ಮಗುವಿಗೆ ಚಿಕಿತ್ಸೆ ನೀಡುವುದು ವಿಳಂಬವಾಗಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಮೇಲೆಯೇ ಹಲ್ಲೆ

ಆನೇಕಲ್:ಮಗುವಿಗೆ ಚಿಕಿತ್ಸೆ ನೀಡುವುದು ವಿಳಂಬವಾಗಿದ್ದಕ್ಕೆ ಕೋಪಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಯ ಸಿಬ್ಬಂದಿ ಮೇಲೆ‌ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿನ ಸುಹಾಸ್ ಆಸ್ಪತ್ರೆ ನೆಡೆದಿದೆ. ಮಗುವಿಗೆ ನಾಲಿಗೆಗೆ ಗಾಯವಾಗಿದ್ದರಿಂದ ಪೋಷಕರು ಮಗುವನ್ನ ಜಿಗಣಿಯಲ್ಲಿನ ಸುಹಾಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ಕೊರೊನಾ ಸಂಬಂಧಿತ ಮೀಟಿಂಗ್ ನಡೆಯುತ್ತಿದ್ದರಿಂದ ಮಗುವಿಗೆ ಚಿಕಿತ್ಸೆ ನೀಡಲು ವೈದ್ಯರು ಸ್ವಲ್ಪ ತಡಮಾಡಿದ್ದಾರೆ ಇದರಿಂದ ಕೋಪಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಯ ಸಿಬ್ಬಂದಿ ಮೇಲೆ‌ ಹಲ್ಲೆ ಮಾಡಿದ್ದಾರೆ. […]

ಮಗುವಿಗೆ ಚಿಕಿತ್ಸೆ ನೀಡುವುದು ವಿಳಂಬವಾಗಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಮೇಲೆಯೇ ಹಲ್ಲೆ
Edited By:

Updated on: Jul 19, 2020 | 12:29 PM

ಆನೇಕಲ್:ಮಗುವಿಗೆ ಚಿಕಿತ್ಸೆ ನೀಡುವುದು ವಿಳಂಬವಾಗಿದ್ದಕ್ಕೆ ಕೋಪಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಯ ಸಿಬ್ಬಂದಿ ಮೇಲೆ‌ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿನ ಸುಹಾಸ್ ಆಸ್ಪತ್ರೆ ನೆಡೆದಿದೆ.

ಮಗುವಿಗೆ ನಾಲಿಗೆಗೆ ಗಾಯವಾಗಿದ್ದರಿಂದ ಪೋಷಕರು ಮಗುವನ್ನ ಜಿಗಣಿಯಲ್ಲಿನ ಸುಹಾಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ಕೊರೊನಾ ಸಂಬಂಧಿತ ಮೀಟಿಂಗ್ ನಡೆಯುತ್ತಿದ್ದರಿಂದ ಮಗುವಿಗೆ ಚಿಕಿತ್ಸೆ ನೀಡಲು ವೈದ್ಯರು ಸ್ವಲ್ಪ ತಡಮಾಡಿದ್ದಾರೆ ಇದರಿಂದ ಕೋಪಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಯ ಸಿಬ್ಬಂದಿ ಮೇಲೆ‌ ಹಲ್ಲೆ ಮಾಡಿದ್ದಾರೆ. ತಡ ರಾತ್ರಿ ಈ ಘಟನೆ ನೆಡೆದಿದ್ದು, ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 12:29 pm, Sun, 19 July 20