AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​ ನಟನೆಯ ಸಲಾರ್ ಚಿತ್ರಕ್ಕೆ ಕನ್ನಡಿಗನೇ ವಿಲನ್​!

ಕೆಜಿಎಫ್​ ಸಿನಿಮಾದಲ್ಲಿ ಈ ಮೊದಲು ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್​ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಹೋದರು ಕನ್ನಡಿಗರೆ ಆದ್ಯತೆ ನೀಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್​ ಮುಂದುವರಿಸಿದೆ.

ಪ್ರಭಾಸ್​ ನಟನೆಯ ಸಲಾರ್ ಚಿತ್ರಕ್ಕೆ ಕನ್ನಡಿಗನೇ ವಿಲನ್​!
ಮಧು ಗುರುಸ್ವಾಮಿ-ಪ್ರಭಾಸ್
ರಾಜೇಶ್ ದುಗ್ಗುಮನೆ
| Edited By: |

Updated on: Feb 07, 2021 | 9:03 PM

Share

ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿರುವ ಹಾಗೂ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ‘ಸಲಾರ್’​ ಚಿತ್ರಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಕನ್ನಡದಲ್ಲಿ ಹಿಟ್​ ಆದ ನಂತರ ಪ್ರಶಾಂತ್​ ನೀಲ್​ ಟಾಲಿವುಡ್​ಗೆ ಹೊರಟೇ ಬಿಟ್ಟರು, ಕನ್ನಡಿಗರನ್ನು ಮರೆತರು ಎನ್ನುವ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿ ಪರ ವಿರೋಧ ಚರ್ಚೆಗಳು ಕೂಡ ನಡೆದಿದ್ದವು. ಈಗ ಸಲಾರ್​ ಚಿತ್ರತಂಡದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ.

ಪ್ರಶಾಂತ್​ ನಿಲ್​ ಹಾಗೂ ನಿರ್ಮಾಪಕ ವಿಜಯ್​ ಕಿರಗಂದೂರು ಟಾಲಿವುಡ್​ಗೆ ಹೋದರೂ ಕನ್ನಡ ಕಲಾವಿದರಿಗೆ ಆದ್ಯತೆ ನೀಡುವುದನ್ನು ಮರೆತಿಲ್ಲ. ಈಗ ‘ಸಲಾರ್‘​ ಚಿತ್ರಕ್ಕೆ ಕನ್ನಡದ ಕಲಾವಿದನನ್ನು ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೊದಲು ಮಫ್ತಿ, ವಜ್ರಕಾಯದಂತ ಸಿನಿಮಾಗಳಲ್ಲಿ ನೆಗೆಟಿವ್​ ಶೇಡ್​ನಲ್ಲಿ ಕಾಣಿಸಿಕೊಂಡಿದ್ದ ಮಧು ಗುರುಸ್ವಾಮಿ ಈಗ ಸಲಾರ್​ನಲ್ಲಿ ನಟಿಸಲಿದ್ದು, ಪ್ರಭಾಸ್​ಗೆ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಕೆಜಿಎಫ್​ ಸಿನಿಮಾದಲ್ಲಿ ಈ ಮೊದಲು ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್​ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಹೋದರು ಕನ್ನಡಿಗರೆ ಆದ್ಯತೆ ನೀಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್​ ಮುಂದುವರಿಸಿದೆ ಅನ್ನೋದು ವಿಶೇಷ.

ಸಲಾರ್​ ಸಿನಿಮಾಗೆ ತಿಂಗಳ ಹಿಂದೆ ಮುಹೂರ್ತ ನೆರವೇರಿತ್ತು. ಕೆಜಿಎಫ್​ ಸ್ಟಾರ್​ ಯಶ್ ಸೇರಿ ಸಾಕಷ್ಟು ಮಂದಿ ಸಿನಿಮಾಗೆ ವಿಶ್​ ಮಾಡಿದ್ದರು, ಈ ಚಿತ್ರ ಸಂಪೂರ್ಣವಾಗಿ ಆ್ಯಕ್ಷನಿಂದ ಕೂಡಿರಲಿದೆ ಎನ್ನುವುದು ಮೂಲಗಳ ಮಾತು.

ಪ್ರಭಾಸ್‌ ನಟನೆಯ ಸಲಾರ್‌ ಚಿತ್ರಕ್ಕೆ ಮುಹೂರ್ತ: ಹೈದರಾಬಾದ್​ಗೆ ತೆರಳಿ ಶುಭ ಹಾರೈಸಿದ ಯಶ್​!

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More