
ಚಿತ್ರದುರ್ಗ: ಬೈಕ್ ಮೇಲೆ ಬ್ಯಾಗ್‌ನಲ್ಲಿಟ್ಟಿದ್ದ 7 ಲಕ್ಷ ರೂಪಾಯಿ ಕಳ್ಳತನ ಮಾಡಿ ಖದೀಮ ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಭೀಮಸಮುದ್ರ ಗ್ರಾಮದ ಓಂಕಾರಪ್ಪಗೆ ಸೇರಿದ ಹಣ ಕಳ್ಳತನವಾಗಿದೆ.
ಅಡಿಕೆ ಮಂಡಿಯಲ್ಲಿ ವ್ಯವಸ್ಥಾಪಕನಾಗಿದ್ದ ಓಂಕಾರಪ್ಪ ದೀಪಾವಳಿ ಹಿನ್ನೆಲೆಯಲ್ಲಿ ಲಕ್ಷೀ ಪೂಜೆ ಸಮಯದಲ್ಲಿ ಹಣ ಇಟ್ಟು ಪೂಜೆ ಮಾಡಲೆಂದು 7 ಲಕ್ಷ ರೂಪಾಯಿ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಣ ಇದ್ದ ಬ್ಯಾಗನ್ನು ಬೈಕ್ ಮೇಲೆ ಇಟ್ಟು ದೀಪಾವಳಿ ಹಬ್ಬಕ್ಕೆ ಸಾಮಗ್ರಿ ಖರೀದಿಸಲೆಂದು ತೆರಳಿದ್ರು. ಆದರೆ ವಾಪಾಸ್ ಬರುವಷ್ಟರಲ್ಲಿ ಹಣ ಮಂಗಮಾಯವಾಗಿದೆ.
ಬೈಕಿನಲ್ಲಿ ಓಂಕಾರಪ್ಪನ ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳ, ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 2:03 pm, Sat, 14 November 20