ಕೆಲಸಕ್ಕೆ ಹೊರಟಿದ್ದ ನಗರಸಭೆ ಮಾಜಿ ಸದಸ್ಯೆಯ ಪುತ್ರ ಅಪಘಾತಕ್ಕೆ ಬಲಿ

ಸಾಧು ಶ್ರೀನಾಥ್​

|

Updated on:May 19, 2020 | 2:14 PM

ಮೈಸೂರು: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ. ಪ್ರವೀಣ್(29) ಮೃತ ದುರ್ದೈವಿ. 4ನೇ ಹಂತದ ಲಾಕ್‌ಡೌನ್​ನಲ್ಲಿ ಸಡಿಲಿಕೆಯಾದ ಬಳಿಕ ಇಂದಿನಿಂದ ಕೆಲಸಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ಬೈಕ್ ಮತ್ತು ಕಾರಿನ ನಡುವೆ ಅಪಘಾತವಾಗಿ ಖಾಸಗಿ ಕಾರ್ಖಾನೆ ಉದ್ಯೋಗಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ನಂಜನಗೂಡು ಪಟ್ಟಣದ ಶಿಕ್ಷಕರ ಬಡಾವಣೆಯ ನಿವಾಸಿ. ನಗರಸಭೆ ಮಾಜಿ ಸದಸ್ಯೆ ಸುಧಾ ಮಹೇಶ್ ಅವರ ಪುತ್ರ. ಪ್ರವೀಣ್ ತಾಂಡ್ಯಾ ಕೈಗಾರಿಕಾ […]

ಕೆಲಸಕ್ಕೆ ಹೊರಟಿದ್ದ ನಗರಸಭೆ ಮಾಜಿ ಸದಸ್ಯೆಯ ಪುತ್ರ ಅಪಘಾತಕ್ಕೆ ಬಲಿ

ಮೈಸೂರು: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ. ಪ್ರವೀಣ್(29) ಮೃತ ದುರ್ದೈವಿ. 4ನೇ ಹಂತದ ಲಾಕ್‌ಡೌನ್​ನಲ್ಲಿ ಸಡಿಲಿಕೆಯಾದ ಬಳಿಕ ಇಂದಿನಿಂದ ಕೆಲಸಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ಬೈಕ್ ಮತ್ತು ಕಾರಿನ ನಡುವೆ ಅಪಘಾತವಾಗಿ ಖಾಸಗಿ ಕಾರ್ಖಾನೆ ಉದ್ಯೋಗಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ನಂಜನಗೂಡು ಪಟ್ಟಣದ ಶಿಕ್ಷಕರ ಬಡಾವಣೆಯ ನಿವಾಸಿ. ನಗರಸಭೆ ಮಾಜಿ ಸದಸ್ಯೆ ಸುಧಾ ಮಹೇಶ್ ಅವರ ಪುತ್ರ. ಪ್ರವೀಣ್ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಲ್ ಬರ್ಗ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್​ಡೌನ್​ನಿಂದಾಗಿ ಎರಡು ತಿಂಗಳಿಂದ ಮನೆಯಲ್ಲೇ ಇದ್ದ. ಲಾಕ್​ಡೌನ್ ಸಡಿಲಿಕೆ ನಂತರ ಇಂದು ಕಾರ್ಖಾನೆ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada