ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಆ್ಯಂಬುಲೆನ್ಸ್ ಚಾಲಕರೇ ಇಲ್ಲ, ಏಕೆ?
ಬಾಗಲಕೋಟೆ: ಜಿಲ್ಲೆಯ ಇಳಕಲ್ ನಗರದಲ್ಲಿ ಕೊರೊನಾ ದಿನೇ ದಿನೆ ಹೆಚ್ಚುತ್ತಲೆ ಇದೆ. ಆದರೆ, ಸೋಂಕಿತರನ್ನ ಕೊವಿಡ್ ಆಸ್ಪತ್ರೆಗೆ ಕರೆದೊಯ್ಯಲು ಌಂಬುಲೆನ್ಸ್ಗಳೇ ಇಲ್ಲದಂತ್ತಾಗಿರುವುದು ಇಳಕಲ್ ತಾಲೂಕು ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ. ವಿಷಯ ಏನಪ್ಪಾ ಅಂದ್ರೆ.. ಈಗಾಗಲೇ ನಗರದ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸೋಂಕು ದೃಢವಾಗಿದ್ದು, ಸದ್ಯಕ್ಕೆ ಕ್ವಾರಂಟೈನ್ನಲ್ಲಿ ಇದ್ದಾರೆ. ಇದರಲ್ಲಿ ಆಸ್ಪತ್ರೆಯ ಌಂಬುಲೆನ್ಸ್ ಚಾಲಕರು ಕೂಡ ಇದ್ದಾರೆ. ಹೀಗಾಗಿ, ನಗರದಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಌಂಬುಲೆನ್ಸ್ ಚಾಲಕರೇ ಇಲ್ಲದಂತ್ತಾಗಿದೆ. ಮತ್ತೊಂದೆಡೆ ಸೋಂಕಿತರ ಕುಟುಂಬಸ್ಥರನ್ನ […]

ಬಾಗಲಕೋಟೆ: ಜಿಲ್ಲೆಯ ಇಳಕಲ್ ನಗರದಲ್ಲಿ ಕೊರೊನಾ ದಿನೇ ದಿನೆ ಹೆಚ್ಚುತ್ತಲೆ ಇದೆ. ಆದರೆ, ಸೋಂಕಿತರನ್ನ ಕೊವಿಡ್ ಆಸ್ಪತ್ರೆಗೆ ಕರೆದೊಯ್ಯಲು ಌಂಬುಲೆನ್ಸ್ಗಳೇ ಇಲ್ಲದಂತ್ತಾಗಿರುವುದು ಇಳಕಲ್ ತಾಲೂಕು ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ವಿಷಯ ಏನಪ್ಪಾ ಅಂದ್ರೆ.. ಈಗಾಗಲೇ ನಗರದ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸೋಂಕು ದೃಢವಾಗಿದ್ದು, ಸದ್ಯಕ್ಕೆ ಕ್ವಾರಂಟೈನ್ನಲ್ಲಿ ಇದ್ದಾರೆ. ಇದರಲ್ಲಿ ಆಸ್ಪತ್ರೆಯ ಌಂಬುಲೆನ್ಸ್ ಚಾಲಕರು ಕೂಡ ಇದ್ದಾರೆ. ಹೀಗಾಗಿ, ನಗರದಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಌಂಬುಲೆನ್ಸ್ ಚಾಲಕರೇ ಇಲ್ಲದಂತ್ತಾಗಿದೆ.
ಮತ್ತೊಂದೆಡೆ ಸೋಂಕಿತರ ಕುಟುಂಬಸ್ಥರನ್ನ ಕ್ವಾರಂಟೈನ್ಗೆ ಸ್ಥಳಾಂತರಿಸಲು ವಾಹನ ಚಾಲಕರು ಸಹ ಸಿಗುತ್ತಿಲ್ಲ. ಆದ್ದರಿಂದ, ಇಳಕಲ್ ತಾಲೂಕು ಆಡಳಿತ ಹಾಗೋ ಹೀಗೋ ಖಾಸಗಿ ವಾಹನ ಚಾಲಕರ ಮನವೊಲಿಸಿ ಅವರ ನೆರವಿನಿಂದ ಸೋಂಕಿತರನ್ನು ಕ್ವಾರಂಟೈನ್ಗೆ ಸ್ಥಳಾಂತರ ಮಾಡುತ್ತಿದೆ.
Published On - 5:21 pm, Sun, 12 July 20




