AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಕುನೂರು ಠಾಣೆಯ ಕಾನ್ಸ್​​ಟೇಬಲ್ ​​ಹೆತ್ತಮ್ಮನ ಪಾಲಿಗೆ ಕಂಟಕನಾಗಿದ್ದಾನೆ, ಹಿರಿಯ ಪೊಲೀಸ್ ಅಧಿಕಾರಿಗಳು ಈ ತಾಯಿಗೆ ನ್ಯಾಯ ಕೊಡಿಸ್ತಾರಾ?

Kukunoor police station: ಆರಕ್ಷನಾಗಿರೋ ಮಗ ಮಲ್ಲೇಶಪ್ಪ ಹೆತ್ತಮ್ಮನ ಪಾಲಿಗೆ ರಾಕ್ಷಸನಾಗಿದ್ದಾನೆ. ಮಗನಿಂದ ನ್ಯಾಯ ಕೊಡಿಸಿ, ಬದುಕೋಕೆ ಅವಕಾಶ ಕೊಡಿ ಅಂತಾ ಕೇಳ್ತಿದ್ದಾಳೆ. ಹಿರಿಯ ಪೊಲೀಸ್ ಅಧಿಕಾರಿಗಳು ದೂರು ಪಡೆದು, ಈ ತಾಯಿಗೆ ನ್ಯಾಯ ಕೊಡಿಸ್ತಾರಾ ಕಾದು ನೋಡಬೇಕಿದೆ.

ಕುಕುನೂರು ಠಾಣೆಯ ಕಾನ್ಸ್​​ಟೇಬಲ್ ​​ಹೆತ್ತಮ್ಮನ ಪಾಲಿಗೆ ಕಂಟಕನಾಗಿದ್ದಾನೆ, ಹಿರಿಯ ಪೊಲೀಸ್ ಅಧಿಕಾರಿಗಳು ಈ ತಾಯಿಗೆ ನ್ಯಾಯ ಕೊಡಿಸ್ತಾರಾ?
ಕುಕುನೂರು ಠಾಣೆಯ ಕಾನ್ಸ್​​ಟೇಬಲ್ ​​ಹೆತ್ತಮ್ಮನ ಪಾಲಿಗೆ ಕಂಟಕನಾಗಿದ್ದಾನೆ
ದತ್ತಾತ್ರೇಯ ಪಾಟೀಲ್​
| Edited By: ಸಾಧು ಶ್ರೀನಾಥ್​|

Updated on: Jul 11, 2023 | 8:52 AM

Share

ಮಕ್ಕಳು ಚನ್ನಾಗಿ ಓದಿ ಒಳ್ಳೆ ನೌಕರಿ ಪಡೆಯಲಿ ಅಂತಾ ಹೆತ್ತ ಜೀವಗಳು ಏನೇನೆಲ್ಲಾ ಸಾಹಸ ಮಾಡುತ್ತಾರೆ ಅಲ್ವಾ? ಹಾಗಿರುವಾಗ ತಮ್ಮ ಸಂಧ್ಯಾಕಾಲದಲ್ಲಿ ಆಸರೆಯಾಗ್ತಾರೆ ಅಂತ ತಂದೆ ತಾಯಿ ಆಸೆ ಪಡುವುದು ಸಹಜವೇ ಅಲ್ವಾ? ಆದ್ರೆ ಇಲ್ಲೊಂದು ಕಡೆ ಓದಿ ವಿದ್ಯಾವಂತನಾಗಿ ಸರ್ಕಾರಿ ನೌಕರಿಯನ್ನು ಪಡೆದು, ಜನರಿಗೆ ರಕ್ಷಣೆ ನೀಡೋ ಆರಕ್ಷಕ ಹುದ್ದೆಯಲ್ಲಿರೋನೆ ಸ್ವಂತ ತನ್ನ ಹೆತ್ತಮ್ಮನಿಗೆ ರಾಕ್ಷಸನಾಗಿ (Torture) ಪರಿಣಮಿಸಿದ್ದಾನೆ. ತಾಯಿ ಮತ್ತು ಕುಟುಂಬಕ್ಕೆ ಮಗನೇ ಮುಳ್ಳಾಗಿರುವ ಸ್ಟೋರಿಯೊಂದು ಇಲ್ಲಿದೆ ನೋಡಿ. ಕಣ್ಣೀರು ಹಾಕುತ್ತ ದಿಕ್ಕೇ ತೋಚದೆ ಪೊಲೀಸ್ ಠಾಣೆಗೆ ಅಲೆದಾಡುತ್ತಿರುವ ವೃದ್ದೆ. ಇನ್ನು, ತಾಯಿಗೆ (Mother) ಜೊತೆಯಾಗಿ ಪತ್ನಿಯನ್ನ ಕರೆದುಕೊಂಡು ಬಂದಿರೋ ಸಹೋದರ. ಇವರ ಅಲೆದಾಟ ನೋಡಿದ್ರೆ ಎಂತಹವರಿಗೂ ಕರುಳು ಚುರಕ್ ಅನ್ನುತ್ತದೆ. ಹೀಗೆ ಅಲೆದಾಡುತ್ತಿರುವ ಇವರೇನು ನಿರ್ಗತಿಕರು, ಯಾರೂ ದಿಕ್ಕೆ ಇಲ್ಲದವರು ಅಂದುಕೊಳ್ಳಬೇಡಿ. ಈ ತಾಯಿಯ ಹೆಸರು ನಿಂಗಮ್ಮ ಗೊರವರ್, ಕೊಪ್ಪಳ (Koppal Police) ತಾಲೂಕಿನ ಬೆಟಗೇರಿ ನಿವಾಸಿ. ಈಕೆಯ ಜೊತೆ ಇರೋದು ನಿಂಗಮ್ಮ ಮತ್ತು ಕಿರಿಯ ಮಗ ಮಂಜುನಾಥ ಕೊರವರ್.

ಇವರೆಲ್ಲಾ ಅದ್ಯಾಕೆ ಕಣ್ಣೀರು ಹಾಕ್ತಿದ್ದಾರೆ ಅಂದುಕೊಂಡಿರಾ? ಇಲ್ಲೇ ಇರೋದು ವಿಷಯ. ನಿಂಗಮ್ಮ ಅವರ ಹಿರಿಯ ಮಗ ಮಲ್ಲೇಶಪ್ಪ ಇವರಿಗೆ ಕಿರುಕುಳ ನೀಡ್ತಿದ್ದಾನಂತೆ. ಈ ಮಲ್ಲೇಶಪ್ಪ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದು, ಕೊಪ್ಪಳ ಜಿಲ್ಲೆ ಕುಕುನೂರು ಪೊಲೀಸ್ ಠಾಣೆಯಲ್ಲಿ (Kukunoor police station) ಕರ್ತವ್ಯ ಮಾಡ್ತಾನೆ. ಸದ್ಯ ಈ ಪೊಲೀಸಪ್ಪನ ಕಾಟಕ್ಕೆ ಈ ತಾಯಿ ಮಗ ಇಬ್ಬರು ಹೈರಾಣಾಗಿದ್ದಾರೆ. ಪಿರ್ತಾರ್ಜಿತ ಆಸ್ತಿಯಲ್ಲಿ ತಾಯಿಗೆ ಹಾಗೂ ಕಿರಿಯ ಮಗನಿಗೆ ಪಾಲು ಕೊಡದೆ ಇಬ್ಬರ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಸಹೋದರ ಹಾಗೂ ಹೆತ್ತ ತಾಯಿಯ ಮೇಲೆಯೇ ಹಲ್ಲೆ ಮಾಡಿ, ವಿಕೃತಿ ಮೆರೆದಿದ್ದಾನಂತೆ. ಹೀಗಾಗೇ ಮಗನ ಕಿರುಕುಳ ತಾಳಲಾರದೇ ಖುದ್ದು ಹೆತ್ತಕರುಳೇ ಕೊಪ್ಪಳ ಎಸ್ಪಿ ಅವರಿಗೆ ದೂರು ನೀಡಿದ್ದಾರೆ. ತನ್ನ ಮಗನಿಂದ ತಮಗೆ ನೆಮ್ಮದಿಯಾಗಿ ಬದಕುಲು ಬಿಡಿ ಎನ್ನುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಹಿರಿಯ ಮಗ ಮಲ್ಲೇಶಪ್ಪ ನಿರಂತರವಾಗಿ ತಾಯಿ ಹಾಗೂ ಸಹೋದರನಿಗೆ ತೊಂದರೆ ನೀಡುತ್ತ ಬಂದಿದ್ದಾನೆ. ತಾಯಿಯ ಹೆಸರಲ್ಲಿದ್ದ ಕೊಪ್ಪಳದ ಮನೆ ಕೂಡಾ ಮಾರಾಟ ಮಾಡಿದ್ದಲ್ಲದೇ, ಒಂದು ಬಿಡಿಗಾಸು ಹಣ ಕೊಡದೆ ಯಾಮಾರಿಸಿದ್ದಾನಂತೆ. ಬೇರೆ ಕಡೆ ಮನೆ ಖರೀದಿ ಮಾಡಿ ತನ್ನ ಹೆಂಡತಿಯ ಸಹೋದರನ ಹೆಸರಿಗೆ ಮಾಡಿಸಿದ್ದಾನೆ.

ಇತ್ತ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿಯೂ ತಾಯಿ ಮಗ ಉಳುಮೆ ಮಾಡಿ ಜೀವನ ನಡೆಸಲು ಅವಕಾಶ ಕೊಡುತ್ತಿಲ್ಲ. ಇಲ್ಲ ಸಲ್ಲದ ಆರೋಪ ಮಾಡಿ ದಬ್ಬಾಳಿಕೆ ಮಾಡ್ತಾನೆ. ಈತನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲು ಹೋದ್ರೆ ಪೊಲೀಸರು ದೂರು ಪಡೆದುಕೊಳ್ಳುತ್ತಿಲ್ಲ. ಮಗ ಪೊಲೀಸ್​​ ಆಗಿರೋ ಕಾರಣ ಪೊಲೀಸರು ಕೂಡಾ ನಮ್ಮ ಸಹಾಯಕ್ಕೆ ಬರ್ತಾಯಿಲ್ಲ. ಹೀಗೆ ಆದ್ರೆ ನಾವು ಬದುಕೋದು ಹೇಗೆ ಅಂತ ಮಲ್ಲೇಶನ ಸಹೋದರ ಕಣ್ಣಿರು ಹಾಕುತ್ತಿದ್ದಾರೆ..

ಸದ್ಯ ಮಗನೇ ಪೊಲೀಸ್ ಇಲಾಖೆಯಲ್ಲಿ ಇದ್ರೂ ಆತನಿಂದ ನ್ಯಾಯಕ್ಕಾಗಿ ಈ ತಾಯಿ ಅಲೆದಾಡುತ್ತಿದ್ದಾಳೆ .ಆರಕ್ಷನಾಗಿರೋ ಮಗ ಮಲ್ಲೇಶಪ್ಪ ಹೆತ್ತ ತಾಯಿಯ ಪಾಲಿಗೆ ರಾಕ್ಷಸನಾಗಿದ್ದಾನೆ. ಸದ್ಯ ಮಗನಿಂದ ನ್ಯಾಯ ಕೊಡಿಸಿ, ಬದುಕೋಕೆ ಅವಕಾಶ ಕೊಡಿ ಅಂತಾ ಕೇಳ್ತಿದ್ದಾಳೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ದೂರು ಪಡೆದು ಈ ತಾಯಿಗೆ ನ್ಯಾಯ ಕೊಡಿಸ್ತಾರಾ ಕಾದು ನೋಡಬೇಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್