ಮನೇಲಿ ಒಬ್ಬನೇ ಅಡುಗೆ ಮಾಡ್ತಿದ್ದವನ ಮೇಲೆ ಕುಸಿದುಬಿತ್ತು ಮೇಲ್ಛಾವಣಿ, ಮುಂದೇನಾಯ್ತು?
ಬಾಗಲಕೋಟೆ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಮಾಳಿಗೆ ಮನೆಯೊಂದರ ಮೇಲ್ಛಾವಣಿ ಕುಸಿದು ವ್ಯಕ್ತಿಯೊಬ್ಬ ಸಿಲುಕಿಕೊಂಡ ಘಟನೆ ಜಮಖಂಡಿ ನಗರದ ಹುಲ್ಯಾಳಕರ್ ಗಲ್ಲಿಯಲ್ಲಿ ಸಂಭವಿಸಿದೆ. 35 ವರ್ಷದ ಪವನ್ ಸವದತ್ತಿ ಮನೆಯಲ್ಲಿ ಒಬ್ಬನೇ ಇದ್ದ ಕಾರಣ ತಾನೇ ಅಡುಗೆ ತಯಾರಿಸುತ್ತಿದ್ದನಂತೆ. ಈ ವೇಳೆ ಸತತ ಮಳೆಯಿಂದ ದುರ್ಬಲವಾಗಿದ್ದ ಮನೆಯ ಮೇಲ್ಛಾವಣಿ ದಿಢೀರ್ ಅಂತಾ ಪವನ್ ಮೇಲೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಪವನ್ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಪವನ್ರನ್ನು ರಕ್ಷಿಸಿದ್ದಾರೆ. ಮೇಲ್ಛಾವಣಿ ಕುಸಿತದಿಂದ […]

ಬಾಗಲಕೋಟೆ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಮಾಳಿಗೆ ಮನೆಯೊಂದರ ಮೇಲ್ಛಾವಣಿ ಕುಸಿದು ವ್ಯಕ್ತಿಯೊಬ್ಬ ಸಿಲುಕಿಕೊಂಡ ಘಟನೆ ಜಮಖಂಡಿ ನಗರದ ಹುಲ್ಯಾಳಕರ್ ಗಲ್ಲಿಯಲ್ಲಿ ಸಂಭವಿಸಿದೆ.
35 ವರ್ಷದ ಪವನ್ ಸವದತ್ತಿ ಮನೆಯಲ್ಲಿ ಒಬ್ಬನೇ ಇದ್ದ ಕಾರಣ ತಾನೇ ಅಡುಗೆ ತಯಾರಿಸುತ್ತಿದ್ದನಂತೆ. ಈ ವೇಳೆ ಸತತ ಮಳೆಯಿಂದ ದುರ್ಬಲವಾಗಿದ್ದ ಮನೆಯ ಮೇಲ್ಛಾವಣಿ ದಿಢೀರ್ ಅಂತಾ ಪವನ್ ಮೇಲೆ ಕುಸಿದುಬಿದ್ದಿದೆ.
ಅದೃಷ್ಟವಶಾತ್ ಪವನ್ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಪವನ್ರನ್ನು ರಕ್ಷಿಸಿದ್ದಾರೆ. ಮೇಲ್ಛಾವಣಿ ಕುಸಿತದಿಂದ ಕೊಂಚ ನಲುಗಿಹೋಗಿದ್ದ ಪವನ್ಗೆ ಸಣ್ಣಪುಟ್ಟ ಗಾಯಗಳಾಗಿದೆ.
Published On - 4:59 pm, Sun, 12 July 20