ಶಿರಾದಲ್ಲಿ JDS ಸಮಾವೇಶ: ಸಾಮಾಜಿಕ ಜವಾಬ್ದಾರಿ ಮರೆತ ನಾಯಕರು!

ತುಮಕೂರು: ಶಿರಾ ಉಪ ಚುನಾವಣೆ ಘೋಷಣೆಯಾದ ಬಳಿಕ ರಾಜಕಾರಣಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಉಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೆ ಇಂದು ತುಮಕೂರು ಜಿಲ್ಲೆ ಶಿರಾದಲ್ಲಿ JDS ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ. ಆದರೆ ಸಮಾವೇಶದಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆ ಆಗಿದೆ. ದೈಹಿಕ ಅಂತರ ಮರೆತು ಕಾರ್ಯಕರ್ತರು ಜಮಾಯಿಸಿದ್ದಾರೆ. ಸಮಾವೇಶದ ವೇದಿಕೆಯ ಮೇಲೂ ದೈಹಿಕ ಅಂತರವಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. ಸಮಾವೇಶಕ್ಕೂ […]

ಶಿರಾದಲ್ಲಿ JDS ಸಮಾವೇಶ: ಸಾಮಾಜಿಕ ಜವಾಬ್ದಾರಿ ಮರೆತ ನಾಯಕರು!
Edited By:

Updated on: Sep 30, 2020 | 2:00 PM

ತುಮಕೂರು: ಶಿರಾ ಉಪ ಚುನಾವಣೆ ಘೋಷಣೆಯಾದ ಬಳಿಕ ರಾಜಕಾರಣಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಉಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೆ ಇಂದು ತುಮಕೂರು ಜಿಲ್ಲೆ ಶಿರಾದಲ್ಲಿ JDS ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ. ಆದರೆ ಸಮಾವೇಶದಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆ ಆಗಿದೆ.

ದೈಹಿಕ ಅಂತರ ಮರೆತು ಕಾರ್ಯಕರ್ತರು ಜಮಾಯಿಸಿದ್ದಾರೆ. ಸಮಾವೇಶದ ವೇದಿಕೆಯ ಮೇಲೂ ದೈಹಿಕ ಅಂತರವಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.

ಸಮಾವೇಶಕ್ಕೂ ಮುನ್ನ ದಿವಂಗತ ಶಾಸಕ ಸತ್ಯನಾರಾಯಣ ಸಮಾಧಿಗೆ ಭೇಟಿ
JDS ಕಾರ್ಯಕರ್ತರ ಸಮಾವೇಶಕ್ಕೆ ಬರುವ ಮುನ್ನ ಹೆಚ್​ಡಿ ಕುಮಾರಸ್ವಾಮಿ ದಿವಂಗತ ಶಾಸಕ ಸತ್ಯನಾರಾಯಣ ರವರ ಸಮಾಧಿಗೆ ಭೇಟಿ ನೀಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ದಿವಂಗತ ಶಾಸಕ ಸತ್ಯನಾರಾಯಣ ರವರ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿದ್ದಾರೆ.