AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ 6 ತಿಂಗಳ ಮಾತು.. ಕೊರೊನಾ ವಿರುದ್ಧ ಹೋರಾಡಲು ಮಾನಸಿಕವಾಗಿ ಸಿದ್ಧರಾಗಿ -ಅಶೋಕ್​

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕು ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಕೊವಿಡ್ ನಿಯಂತ್ರಣ ಉಸ್ತುವಾರಿ ವಹಿಸಿರುವ ಸಚಿವ ಆರ್​. ಅಶೋಕ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ 6 ತಿಂಗಳ ಕಾಲ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿ ಎಂದು ಅಶೋಕ್ ಮನವಿ ಮಾಡಿದ್ದಾರೆ. ಕೊವಿಡ್ ವರದಿ ಬಂದ ಬಳಿಕ ಪೇಷಂಟ್​ಗೆ ದೂರವಾಣಿ ಕರೆ ಮಾಡುತ್ತಾರೆ. ಕರೆ ಬಂದ ತಕ್ಷಣ ಪೇಷಂಟ್​ಗಳು ರಸ್ತೆಗೆ ಬರುತ್ತಾರೆ. ಇದನ್ನು ತಪ್ಪಿಸಲು ತಕ್ಷಣ ಕೊವಿಡ್​ ಬಗ್ಗೆ ವರದಿ ನೀಡದಂತೆ […]

ಇನ್ನೂ 6 ತಿಂಗಳ ಮಾತು.. ಕೊರೊನಾ ವಿರುದ್ಧ ಹೋರಾಡಲು ಮಾನಸಿಕವಾಗಿ ಸಿದ್ಧರಾಗಿ -ಅಶೋಕ್​
ಆರ್.ಅಶೋಕ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 29, 2020 | 1:08 PM

Share

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕು ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಕೊವಿಡ್ ನಿಯಂತ್ರಣ ಉಸ್ತುವಾರಿ ವಹಿಸಿರುವ ಸಚಿವ ಆರ್​. ಅಶೋಕ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ 6 ತಿಂಗಳ ಕಾಲ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿ ಎಂದು ಅಶೋಕ್ ಮನವಿ ಮಾಡಿದ್ದಾರೆ.

ಕೊವಿಡ್ ವರದಿ ಬಂದ ಬಳಿಕ ಪೇಷಂಟ್​ಗೆ ದೂರವಾಣಿ ಕರೆ ಮಾಡುತ್ತಾರೆ. ಕರೆ ಬಂದ ತಕ್ಷಣ ಪೇಷಂಟ್​ಗಳು ರಸ್ತೆಗೆ ಬರುತ್ತಾರೆ. ಇದನ್ನು ತಪ್ಪಿಸಲು ತಕ್ಷಣ ಕೊವಿಡ್​ ಬಗ್ಗೆ ವರದಿ ನೀಡದಂತೆ ಆರ್​.ಅಶೋಕ್ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಬೆಡ್​ ಹೆಚ್ಚಳ ಆಸ್ಪತ್ರೆಗಳಲ್ಲಿ ಬೆಡ್​ಗಳ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಇನ್ನು ಒಂದು ವಾರದ ಒಳಗೆ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆಗೆ ಸೂಚಿಸಿದ್ದೇವೆ. ಈಗಾಗಲೇ 85 ವೈದ್ಯರ ನೇಮಕ ಮಾಡಲು ಆದೇಶಿಸಿದ್ದೇವೆ.

ಬಿಬಿಎಂಪಿ ಕಾರ್ಪೊರೇಟರ್​ಗಳ ಸಭೆ ಮಾಡಲಾಗುವುದು. ಸೀಲ್​ಡೌನ್ ಪ್ರದೇಶಗಳ ಬಗ್ಗೆ ಕಾರ್ಪೊರೇಟರ್​ಗೆ ಉಸ್ತುವಾರಿ ಕೊಡಲಾಗುತ್ತೆ. ಅಲ್ಲದೆ, ಸೀಲ್​ಡೌನ್ ಪ್ರದೇಶಕ್ಕೆ 25 ಲಕ್ಷ ರೂಪಾಯಿ ಮೀಸಲಿಡಲಾಗುತ್ತೆ. ಕೊವಿಡ್ ಕೇರ್ ಸೆಂಟರ್‌ಗಳ ಉಸ್ತುವಾರಿ ತಹಶೀಲ್ದಾರ್​ಗಳನ್ನು ನೇಮಕ ಮಾಡುತ್ತೇವೆ.

10 ಎನ್​ಜಿಒಗಳ ಮೂಲಕ ಕೊವಿಡ್​ ಬಗ್ಗೆ ಜಾಗೃತಿ ಮೂಡಿಸಲಾಗುತ್ತೆ. IAS ಅಧಿಕಾರಿ ತುಷಾರ್ ಗಿರಿನಾಥ್‌ಗೆ ಬೆಡ್​ ವ್ಯವಸ್ಥೆ ಉಸ್ತುವಾರಿ ಕೊಡಲಾಗಿದೆ. ಬೆಡ್ ತಯಾರಿಕೆಯ ಹೊಣೆ ರಾಜೇಂದ್ರ ಕಟಾರಿಯಾಗೆ ನೀಡಲಾಗಿದೆ. ಮಾಸ್ಕ್ ಕಡ್ಡಾಯ ಪಾಲನೆ ಉಸ್ತುವಾರಿ ಪೊಲೀಸರ ಹೆಗಲಿಗೆ. ಅಲ್ಲದೆ ಕೊರೊನಾಗೆ ಬಲಿಯಾದವರ ಶವ ಕೊಂಡೊಯ್ಯಲು ವಾಹನ ವ್ಯವಸ್ಥೆ ಮತ್ತು ಪ್ರತಿ ವಲಯಕ್ಕೆ 2 ಚಿರಶಾಂತಿ ವಾಹನಗಳ ವ್ಯವಸ್ಥೆ ಮಾಡಲಾಗುತ್ತೆ.

SDRF ನಿಧಿ ಅಡಿ ಕೇಂದ್ರ ಸರ್ಕಾರ 742 ಕೋಟಿ ರೂಪಾಯಿ ನೀಡಿದೆ. ಡಿಸಿಗಳಿಗೆ 232 ಕೋಟಿ ರೂ, ಆರೋಗ್ಯ ಇಲಾಖೆಗೆ 70 ಕೋಟಿ ರೂ, ಬಿಬಿಎಂಪಿಗೆ 50 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಗೃಹ ಇಲಾಖೆಗೆ 12 ಕೋಟಿ ರೂ., ರೈಲ್ವೆಗೆ 13 ಕೋಟಿ ರೂಪಾಯಿ ಹಾಗೂ ಬಿಎಂಟಿಸಿಗೆ 2.39 ಕೋಟಿ ರೂಪಾಯಿ ಬಿಡುಗಡೆ ಆಗಿದೆ.

ಜುಲೈ, ಆಗಸ್ಟ್​ನಲ್ಲಿ ಕೊರೊನಾ ಕೇಸ್​ ಹೆಚ್ಚಳ ಜುಲೈ, ಆಗಸ್ಟ್​ ತಿಂಗಳಲ್ಲಿ ಕೊರೊನಾ ಕೇಸ್​ ಹೆಚ್ಚಳವಾಗುವ ಬಗ್ಗೆ ಮಾಹಿತಿ ಇದೆ. ಸೋಂಕಿತರ ಕರೆಗೆ ತಕ್ಷಣ ಸ್ಪಂದಿಸಲು PROಗಳ ನೇಮಕ ಮಾಡಲಾಗುತ್ತೆ. ಸೋಂಕಿತರಿಗೆ ಎಲ್ಲಿ ಅಡ್ಮಿಟ್ ಆಗಬೇಕೆಂಬ ಬಗ್ಗೆ ಮಾಹಿತಿ. ಆ ವಲಯದಲ್ಲಿ ಅಡ್ಮಿಟ್​ ಮಾಡಿಕೊಳ್ಳದಿದ್ದರೆ ಪುನಃ ಪಿಆರ್​ಒಗಳಿಗೆ ಕರೆ ಮಾಡಿ ದೂರು ನೀಡಬಹುದು.

ರೋಗ ಲಕ್ಷಣ ಇದ್ದರೆ ಆಸ್ಪತ್ರೆಗೆ ದಾಖಲು ಮಾಡುತ್ತೇವೆ. ಲಕ್ಷಣ ಇಲ್ಲದಿದ್ದರೆ ಕೊವಿಡ್ ಕೇರ್​ಸೆಂಟರ್​ಗೆ ದಾಖಲು ಮಾಡಲಾಗುತ್ತೆ. ಎಲ್ಲ ಆಸ್ಪತ್ರೆಗಳ ಬೆಡ್​ಗೆ ನಂಬರಿಂಗ್ ಮಾಡುತ್ತಿದ್ದೇವೆ. ಕೊವಿಡ್ ಕೇಂದ್ರದಲ್ಲಿ ಕೆಲಸ ಮಾಡುವವರಿಗೆ ಕ್ವಾರಂಟೈನ್ ಮಾಡುತ್ತೇವೆ.

ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರ ವೇತನ ಹೆಚ್ಚಳ ಕ್ವಾರಂಟೈನ್​ ಕೇಂದ್ರದ ಬಳಿ ಸ್ಥಳೀಯರ ಧರಣಿ ಹಿನ್ನೆಲೆಯಲ್ಲಿ ಇನ್ನು ಮುಂದೆ ಆ ರೀತಿ ಆಗದಂತೆ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಭಯಭೀತರಾಗಿದ್ದಾರೆ. ಹಾಗಾಗಿ ಅವರ ವೇತನ ಹೆಚ್ಚಳ ಮಾಡಲು ಸಿಎಂ ಒಪ್ಪಿಗೆ ನೀಡಿದ್ದಾರೆ. ಪಿಪಿಇ ಕಿಟ್ ಬಳಸುವ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಗುಣಮಟ್ಟದ ಊಟ ನೀಡಲು ಈಗಾಗಲೇ ಸೂಚಿಸಲಾಗಿದೆ. ಈ ಸಂಬಂಧ ಇಸ್ಕಾನ್ ಜತೆ ಚರ್ಚಿಸಿ ಕ್ರಮ ಕೈಗೊಳ್ತೇವೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ