ಅಪಾಯದ ಮಟ್ಟ ಮೀರಿದ ಕೃಷ್ಣಾ ನದಿ, ತೋಟದ ಮನೆಯಲ್ಲಿ ವಾಸವಾಗಿದ್ದವರ ಕತೆ ಏನಾಯ್ತು?

ಬಾಗಲಕೋಟೆ: ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೋಟದ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಹತ್ತಕ್ಕೂ ಹೆಚ್ಚು ಕುಟುಂಬ ಸದಸ್ಯರನ್ನು ಮತ್ತು ಜಾನುವಾರುಗಳನ್ನು ಬೋಟ್ ಮುಖಾಂತರ ರಕ್ಷಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಕೃಷ್ಣಾ ನದಿ ದಂಡೆಯ ಮೇಲಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಿದ್ದಲ್ಲದೇ ಪ್ರವಾಹ ಶುರುವಾಗಿದೆ.  ಪರಿಣಾಮ ತೋಟದ ಮನೆಗಳಲ್ಲಿ ಸುಮಾರು 10ಕ್ಕೂ ಹಚ್ಚು ಕುಟುಂಬಗಳು ಸಿಕ್ಕಿ ಹಾಕಿಕೊಂಡಿವೆ. ಹೀಗಾಗಿ ಸಿಕ್ಕಿಹಾಕಿಕೊಂಡಿದ್ದ ಗ್ರಾಮದ ಈ 10ಕ್ಕೂ […]

ಅಪಾಯದ ಮಟ್ಟ ಮೀರಿದ ಕೃಷ್ಣಾ ನದಿ, ತೋಟದ ಮನೆಯಲ್ಲಿ ವಾಸವಾಗಿದ್ದವರ ಕತೆ ಏನಾಯ್ತು?

Updated on: Aug 07, 2020 | 7:00 PM

ಬಾಗಲಕೋಟೆ: ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೋಟದ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಹತ್ತಕ್ಕೂ ಹೆಚ್ಚು ಕುಟುಂಬ ಸದಸ್ಯರನ್ನು ಮತ್ತು ಜಾನುವಾರುಗಳನ್ನು ಬೋಟ್ ಮುಖಾಂತರ ರಕ್ಷಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಕೃಷ್ಣಾ ನದಿ ದಂಡೆಯ ಮೇಲಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಿದ್ದಲ್ಲದೇ ಪ್ರವಾಹ ಶುರುವಾಗಿದೆ.  ಪರಿಣಾಮ ತೋಟದ ಮನೆಗಳಲ್ಲಿ ಸುಮಾರು 10ಕ್ಕೂ ಹಚ್ಚು ಕುಟುಂಬಗಳು ಸಿಕ್ಕಿ ಹಾಕಿಕೊಂಡಿವೆ. ಹೀಗಾಗಿ ಸಿಕ್ಕಿಹಾಕಿಕೊಂಡಿದ್ದ ಗ್ರಾಮದ ಈ 10ಕ್ಕೂ ಹೆಚ್ಚು ಕುಟುಂಬಗಳು ಹಾಗೂ ಕುಟುಂಬದ ಜಾನುವಾರಗಳನ್ನು ರಕ್ಷಿಸಿ ಅಧಿಕಾರಿಗಳು ಬೋಟ್‌ ಮುಖಾಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.