ವಿಜಯಪುರ: ಆರೋಗ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ತಾವು ಬಳಸಿದ PPE ಕಿಟ್ಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಹಾಗೇ ಬಿಸಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮನಗೂಳಿ ರಸ್ತೆಯಲ್ಲಿರುವ ಸ್ಮಶಾನದ ಬಳಿಯಲ್ಲೇ ಬಿಟ್ಟು ಹೋಗಿದ್ದು ಇದರಿಂದ PPE ಕಿಟ್ಗಳು ಗಾಳಿಗೆ ಅತ್ತಿತ್ತ ಹಾರಾಡುತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಯ್ತು.
PPE ಕಿಟ್ಗಳನ್ನು ಹಾಗೆಯೇ ಬಿಸಾಡಿ ಹೋಗಿದ್ದರಿಂದ ಅಲ್ಲಿಯೇ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬ ಅದನ್ನು ಧರಿಸಿ ಓಡಾಡಲು ಪ್ರಾರಂಭಿಸಿದ. ಇದನ್ನು ಕಂಡ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಯ್ತು. ಇನ್ನು ಈ ಬಗ್ಗೆ ಟಿವಿ9 ಸುದ್ಧಿ ಪ್ರಸಾರಮಾಡುತ್ತಿದ್ದಂತೆ ಕೂಡಲೆ ಎಚ್ಚೆತ್ತ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ PPE ಕಿಟ್ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕುವ ಮೂಲಕ ನಾಶಪಡಿಸಿದರು.