ಮದ್ಯ ಸಿಗದಿದ್ದಕ್ಕೆ ಧಾರವಾಡದಲ್ಲಿ ಸಂಶೋಧನಾ ವಿದ್ಯಾರ್ಥಿ ಮಾಡಿದ್ದೇನು ಗೊತ್ತಾ?

ಮದ್ಯ ಸಿಗದಿದ್ದಕ್ಕೆ ಧಾರವಾಡದಲ್ಲಿ ಸಂಶೋಧನಾ ವಿದ್ಯಾರ್ಥಿ ಮಾಡಿದ್ದೇನು ಗೊತ್ತಾ?

ಧಾರವಾಡ: ಲಾಕ್​ಡೌನ್​ನಿಂದ ಮದ್ಯ ಮಾರಾಟ ಸ್ಥಗಿತ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಸ್ಯಾನಿಟೈಸರ್ ಕುಡಿದು ಸಂಶೋಧನಾ ವಿದ್ಯಾರ್ಥಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸುದೀಪ್ ಕರಿಯಣ್ಣ(29) ಮೃತ ದುರ್ದೈವಿ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಪಟ್ಟಣದ ನಿವಾಸಿ ಸುದೀಪ್ ಕರಿಯಣ್ಣ, ಧಾರವಾಡದ ಹೊಯ್ಸಳನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಸುದೀಪ್ ಮೃತದೇಹದ ಬಳಿ 2 ಸ್ಯಾನಿಟೈಸರ್ ಬಾಟಲಿ ಪತ್ತೆಯಾಗಿದೆ. ಅಲ್ಲದೆ ಸುದೀಪ್​ಗೆ ಪ್ರತಿದಿನವೂ ಮದ್ಯ ಸೇವಿಸುವ ಅಭ್ಯಾಸವಿತ್ತು. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 5:03 pm, Mon, 27 April 20

Click on your DTH Provider to Add TV9 Kannada