ಡೆಡ್ಲಿ ಸರ್ಕಲ್​ನಲ್ಲಿ.. ವಾರದಲ್ಲೆರಡು ಡೆಡ್ಲಿ ಅಪಘಾತಗಳು ಗ್ಯಾರಂಟಿ!

ಡೆಡ್ಲಿ ಸರ್ಕಲ್​ನಲ್ಲಿ.. ವಾರದಲ್ಲೆರಡು ಡೆಡ್ಲಿ ಅಪಘಾತಗಳು ಗ್ಯಾರಂಟಿ!

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲೂ ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಎಂ.ಎಸ್ ಪಾಳ್ಯ ಸರ್ಕಲ್​ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ವಾರದಲ್ಲಿ ಕನಿಷ್ಠ ಎರಡು ಅಪಘಾತಗಳಾದ್ರೂ ಈ ಡೆಡ್ಲಿ ಸರ್ಕಲ್​ನಲ್ಲಿ ನಡೆಯುತ್ತವೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಎಂ.ಎಸ್ ಪಾಳ್ಯದ ಬಳಿ ಕಳೆದ ರಾತ್ರಿ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸ್ಟ್ರೀಟ್ ಲೈಟ್ ಇಲ್ಲದ ಕಾರಣ ಮತ್ತು ಮಳೆ ಬಂದ ಹಿನ್ನೆಲೆಯಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಆದರೆ ಈ […]

Ayesha Banu

| Edited By: sadhu srinath

Jul 30, 2020 | 11:08 AM

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲೂ ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಎಂ.ಎಸ್ ಪಾಳ್ಯ ಸರ್ಕಲ್​ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ವಾರದಲ್ಲಿ ಕನಿಷ್ಠ ಎರಡು ಅಪಘಾತಗಳಾದ್ರೂ ಈ ಡೆಡ್ಲಿ ಸರ್ಕಲ್​ನಲ್ಲಿ ನಡೆಯುತ್ತವೆ.

ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಎಂ.ಎಸ್ ಪಾಳ್ಯದ ಬಳಿ ಕಳೆದ ರಾತ್ರಿ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸ್ಟ್ರೀಟ್ ಲೈಟ್ ಇಲ್ಲದ ಕಾರಣ ಮತ್ತು ಮಳೆ ಬಂದ ಹಿನ್ನೆಲೆಯಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.

ಆದರೆ ಈ ರೀತಿ ವಾರದಲ್ಲಿ ಎರಡು ಪ್ರಕರಣಗಳಾದ್ರೂ ಇಲ್ಲಿ ದಾಖಲಾಗುತ್ತವೆ. ವಾಹನಗಳು ನೇರವಾಗಿ ಬಂದು ಡಿವೈಡರ್​ ಗೆ ಡಿಕ್ಕಿ ಹೊಡೆಯುತ್ತವೆ. ಕಾರು ಲಾರಿ ಸೇರಿದಂತೆ ಹಲವು ವಾಹನಗಳು ಇಲ್ಲಿ ಅಫಘಾತಕ್ಕೆ ಒಳಗಾಗಿವೆ.

Follow us on

Related Stories

Most Read Stories

Click on your DTH Provider to Add TV9 Kannada