ಅರ್ಕಾವತಿ ನದಿ ದಾಟುವಾಗ ಕೊಚ್ಚಿಹೋದ ವ್ಯಕ್ತಿ ಶವ ಪತ್ತೆ: ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ
ರಾಮನಗರ: ಅರ್ಕಾವತಿ ನದಿ ದಾಟುವಾಗ ಕೊಚ್ಚಿಹೋಗಿದ್ದ ವ್ಯಕ್ತಿಯ ದೇಹ ಪತ್ತೆಯಾಗಿದೆ. ನೀರುಪಾಲಾಗಿದ್ದ ಅಬ್ದುಲ್ ವಾಜೀದ್(43) ಮೃತದೇಹ ಪತ್ತೆಯಾಗಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮನಗರ ತಾಲೂಕಿನ ಸಬ್ಬಕೆರೆ ನಿವಾಸಿ ಅಬ್ದುಲ್ ವಾಜೀದ್ ಹುಲಿಕೆರೆ ಬಳಿ ಅರ್ಕಾವತಿ ನದಿ ದಾಟುವಾಗ ಕೊಚ್ಚಿಹೋಗಿದ್ದರು. ಸದ್ಯ ಶೋಧಕಾರ್ಯದ ಬಳಿಕ ವ್ಯಕ್ತಿಯ ಮೃತ ದೇಹ ಸಿಕ್ಕಿದೆ. ಆದರೆ ಸ್ಥಳೀಯರು ಪೊಲೀಸರಿಂದ ಶವ ಪಡೆದು ರಾಮನಗರ-ಕನಕಪುರ ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ನದಿಗೆ ಸೇತುವೆ ನಿರ್ಮಿಸದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿ […]

ರಾಮನಗರ: ಅರ್ಕಾವತಿ ನದಿ ದಾಟುವಾಗ ಕೊಚ್ಚಿಹೋಗಿದ್ದ ವ್ಯಕ್ತಿಯ ದೇಹ ಪತ್ತೆಯಾಗಿದೆ. ನೀರುಪಾಲಾಗಿದ್ದ ಅಬ್ದುಲ್ ವಾಜೀದ್(43) ಮೃತದೇಹ ಪತ್ತೆಯಾಗಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮನಗರ ತಾಲೂಕಿನ ಸಬ್ಬಕೆರೆ ನಿವಾಸಿ ಅಬ್ದುಲ್ ವಾಜೀದ್ ಹುಲಿಕೆರೆ ಬಳಿ ಅರ್ಕಾವತಿ ನದಿ ದಾಟುವಾಗ ಕೊಚ್ಚಿಹೋಗಿದ್ದರು. ಸದ್ಯ ಶೋಧಕಾರ್ಯದ ಬಳಿಕ ವ್ಯಕ್ತಿಯ ಮೃತ ದೇಹ ಸಿಕ್ಕಿದೆ. ಆದರೆ ಸ್ಥಳೀಯರು ಪೊಲೀಸರಿಂದ ಶವ ಪಡೆದು ರಾಮನಗರ-ಕನಕಪುರ ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ನದಿಗೆ ಸೇತುವೆ ನಿರ್ಮಿಸದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿ ಆಕ್ರೋಶ ಹೊರ ಹಾಕಿದ್ದಾರೆ.