KS Eshwarappa ‘ಗೋವಿನ ಶಾಪದಿಂದ ಸಿದ್ದರಾಮಯ್ಯ CM ಸ್ಥಾನ ಕಳೆದುಕೊಂಡರು, ಈಗ ರಾಮನ ವಿಚಾರದಲ್ಲಿ ಮಾತಾಡಿ..’

KS Eshwarappa: ಗೋವಿನ ಶಾಪದಿಂದ ಸಿದ್ದರಾಮಯ್ಯ ಸಿಎಂ ಸ್ಥಾನ, ಸರ್ಕಾರ ಕಳೆದುಕೊಂಡರು. ಆದರೂ ಬುದ್ಧಿ ಬಂದಿಲ್ಲ, ಈಗ ರಾಮನ ವಿಚಾರದಲ್ಲಿ ಮಾತಾಡಿ ಕಾಂಗ್ರೆಸ್​​ ನೆಲದೊಳಗೆ ಹೋಗುತ್ತೆ ಎಂದು ಟಾಂಗ್​ ಕೊಟ್ಟರು.

KS Eshwarappa ‘ಗೋವಿನ ಶಾಪದಿಂದ ಸಿದ್ದರಾಮಯ್ಯ CM ಸ್ಥಾನ ಕಳೆದುಕೊಂಡರು, ಈಗ ರಾಮನ ವಿಚಾರದಲ್ಲಿ ಮಾತಾಡಿ..’
ಕೆ.ಎಸ್.ಈಶ್ವರಪ್ಪ (ಎಡ); ಸಿದ್ದರಾಮಯ್ಯ (ಬಲ)
Follow us
KUSHAL V
|

Updated on:Feb 19, 2021 | 11:06 PM

ಯಾದಗಿರಿ: ದೇಶದ್ರೋಹ ವಿಚಾರದಲ್ಲಿ ಸಿದ್ದರಾಮಯ್ಯ, PFI ಇಬ್ಬರೂ ಒಂದೇ. ದೇಶದ್ರೋಹ ವಿಚಾರದಲ್ಲಿ ಸ್ಪರ್ಧೆಗೆ ಬಿದ್ದವರಂತೆ ಮುನ್ನುಗ್ತಿದ್ದಾರೆ ಎಂದು ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಗೋವಿನ ಶಾಪದಿಂದ ಸಿದ್ದರಾಮಯ್ಯ ಸಿಎಂ ಸ್ಥಾನ, ಸರ್ಕಾರ ಕಳೆದುಕೊಂಡರು. ಆದರೂ ಬುದ್ಧಿ ಬಂದಿಲ್ಲ, ಈಗ ರಾಮನ ವಿಚಾರದಲ್ಲಿ ಮಾತಾಡಿ ಕಾಂಗ್ರೆಸ್​​ ನೆಲದೊಳಗೆ ಹೋಗುತ್ತೆ ಎಂದು ಟಾಂಗ್​ ಕೊಟ್ಟರು.

ರಾಮಮಂದಿರ ನಿರ್ಮಾಣಕ್ಕೆ ಅನೇಕರು ದೇಣಿಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ಅನೇಕರು ದೇಣಿಗೆಯನ್ನ ನೀಡಿದ್ದಾರೆ. ದೇಶದ ಅನೇಕ ಮುಸ್ಲಿಮರೂ ಕೂಡ ದೇಣಿಗೆಯನ್ನ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ, PFIಮಾತ್ರ ದೇಣಿಗೆ ನೀಡಿಲ್ಲ. ಸಿದ್ದರಾಮಯ್ಯ ಮಂದಿರ ನಿರ್ಮಾಣದ ದೇಣಿಗೆ ಲೆಕ್ಕ ಕೇಳ್ತಾರೆ. ಒಂದು ರೂಪಾಯಿ ದುಡ್ಡು ಕೊಡಲ್ಲ ಅಂದ್ಮೇಲೆ ಲೆಕ್ಕ ಕೇಳೋಕೆ ಇವರು ಯಾರು? ಎಂದು ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.

‘ಸಿದ್ದರಾಮಯ್ಯರಿಗೆ ಸುಪ್ರೀಂಕೋರ್ಟ್​​ ಮೇಲೆ ನಂಬಿಕೆ ಇಲ್ಲ’ ಸಿದ್ದರಾಮಯ್ಯರಿಗೆ ಸುಪ್ರೀಂಕೋರ್ಟ್​​ ಮೇಲೆ ನಂಬಿಕೆ ಇಲ್ಲ. ಸಂವಿಧಾನವನ್ನು ಅರೆದು ಕುಡಿದವರಂತೆ ಮಾತನಾಡುತ್ತಾರೆ. ಡಾ.ಅಂಬೇಡ್ಕರ್​ರನ್ನ​ ಬಿಟ್ಟರೆ ನಾನೇ ತಿಳಿವಳಿಕಸ್ಥ ಅಂತಾರೆ. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಇದಕ್ಕೂ ಮುನ್ನ ಸಚಿವ K.S.ಈಶ್ವರಪ್ಪ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಜಿ.ಪಂ. ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಈ ವೇಳೆ, ಅಧಿಕಾರಿಗಳನ್ನ ಸಚಿವ ತರಾಟೆಗೆ ತೆಗೆದುಕೊಂಡರು. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸದಿದ್ರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದರು.

PRAMOD MUTHALIK 1

ಪ್ರಮೋದ್​ ಮುತಾಲಿಕ್

‘ಸಿದ್ದರಾಮಯ್ಯರೇ ನಿಮ್ಮ ಹೆಸರಿನಲ್ಲೂ ರಾಮ ಇದ್ದಾನೆ ಮರೆಯದಿರಿ’ ಇತ್ತ, ಮಾಜಿ ಸಿಎಂಗಳಿಬ್ಬರು ರಾಮನ ಬಗ್ಗೆ ವಿವಾದಿತ ಹೇಳಿಕೆ ನಿಲ್ಲಿಸಲಿ ಎಂದು ಗದಗದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್‌ ಒತ್ತಾಯ ಮಾಡಿದ್ದಾರೆ. ಮಾಜಿ ಸಿಎಂಗಳಿಬ್ಬರು ಬಾಲಿಶ, ಕೀಳುಮಟ್ಟದ ಹೇಳಿಕೆ ನೀಡ್ತಿದ್ದಾರೆ ಎಂದು ಮುತಾಲಿಕ್​ ಗುಡುಗಿದರು.

ಸಿದ್ದರಾಮಯ್ಯರೇ ನಿಮ್ಮ ಹೆಸರಿನಲ್ಲೂ ರಾಮ ಇದ್ದಾನೆ ಮರೆಯದಿರಿ. 30 ವರ್ಷದ ಲೆಕ್ಕ ಈಗ ಕೇಳ್ತೀರೆಂದು ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದರು. ನೀವು 2 ಬಾರಿ ಸಿಎಂ ಆಗಿದ್ದ ವೇಳೆಯ ಲೆಕ್ಕ ಕೊಡಿ ನೋಡೋಣ. ಎಷ್ಟು ಕೊಟ್ಟು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರಿ, ಲೆಕ್ಕ ಕೊಡಿ. ಎಷ್ಟು ಕೊಟ್ಟು, ತೆಗೆದುಕೊಂಡು MLC ಮಾಡಿರುವ ಲೆಕ್ಕ ನೀಡಿ ಎಂದು ಸಿಟ್ಟಾದರು.

ಸಿದ್ದರಾಮಯ್ಯ ರಾಜಕಾರಣದ ಕನ್ನಡಕ ತೆಗೆಯಲಿ. ಶ್ರೀರಾಮ ಮಂದಿರ ಬಗ್ಗೆ ಒಂದೊಂದು ರೂಪಾಯಿಗೂ ಲೆಕ್ಕವಿದೆ. ಸಿದ್ದರಾಮಯ್ಯರ ಹೇಳಿಕೆ ರಾಮನ ಭಕ್ತರಿಗೆ ಅವಮಾನ ಮಾಡಿದಂತೆ ಎಂದು ಗದಗದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್‌ ಹೇಳಿದರು.

ಇದನ್ನೂ ಓದಿ: ‘ಸಿದ್ದರಾಮಯ್ಯರನ್ನು ಮಾಜಿ CM ಅಂತಾ ಹೇಳೋಕೆ ಮನಸ್ಸಾಗ್ತಿಲ್ಲ.. ಅದಕ್ಕೆ ಭಾವಿ CM ಅಂತಾ ಕರೆಯುತ್ತೇನೆ’

ಇದನ್ನೂ ಓದಿ: Siddaramaiah ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ.. ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಲ್ಲ -ಡಾ.ಯತೀಂದ್ರ

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ 1 ಪೈಸೆಯೂ ಕೊಡಬೇಡಿ; ಅದು ರಾಮಮಂದಿರವಲ್ಲ, RSS​ ಮಂದಿರ -PFI ಕಾರ್ಯದರ್ಶಿ ಅನೀಸ್ ಅಹ್ಮದ್

Published On - 10:47 pm, Fri, 19 February 21