ಗೌರವಯುತವಾಗಿ ನೆರವೇರಿತು ಸೋಂಕಿತನ ಅಂತ್ಯಕ್ರಿಯೆ, ಎಲ್ಲಿ?
ಉಡುಪಿ: ಕೊರೊನಾ ಎಲ್ಲೆಡೆ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿನಿಂದ ಮೃತಪಡುತ್ತಿದ್ದವರ ಅಂತ್ಯಕ್ರಿಯೆ ನೆರವೇರಿಸುವ ವಿಧಾನ ಬಹಳಷ್ಟು ಕಡೆ ವಿರೋಧಕ್ಕೆ ಕಾರಣವಾಗಿತ್ತು. ಮೃತದೇಹ ಎಂಬ ಸಾಮಾನ್ಯ ಗೌರವವನ್ನೂ ನೀಡದೆ ಬೇಕಾಬಿಟ್ಟಿಯಾಗಿ ಸೋಂಕಿತರ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ ಇಲ್ಲಿ ಕೊವಿಡ್ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಿರುವ ಘಟನೆ ನಗರದ ಖಬರಸ್ಥಾನದಲ್ಲಿ ನಡೆದಿದೆ. 16 ಮಂದಿ ಯುವಕರ ತಂಡ ಪ್ರೊಟೋಕಾಲ್ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ದಾವಣಗೆರೆ ಮೂಲದ ವೃದ್ಧ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬಂದಿದ್ದಾಗ ಅವರಿಗೆ ಸೋಂಕು ತಗಲಿರುವುದು ಪತ್ತೆಯಾಗಿತ್ತು. […]

ಉಡುಪಿ: ಕೊರೊನಾ ಎಲ್ಲೆಡೆ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿನಿಂದ ಮೃತಪಡುತ್ತಿದ್ದವರ ಅಂತ್ಯಕ್ರಿಯೆ ನೆರವೇರಿಸುವ ವಿಧಾನ ಬಹಳಷ್ಟು ಕಡೆ ವಿರೋಧಕ್ಕೆ ಕಾರಣವಾಗಿತ್ತು. ಮೃತದೇಹ ಎಂಬ ಸಾಮಾನ್ಯ ಗೌರವವನ್ನೂ ನೀಡದೆ ಬೇಕಾಬಿಟ್ಟಿಯಾಗಿ ಸೋಂಕಿತರ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು.
ಆದರೆ ಇಲ್ಲಿ ಕೊವಿಡ್ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಿರುವ ಘಟನೆ ನಗರದ ಖಬರಸ್ಥಾನದಲ್ಲಿ ನಡೆದಿದೆ. 16 ಮಂದಿ ಯುವಕರ ತಂಡ ಪ್ರೊಟೋಕಾಲ್ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ದಾವಣಗೆರೆ ಮೂಲದ ವೃದ್ಧ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬಂದಿದ್ದಾಗ ಅವರಿಗೆ ಸೋಂಕು ತಗಲಿರುವುದು ಪತ್ತೆಯಾಗಿತ್ತು.
ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದರು. ಹೀಗಾಗಿ, PFI ಸಂಘಟನೆಗೆ ಸೇರಿದ್ದ ಯುವಕರ ತಂಡ ತರಬೇತಿ ಪಡೆದು, PPE ಕಿಟ್ ಧರಿಸಿ ಸಂಪ್ರದಾಯದ ಪ್ರಕಾರ ನಿಯಮಗಳನ್ನು ಪಾಲಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಾನವೀಯತೆ ಮೆರೆದ ಯುವಕರಿಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.


Published On - 4:07 pm, Sun, 12 July 20




