಿನಲ್ ಮೊಕದ್ದಮೆ: ‘ಕೈ’ ಏಜೆಂಟರನ್ನು ಬೂತ್​ನಿಂದ ಹೊರಹಾಕಿದ SI

|

Updated on: Dec 05, 2019 | 5:06 PM

ಚಿಕ್ಕಬಳ್ಳಾಪುರ: ರೆಡ್ಡಿಗೊಲ್ಲರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಏಜೆಂಟರನ್ನು ಪೊಲೀಸರು ಹೊರಹಾಕಿದ್ದಾರೆ. ಏಜೆಂಟರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ ಎನ್ನುವ ನೆಪ ಹೇಳಿ ಹೊರಹಾಕಿದ್ದಾರೆಂದು ಆರೋಪಿಸಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ನಿಯಮಕ್ಕೆ ವಿರುದ್ಧವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಕ್ರಿಮಿನಲ್ ಮೊಕದ್ದಮೆ ಇರುವವರು ಏಜೆಂಟ್ ಆಗಬಾರದು ಎನ್ನುವ ನಿಯಮವಿಲ್ಲ. ಆದ್ರೂ ನೆಪ ಹೇಳಿ ಕಾಂಗ್ರೆಸ್ ಏಜೆಂಟ್ ಬಿ.ಎ.ಚೇತನ್ ಕುಮಾರ್​ರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಎಸ್​ಪಿ ಚೇತನ್ ಗೌಡ ಹೊರಹಾಕಿದ್ದಾರೆ. ಪೊಲೀಸರ ಕ್ರಮದಿಂದ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. […]

ಕ್ರಿಮಿನಲ್ ಮೊಕದ್ದಮೆ: ‘ಕೈ’ ಏಜೆಂಟರನ್ನು ಬೂತ್​ನಿಂದ ಹೊರಹಾಕಿದ SI
Follow us on

ಚಿಕ್ಕಬಳ್ಳಾಪುರ: ರೆಡ್ಡಿಗೊಲ್ಲರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಏಜೆಂಟರನ್ನು ಪೊಲೀಸರು ಹೊರಹಾಕಿದ್ದಾರೆ. ಏಜೆಂಟರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ ಎನ್ನುವ ನೆಪ ಹೇಳಿ ಹೊರಹಾಕಿದ್ದಾರೆಂದು ಆರೋಪಿಸಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ನಿಯಮಕ್ಕೆ ವಿರುದ್ಧವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಕ್ರಿಮಿನಲ್ ಮೊಕದ್ದಮೆ ಇರುವವರು ಏಜೆಂಟ್ ಆಗಬಾರದು ಎನ್ನುವ ನಿಯಮವಿಲ್ಲ. ಆದ್ರೂ ನೆಪ ಹೇಳಿ ಕಾಂಗ್ರೆಸ್ ಏಜೆಂಟ್ ಬಿ.ಎ.ಚೇತನ್ ಕುಮಾರ್​ರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಎಸ್​ಪಿ ಚೇತನ್ ಗೌಡ ಹೊರಹಾಕಿದ್ದಾರೆ. ಪೊಲೀಸರ ಕ್ರಮದಿಂದ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಬಳಿಕ ಸ್ಥಳಕ್ಕೆ ಬಂದ ಎಸ್​ಪಿ ಅಭಿನವ್ ಖರೆ, ಕಾಂಗ್ರೆಸ್​ ಏಜೆಂಟ್ ಚೇತನ್​ಗೆ ಮರು ಅವಕಾಶ ಮಾಡಿಕೊಟ್ಟಿದ್ದಾರೆ.

Published On - 10:43 am, Thu, 5 December 19