ವಿವಾಹಿತ ಮಹಿಳೆನ್ನ ಪಿಕ್ನಿಕ್ಗೆ ಕರಕೊಂಡು ಬಂದಿದ್ದ ಯುವಕನಿಗೆ ಬಿತ್ತು ಧರ್ಮದೇಟು!
ಉತ್ತರ ಕನ್ನಡ: ವಿವಾಹಿತ ಮಹಿಳೆಯನ್ನ ಪಿಕ್ನಿಕ್ಗೆ ಕರೆದುಕೊಂಡು ಬಂದಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿರುವ ಘಟನೆ ಜಿಲ್ಲೆಯ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ. ಧಾರವಾಡ ಮೂಲದ ಯುವಕನೊಬ್ಬ ವಿವಾಹಿತ ಮಹಿಳೆಯನ್ನ ತನ್ನೊಂದಿಗೆ ಕರೆದುಕೊಂಡು ಬಂದಿದ್ದ ಎಂದು ತಿಳಿದುಬಂದಿದೆ. ಪ್ರೇಮಿಗಳು ಕಾರವಾರಕ್ಕೆ ಬಂದ ವಿಷಯವನ್ನ ತಿಳಿದ ವಿವಾಹಿತೆಯ ಪತಿ ತನ್ನ ಸಂಬಂಧಿಕರೊಂದಿಗೆ ಮತ್ತೊಂದು ಕಾರ್ನಲ್ಲಿ ಅವರನ್ನು ಹಿಂಬಾಲಿಸಿದ್ದಾನೆ. ಕಾರವಾರದ ಬೀಚ್ ಬಳಿ ಲವ್ವರ್ಗಳು ನಿಂತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಪತಿರಾಯ ಕಾರಿನಿಂದ ಇಳಿಯುತ್ತಿದ್ದಂತೆ ಯುವಕ […]

ಉತ್ತರ ಕನ್ನಡ: ವಿವಾಹಿತ ಮಹಿಳೆಯನ್ನ ಪಿಕ್ನಿಕ್ಗೆ ಕರೆದುಕೊಂಡು ಬಂದಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿರುವ ಘಟನೆ ಜಿಲ್ಲೆಯ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ.
ಧಾರವಾಡ ಮೂಲದ ಯುವಕನೊಬ್ಬ ವಿವಾಹಿತ ಮಹಿಳೆಯನ್ನ ತನ್ನೊಂದಿಗೆ ಕರೆದುಕೊಂಡು ಬಂದಿದ್ದ ಎಂದು ತಿಳಿದುಬಂದಿದೆ. ಪ್ರೇಮಿಗಳು ಕಾರವಾರಕ್ಕೆ ಬಂದ ವಿಷಯವನ್ನ ತಿಳಿದ ವಿವಾಹಿತೆಯ ಪತಿ ತನ್ನ ಸಂಬಂಧಿಕರೊಂದಿಗೆ ಮತ್ತೊಂದು ಕಾರ್ನಲ್ಲಿ ಅವರನ್ನು ಹಿಂಬಾಲಿಸಿದ್ದಾನೆ.
ಕಾರವಾರದ ಬೀಚ್ ಬಳಿ ಲವ್ವರ್ಗಳು ನಿಂತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಪತಿರಾಯ ಕಾರಿನಿಂದ ಇಳಿಯುತ್ತಿದ್ದಂತೆ ಯುವಕ ಹಾಗೂ ತನ್ನ ಪತ್ನಿಗೆ ಸಿಕ್ಕಾಪಟ್ಟೆ ಗೂಸಾ ಕೊಟ್ಟಿದ್ದಾನೆ. ಇದಲ್ಲದೆ, ಪ್ರೇಮಿಗಳಿಬ್ಬರಿಗೂ ಪತಿಯ ಕುಟುಂಬಸ್ಥರು ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.