ಹೆದ್ದಾರಿಯಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆ ಸಜೀವ ದಹನ
ಬೀದರ್: ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ಮಹಿಳೆ ಸಜೀವ ದಹನವಾಗಿರುವ ಘಟನೆ ಚಿಟಗುಪ್ಪಾ ತಾಲೂಕಿನ ನಿರ್ಣಾ ಕ್ರಾಸ್ ಬಳಿ ನಡೆದಿದೆ. ಮಹಾರಾಷ್ಟ್ರದಿಂದ ಹೈದರಾಬಾದ್ಗೆ ಹೋಗುವಾಗ NH9 ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು. ಉದಯ ಕುಮಾರ್(47), ಕಲ್ಯಾಣಿ (39), ಜೀವನ್ ಕುಮಾರ್(10), ಗಗನ್ ಕುಮಾರ್(7) ಪ್ರಯಾಣ ಮಾಡುತ್ತಿದ್ದರು. ಆಕಸ್ಮಿಕ ಬೆಂಕಿಯಿಂದ ಕಾರು ಚಲಾಯಿಸುತ್ತಿದ್ದ ಕಲ್ಯಾಣಿ ಸಜೀವ ದಹನವಾಗಿದ್ದಾರೆ. ಈ ಕುರಿತು ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್: ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ಮಹಿಳೆ ಸಜೀವ ದಹನವಾಗಿರುವ ಘಟನೆ ಚಿಟಗುಪ್ಪಾ ತಾಲೂಕಿನ ನಿರ್ಣಾ ಕ್ರಾಸ್ ಬಳಿ ನಡೆದಿದೆ. ಮಹಾರಾಷ್ಟ್ರದಿಂದ ಹೈದರಾಬಾದ್ಗೆ ಹೋಗುವಾಗ NH9 ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು. ಉದಯ ಕುಮಾರ್(47), ಕಲ್ಯಾಣಿ (39), ಜೀವನ್ ಕುಮಾರ್(10), ಗಗನ್ ಕುಮಾರ್(7) ಪ್ರಯಾಣ ಮಾಡುತ್ತಿದ್ದರು. ಆಕಸ್ಮಿಕ ಬೆಂಕಿಯಿಂದ ಕಾರು ಚಲಾಯಿಸುತ್ತಿದ್ದ ಕಲ್ಯಾಣಿ ಸಜೀವ ದಹನವಾಗಿದ್ದಾರೆ. ಈ ಕುರಿತು ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:50 am, Thu, 5 December 19