AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾನಿಟೈಸ್‌ ಆಗದ ಆ್ಯಂಬುಲೆನ್ಸ್ ಸಿಬ್ಬಂದಿಯ ಕಣ್ಣೀರ ಕಥೆ, ಕೇಳಿದ್ರೆ ನೀವೇ ಶಾಕ್‌ ಆಗ್ತಿರ

ಬೆಂಗಳೂರು: ಕೊರೊನಾ ಮಹಾಮಾರಿ ಎಲ್ಲೆಡೆ ತನ್ನ ಮಾಯಾಜಾಲವನ್ನ ಹರಡುತ್ತಿದೆ. ಬಡವರು ಬಲ್ಲಿದರು ಎಂದು ಭೇದ ಭಾವವಿಲ್ಲದೆ ಸಿಕ್ಕ ಸಿಕ್ಕವರಿಗೆಲ್ಲಾ ತಗಲಾಕಿಕೊಳ್ಳುತ್ತಿದೆ. ಈಗ ಆ್ಯಂಬುಲೆನ್ಸ್ ಸಿಬ್ಬಂದಿಯನ್ನೂ ಬಿಡುತ್ತಿಲ್ಲ ಹೆಮ್ಮಾರಿ. ಹೌದು ಯಾರಿಗಾದರೂ ಆರೋಗ್ಯ ಸಮಸ್ಯೆಯಾದ್ರೆ ತಕ್ಷಣವೇ ಕರೆಯೋದು ಆ್ಯಂಬುಲೆನ್ಸ್ ಅನ್ನು. ಆದ್ರೆ ಈ ಆ್ಯಂಬುಲೆನ್ಸ್ ಸಿಬ್ಬಂದಿಗೆ ಆರೋಗ್ಯ ಸಮಸ್ಯೆಯಾದ್ರೆ ಅವರು ಯಾರಿಗೆ ಹೇಳೋದು. ಜನರ ಆರೋಗ್ಯ ಸಮಸ್ಯೆಗೆ ಕರೆದ ತಕ್ಷಣವೇ ಒಡೋಡಿ ಬರುವ ಅಂಬುಲೆನ್ಸ್ ಡ್ರೈವರ್ಗಳೇ ಈಗ ಕೊರೊನಾ ಸಂಕಷ್ಟದಲ್ಲಿದ್ದಾರೆ. 15 ಜನ 108 ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ಕೊರೊನಾ […]

ಸ್ಯಾನಿಟೈಸ್‌ ಆಗದ ಆ್ಯಂಬುಲೆನ್ಸ್ ಸಿಬ್ಬಂದಿಯ ಕಣ್ಣೀರ ಕಥೆ, ಕೇಳಿದ್ರೆ ನೀವೇ ಶಾಕ್‌ ಆಗ್ತಿರ
Guru
| Edited By: |

Updated on:Jul 12, 2020 | 6:31 PM

Share

ಬೆಂಗಳೂರು: ಕೊರೊನಾ ಮಹಾಮಾರಿ ಎಲ್ಲೆಡೆ ತನ್ನ ಮಾಯಾಜಾಲವನ್ನ ಹರಡುತ್ತಿದೆ. ಬಡವರು ಬಲ್ಲಿದರು ಎಂದು ಭೇದ ಭಾವವಿಲ್ಲದೆ ಸಿಕ್ಕ ಸಿಕ್ಕವರಿಗೆಲ್ಲಾ ತಗಲಾಕಿಕೊಳ್ಳುತ್ತಿದೆ. ಈಗ ಆ್ಯಂಬುಲೆನ್ಸ್ ಸಿಬ್ಬಂದಿಯನ್ನೂ ಬಿಡುತ್ತಿಲ್ಲ ಹೆಮ್ಮಾರಿ.

ಹೌದು ಯಾರಿಗಾದರೂ ಆರೋಗ್ಯ ಸಮಸ್ಯೆಯಾದ್ರೆ ತಕ್ಷಣವೇ ಕರೆಯೋದು ಆ್ಯಂಬುಲೆನ್ಸ್ ಅನ್ನು. ಆದ್ರೆ ಈ ಆ್ಯಂಬುಲೆನ್ಸ್ ಸಿಬ್ಬಂದಿಗೆ ಆರೋಗ್ಯ ಸಮಸ್ಯೆಯಾದ್ರೆ ಅವರು ಯಾರಿಗೆ ಹೇಳೋದು. ಜನರ ಆರೋಗ್ಯ ಸಮಸ್ಯೆಗೆ ಕರೆದ ತಕ್ಷಣವೇ ಒಡೋಡಿ ಬರುವ ಅಂಬುಲೆನ್ಸ್ ಡ್ರೈವರ್ಗಳೇ ಈಗ ಕೊರೊನಾ ಸಂಕಷ್ಟದಲ್ಲಿದ್ದಾರೆ. 15 ಜನ 108 ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ರೆ ಚಿಕಿತ್ಸೆ ಕೊಡಿಸಬೇಕಿದ್ದ ಜಿ.ವಿ.ಕೆ ಕಂಪನಿ ಕ್ಯಾರೆ ಎನ್ನತ್ತಿಲ್ಲ.

ಈ 15 ಜನರಲ್ಲಿ ಕೆಲವರು ಡಿಸ್ಚಾರ್ಜ್ ಆಗಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಮಿಕ್ಕವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಜಿವಿಕೆ ಕಂಪನಿ ಮಾತ್ರ ಇವರಿಗೆ ಯಾವುದೇ ವ್ಯವಸ್ಥೆ ಮಾಡುತ್ತಿಲ್ವಂತೆ. ಇನ್ನೊಂದೆಡೆ ಕೊರೊನಾ ಪಾಸಿಟಿವ್ ಬಂದು ಡಿಸ್ಚಾರ್ಜ್ ಆದವರನ್ನು ಜನರು ಊರಿನೊಳಗೆ ಸೇರಿಸಿಕೊಳ್ಳುತ್ತಿಲ್ಲ. ಕ್ವಾರಂಟೈನ್ ನಲ್ಲಿರಲು ಜಿವಿಕೆ ಕಂಪನಿ ಯಾವುದೇ ಸವಲತ್ತುಗಳನ್ನು ಕೊಡದೆ ನೀವೇ ನಿಮ್ಮ ಸ್ವಂತಕ್ಕೆ ಎಲ್ಲಿಯಾದ್ರು ವ್ಯವಸ್ಥೆ ಮಾಡಿಕೊಳ್ಳಿ ಅಂತಿದ್ದಾರೆಂದು ಡ್ರೈವರ್‌ಗಳು ಅವಲತ್ತುಕೊಂಡಿದ್ದಾರೆ.

ಇದರ ಜೊತೆಗೆ ಒಂದು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ, ಕೇಳಿದ್ರೆ ಸರ್ಕಾರದಿಂದ ಇನ್ನೂ ಬಿಲ್ ಆಗಿಲ್ಲ ಅಂತಿದ್ದಾರೆ. ಪ್ರತಿದಿನ ಕೊರೊನಾ ಸೋಂಕಿತರನ್ನು ಕರೆದುಕೊಂಡು ಹೋಗುವ ಆ್ಯಂಬುಲೆನ್ಸ್ ಚಾಲಕರಿಗೆ, ಸ್ಟಾಫ್ ನರ್ಸ್‌ಗಳಿಗೆ ಸರಿಯಾಗಿ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿಲ್ಲ. ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ ಮೇಲೆ ಆ್ಯಂಬುಲೆನ್ಸ್ ಗಳನ್ನು ಸ್ಯಾನಿಟೈಸ್ ಮಾಡಬೇಕು. ಆದ್ರೆ ಜಿವಿಕೆ ಕಂಪನಿ ಅದನ್ನು ಕೂಡಾ ಮಾಡುತ್ತಿಲ್ಲ ಎನ್ನುವ ಆಘಾತಕಾರಿ ವಿಷಯವನ್ನ ಸಿಬ್ಬಿಂದಿ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 711. 108 ಆ್ಯಂಬುಲೆನ್ಸ್ ಗಳಿದ್ದು, 3500 ನೌಕರರಿದ್ದಾರೆ.

Published On - 5:15 pm, Sun, 12 July 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್