ಉಪಚುನಾವಣೆ ಮತದಾನಕ್ಕೆ ಕೌಂಟ್ ಡೌನ್: ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಹಣೆಬರಹ

|

Updated on: Dec 05, 2019 | 6:45 AM

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆಗೆ ಮತದಾನ ನಡೆಯಲಿದೆ. 15 ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ 15 ಸ್ಪರ್ಧೆ ಮಾಡಿದೆ. ಜೆಡಿಎಸ್ 12 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, ಬಿಎಸ್​ಪಿ ಸಹ 2 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ. 1 ಕ್ಷೇತ್ರದಲ್ಲಿ ಎನ್​ಸಿಪಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಒಟ್ಟು 37,82,681 ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 19,25,529 ಪುರುಷರು ಮತ್ತು 18,52,027 ಮಹಿಳೆಯರು, ಇತರೆ ಮತದಾರರು 414 ಮಂದಿ ಹಾಗು 79,714 ಹೊಸ ಮತದಾರರು ಮತ ಹಾಕಲಿದ್ದಾರೆ. […]

ಉಪಚುನಾವಣೆ ಮತದಾನಕ್ಕೆ ಕೌಂಟ್ ಡೌನ್: ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಹಣೆಬರಹ
Follow us on

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆಗೆ ಮತದಾನ ನಡೆಯಲಿದೆ. 15 ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ 15 ಸ್ಪರ್ಧೆ ಮಾಡಿದೆ. ಜೆಡಿಎಸ್ 12 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, ಬಿಎಸ್​ಪಿ ಸಹ 2 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ. 1 ಕ್ಷೇತ್ರದಲ್ಲಿ ಎನ್​ಸಿಪಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ.

ಒಟ್ಟು 37,82,681 ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 19,25,529 ಪುರುಷರು ಮತ್ತು 18,52,027 ಮಹಿಳೆಯರು, ಇತರೆ ಮತದಾರರು 414 ಮಂದಿ ಹಾಗು 79,714 ಹೊಸ ಮತದಾರರು ಮತ ಹಾಕಲಿದ್ದಾರೆ. 15 ಕ್ಷೇತ್ರಗಳಲ್ಲಿ ಒಟ್ಟು 4,185 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, 39 ಸಖಿ ಮತಗಟ್ಟೆ, 13 ವಿಶೇಷಚೇತನರ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಉಪಚುನಾವಣೆಗೆ ಎಂ3 ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ 8,326 ಬ್ಯಾಲೆಟ್​ ಯುನಿಟ್​​​ ಬಳಕೆ ಮಾಡಲಾಗುತ್ತಿದೆ. ಎಲ್ಲಾ 15 ಕ್ಷೇತ್ರಗಳಲ್ಲಿ 7,876 ವಿವಿಪ್ಯಾಟ್​​ಗಳ​ ಅಳವಡಿಕೆ ಮಾಡಿದ್ದಾರೆ. ಉಪಚುನಾವಣೆ​​ಗೆ ಒಟ್ಟು 42,509 ಸಿಬ್ಬಂದಿ ನೇಮಕ ಮಾಡಲಾಗಿದೆ.