ಇಲ್ಲಿ ಕೊರೊನಾ ಟೆಸ್ಟ್​ಗೆ ಹೋದ್ರೆ.. ಸಿಗೋದು ಬರೀ ಪಾಸಿಟಿವ್ ರಿಪೋರ್ಟ್

ಇಲ್ಲಿ ಕೊರೊನಾ ಟೆಸ್ಟ್​ಗೆ ಹೋದ್ರೆ.. ಸಿಗೋದು ಬರೀ ಪಾಸಿಟಿವ್ ರಿಪೋರ್ಟ್

ಬೆಂಗಳೂರು: ನಗರದಲ್ಲಿ ಮತ್ತೊಂದು ಖಾಸಗಿ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ಈ ಆಸ್ಪತ್ರೆ ರೋಗಿಗಳ ರಿಪೋರ್ಟ್​ನಲ್ಲೇ ಕಳ್ಳಾಟವಾಡ್ತಿದೆಯಂತೆ? ಕೊರೊನಾ ಟೆಸ್ಟ್​ಗೆ ಹೋದ್ರೆ ಪಾಸಿಟಿವ್ ರಿಪೋರ್ಟ್ ನೀಡುತ್ತಿದ್ದಾರಂತೆ. ರಾಜಾಜಿನಗರದಲ್ಲಿರೋ ಸುಗುಣ ಆಸ್ಪತ್ರೆಯ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 4 ವರ್ಷದ ಮಗುವಿಗೆ ಟೆಸ್ಟ್ ಮಾಡಿ ಕೊರೊನಾ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ ಎಂದು ಮಗು ತಾಯಿ ಆರೋಪ ಮಾಡಿದ್ದಾರೆ. ಸುಗುಣ ಆಸ್ಪತ್ರೆ ಬಿಟ್ಟು ಬೇರೆ ಲ್ಯಾಬ್​ನಲ್ಲಿ ಟೆಸ್ಟ್ ಮಾಡಿಸಿದಾಗ ಮಗು, ತಂದೆ-ತಾಯಿಗೆ ನೆಗೆಟಿವ್ ಬಂದಿದೆ. […]

Ayesha Banu

|

Jul 30, 2020 | 3:47 PM

ಬೆಂಗಳೂರು: ನಗರದಲ್ಲಿ ಮತ್ತೊಂದು ಖಾಸಗಿ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ಈ ಆಸ್ಪತ್ರೆ ರೋಗಿಗಳ ರಿಪೋರ್ಟ್​ನಲ್ಲೇ ಕಳ್ಳಾಟವಾಡ್ತಿದೆಯಂತೆ? ಕೊರೊನಾ ಟೆಸ್ಟ್​ಗೆ ಹೋದ್ರೆ ಪಾಸಿಟಿವ್ ರಿಪೋರ್ಟ್ ನೀಡುತ್ತಿದ್ದಾರಂತೆ. ರಾಜಾಜಿನಗರದಲ್ಲಿರೋ ಸುಗುಣ ಆಸ್ಪತ್ರೆಯ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 4 ವರ್ಷದ ಮಗುವಿಗೆ ಟೆಸ್ಟ್ ಮಾಡಿ ಕೊರೊನಾ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ ಎಂದು ಮಗು ತಾಯಿ ಆರೋಪ ಮಾಡಿದ್ದಾರೆ. ಸುಗುಣ ಆಸ್ಪತ್ರೆ ಬಿಟ್ಟು ಬೇರೆ ಲ್ಯಾಬ್​ನಲ್ಲಿ ಟೆಸ್ಟ್ ಮಾಡಿಸಿದಾಗ ಮಗು, ತಂದೆ-ತಾಯಿಗೆ ನೆಗೆಟಿವ್ ಬಂದಿದೆ. ಆದ್ರೆ ಸುಗುಣ ಆಸ್ಪತ್ರೆ ಸಿಬ್ಬಂದಿ ಮಗುವಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಅಡ್ಮಿಟ್ ಮಾಡಿಕೊಂಡಿದ್ದಾರೆ. ಹಣ ಕಸಿಯಲು ಪಾಸಿಟಿವ್ ರಿಪೋರ್ಟ್ ನೀಡ್ತಾಯಿದಿಯಾ ಸುಗುಣ ಆಸ್ಪತ್ರೆ ಎಂಬ ಪ್ರಶ್ನೆ ಎದ್ದಿದೆ.

ಮಗುವಿನ ಸ್ಥಿತಿ ಕಂಡು ತಾಯಿ ಕಣ್ಣೀರಿಟ್ಟಿದ್ದಾರೆ. ಸುಗುಣ ಆಸ್ಪತ್ರೆಗೆ ಬರುವ ಎಲ್ಲರ ರಿಪೋರ್ಟ್​ನಲ್ಲೂ ಇದೇ ರೀತಿ ಯಾಮಾರಿಸಲಾಗ್ತಿದೆ ಅಂತ ಮಗುವಿನ ತಾಯಿ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಮ್ಮಿಂದ ಯಾವ ತಪ್ಪೂ ಆಗಿಲ್ಲ ಸುಗಣ ಆಸ್ಪತ್ರೆಯಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಲ್ಲ. ಕೇವಲ ಸ್ವ್ಯಾಬ್ ತೆಗೆದು ನಾರಯಣ ನೇತ್ರಾಲಯಕ್ಕೆ ಕಳುಹಿಸಲಾಗುತ್ತೆ. ನಮ್ಮ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ಅಲ್ಲಿಂದ ಬರುವ ವರದಿಯನ್ನಷ್ಟೆ ರೋಗಿಗೆ ಕೊಡುತ್ತೇವೆ. ನಮ್ಮ ಮೇಲೆ ಮಾಡಿರುವ ಆರೋಪ ಸುಳ್ಳು ಅಂತಾ ಸುಗಣ ಆಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ ಟಿವಿ9ಗೆ ಸ್ಪಷ್ಟ ಪಡಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada