ಮದುವೆಗೆ ಮನೆಯವರ ವಿರೋಧ: ಸೆಲ್ಪಿ ವಿಡಿಯೋ ಮಾಡಿ ಬಾವಿಗೆ ಹಾರಿದ ಪ್ರೇಮಿಗಳು
ಯಾದಗಿರಿ: ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ತಾಲೂಕಿನ ಗೊಂದಡಗಿ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ (21) ಹಾಗೂ ಮಹಾದೇವಿ (18) ಗ್ರಾಮದ ಜಮೀನೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಆತ್ಮಹತ್ಯೆಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿರುವ ಪ್ರೇಮಿಗಳು ಆತ್ಮಹತ್ಯೆಗೆ ಕಾರಣ ನೀಡಿದ್ದಾರೆ. ಅವರ ಪ್ರಕಾರ ಯುವತಿ ಮಹಾದೇವಿ ಮನೆಯಲ್ಲಿ ಪ್ರೀತಿ ನಿರಾಕರಿಸಿದ್ದರು. ಜೊತೆಗೆ ನಿನ್ನೆ ಮಹಾದೇವಿ ಪೋಷಕರು ಪ್ರೀತಿ ನಿರಾಕರಿಸಿ ಮಹಾದೇವಿಗೆ ಹೊಡೆದಿದ್ದರು. ಹೀಗಾಗಿ ಇಬ್ಬರು ಮನನೊಂದು ಜೊತೆಯಾಗಿ ನಿನ್ನೆ […]

ಯಾದಗಿರಿ: ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ತಾಲೂಕಿನ ಗೊಂದಡಗಿ ಗ್ರಾಮದಲ್ಲಿ ನಡೆದಿದೆ.

ಹನುಮಂತಪ್ಪ (21) ಹಾಗೂ ಮಹಾದೇವಿ (18) ಗ್ರಾಮದ ಜಮೀನೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಆತ್ಮಹತ್ಯೆಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿರುವ ಪ್ರೇಮಿಗಳು ಆತ್ಮಹತ್ಯೆಗೆ ಕಾರಣ ನೀಡಿದ್ದಾರೆ.
ಅವರ ಪ್ರಕಾರ ಯುವತಿ ಮಹಾದೇವಿ ಮನೆಯಲ್ಲಿ ಪ್ರೀತಿ ನಿರಾಕರಿಸಿದ್ದರು. ಜೊತೆಗೆ ನಿನ್ನೆ ಮಹಾದೇವಿ ಪೋಷಕರು ಪ್ರೀತಿ ನಿರಾಕರಿಸಿ ಮಹಾದೇವಿಗೆ ಹೊಡೆದಿದ್ದರು. ಹೀಗಾಗಿ ಇಬ್ಬರು ಮನನೊಂದು ಜೊತೆಯಾಗಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರೂ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದಕ್ಕೆ ಪ್ರೀತಿಗೆ ವಿರೋಧ ಇತ್ತು ಎನ್ನಲಾಗಿದ್ದು, ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




